ವೀರಾಜಪೇಟೆ, ಆ. ೧೨: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡಿನಲ್ಲಿ ಸರಕಾರ ಆದಿವಾಸಿಗಳಿಗೆಂದು ಮೀಸಲಿಟ್ಟಿದ್ದ ಏಳುವರೆ ಎಕರೆ ಪೈಸಾರಿ ಜಾಗಕ್ಕೆ ಖಾಸಗಿ ಕಂಪೆನಿಯೊAದು ಬೇಲಿ ಹಾಕುತ್ತಿರುವ ದೂರಿನ ಮೇರೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದಿವಾಸಿಗಳಿಗೆ ಗುರುತಿಸ ಲಾದ ಸ್ಥಳದ ಪಕ್ಕದಲ್ಲಿ ಕಂಪೆನಿ ಯೊಂದು ಬೇಲಿ ಹಾಕುತಿದೆ. ಅದನ್ನು ಕೂಡಲೇ ತೆರವುಗೊಳಿ ಸುವಂತೆ ಆಗ್ರಹಿಸಿ ಆದಿವಾಸಿ ಸಂಘರ್ಷ ಮೋರ್ಚಾ ವತಿಯಿಂದ ತಾಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ರಾಮಚಂದ್ರ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ಈ ಸಂಬAಧ ಸರ್ವೆ ಕಾರ್ಯ ನಡೆಸುವಂತೆ ತಹಶೀಲ್ದಾರರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಸರ್ವೆ ಆಗುವ ತನಕ ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸದಂತೆ ಖಾಸಗಿ ಜಾಗದ ಮಾಲೀಕರಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಅಲ್ಲದೆ ಇಲ್ಲಿ ನೆಲೆಸಿರುವ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳಿಲ್ಲ ಎಂದು ಆರೋಪಿಸಿ ರುವ ಹಿನ್ನೆಲೆಯಲ್ಲಿ ತಾಲೂಕು ತಹಶೀಲ್ದಾರ್ ಪರಿಶೀಲನೆ ನಡೆಸಿ ನೀರಿನ ತೊಂದರೆ ಇಲ್ಲ. ದಿನದ ೨೪ ಗಂಟೆಯೂ ನೀರು ದೊರೆಯುತ್ತದೆ, ಶೌಚಾಲಯಗಳು ಇವೆ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭ ಕಂದಾಯ ಇಲಾಖೆಯ ಪರಿವೀಕ್ಷಕ ಹರೀಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯಿತಿ ಸದಸ್ಯರು ಇದ್ದರು.