ಸಿದ್ದಾಪುರ, ಆ. ೧೨: ಮೇಯಲು ಬಿಟ್ಟ ಜಾನುವಾರುಗಳು ಕಾಣೆಯಾಗಿರುವ ಬಗ್ಗೆ ಜಾನುವಾರುಗಳ ಮಾಲೀಕ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಿದ್ದಾಪುರದ ಎಂ ಜಿ ರಸ್ತೆಯ ನಿವಾಸಿ ನಾರಾಯಣ ಕುಟ್ಟಿ ಎಂಬವರಿಗೆ ಸೇರಿದ ಮೂರು ಜಾನುವಾರುಗಳನ್ನು ಕಳೆದ ನಾಲ್ಕು ದಿನಗಳ ಹಿಂದೆ ಸಿದ್ದಾಪುರದ ರಸ್ತೆ ಬದಿಯಲ್ಲಿ ಮೇಯಲು ಬಿಟ್ಟಿದ್ದರು. ಇದೀಗ ಜಾನುವಾರುಗಳು ಕಾಣೆಯಾಗಿರುತ್ತದೆ ಎಂದು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಇವರಿಗೆ ಸೇರಿದ ಎರಡು ಕೋಣ ಮರಿಗಳು ಕಾಣೆಯಾಗಿವೆ, ಇದೀಗ ಮೂರು ಜಾನುವಾರುಗಳು ಕಾಣೆಯಾಗಿದ್ದು, ಪೊಲೀಸರು ಕೂಡಲೇ ಪತ್ತೆ ಹಚ್ಚಿ ಕೊಡಬೇಕೆಂದು ನಾರಾಯಣ ಒತ್ತಾಯಿಸಿದ್ದಾರೆ. ಗೋವುಗಳು ಕಳ್ಳತನ ವಾಗಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ.