ದೆಹಲಿ ಸೇವಾ ಮಸೂದೆಗೆ ರಾಷ್ಟçಪತಿ ಅಂಕಿತ

ನವದೆಹಲಿ, ಆ. ೧೨: ರಾಷ್ಟç ರಾಜಧಾನಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗಳ ಮೇಲೆ ನಿಯಂತ್ರಣ ಹೊಂದುವ ಸಂಬAಧ ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಿದ್ದ ದೆಹಲಿ ಸೇವಾ ಮಸೂದೆಗೆ ರಾಷ್ಟçಪತಿ ದ್ರೌಪದಿ ಮುರ್ಮು ಅವರು ಶನಿವಾರ ಸಹಿ ಹಾಕಿದ್ದಾರೆ. ರಾಷ್ಟç ರಾಜಧಾನಿ ದೆಹಲಿ ಪ್ರದೇಶ ಸರ್ಕಾರ ತಿದ್ದುಪಡಿ ಮಸೂದೆ ೨೦೨೩ಕ್ಕೆ ರಾಷ್ಟçಪತಿ ದ್ರೌಪದಿ ಮುರ್ಮು ಅವರು ಒಪ್ಪಿಗೆ ನೀಡಿದ್ದಾರೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ, ಈ ಮಸೂದೆಯು ಕಾನೂನಾಗುತ್ತದೆ ಮತ್ತು ಕೇಂದ್ರ ಸರ್ಕಾರ ದೆಹಲಿ ಆಡಳಿತ ಸೇವೆಗಳ ನಿಯಂತ್ರಣ ಸಂಬAಧ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಬದಲಾಯಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಳ್ಳು ಸುದ್ದಿ ಹರಡುವವರಿಗೆ ಜೈಲು ಶಿಕ್ಷೆ

ನವದೆಹಲಿ, ಆ. ೧೨: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಮಸೂದೆ ೨೦೨೩ ಅನ್ನು ಮಂಡಿಸಿದ್ದು, ಸುಳ್ಳು ಸುದ್ದಿ ಹರಡುವವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ. ಪ್ರಸ್ತಾವಿತ ಮಸೂದೆಯನ್ನು ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಕಳುಹಿಸಲಾಗಿದೆ. ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುವಂತಹ ‘ನಕಲಿ ಸುದ್ದಿ ಅಥವಾ ತಪ್ಪು ಮಾಹಿತಿಗಳನ್ನು' ಹರಡುವವರಿಗೆ ಸೆಕ್ಷನ್ ೧೯೫ ರ ಅಡಿಯಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ.

ಸೆಕ್ಷನ್ ೧೯೫(೧) ಡಿ ಪ್ರಕಾರ, "ಭಾರತದ ಸಾರ್ವಭೌಮತೆ ಏಕತೆ ಮತ್ತು ಸಮಗ್ರತೆ ಅಥವಾ ಭದ್ರತೆಗೆ ಧಕ್ಕೆ ತರುವಂತಹ ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಸಿದ್ಧಪಡಿಸಿದರೆ ಅಥವಾ ಪ್ರಕಟಿಸಿ ದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ" ಎಂದು ಪ್ರಸ್ತಾವಿತ ಕಾನೂನು ಹೇಳುತ್ತದೆ.

ಡಿಸೆಂಬರ್-ಜನವರಿಯಲ್ಲಿ ‘ಯುವನಿಧಿ' ಜಾರಿ

ಮೈಸೂರು, ಆ. ೧೨: ಪ್ರಸಕ್ತ ವರ್ಷ ಪದವಿ, ಡಿಪ್ಲೊಮಾ ಮುಗಿಸಿದ, ಇನ್ನೂ ಆರು ತಿಂಗಳೊಳಗೆ ಕೆಲಸ ಸಿಗದಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರದಿಂದ ಸಹಾಯ ಧನ ನೀಡುವ ಯುವನಿಧಿ ಯೋಜನೆಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಎರಡು ದಿನಗಳ ರಾಜ್ಯ ವಕೀಲರ ಸಮ್ಮೇಳನಕ್ಕೆ ಆಗಮಿಸಿದ್ದ ವೇಳೆ ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಪದವಿ ಗಳಿಸಿದ ನಿರುದ್ಯೋಗ ಯುವಕ-ಯುವತಿಯರಿಗೆ ಯುವನಿಧಿ ಯೋಜನೆಯಡಿ ತಿಂಗಳಿಗೆ ೩ ಸಾವಿರ ರೂಪಾಯಿಯನ್ನು ಮತ್ತು ಡಿಪ್ಲೊಮಾ ಪದವೀಧರರಿಗೆ ತಿಂಗಳಿಗೆ ಒಂದೂವರೆ ಸಾವಿರ ರೂಪಾಯಿಗಳನ್ನು ನೀಡುವ ಯೋಜನೆ ಇದಾಗಿರುತ್ತದೆ ಇನ್ನು ಆರು ತಿಂಗಳು ಎಂದರೆ ಡಿಸೆಂಬರ್, ಜನವರಿಯಾಗುತ್ತದೆ, ಆ ವೇಳೆಗೆ ಯುವನಿಧಿ ಯೋಜನೆ ಜಾರಿಗೆ ಬರುತ್ತದೆ ಎಂದರು. ಗೃಹಲಕ್ಷ್ಮೀ ಯೋಜನೆಗೆ ಈವರೆಗೆ ೧.೬ ಕೋಟಿ ಜನ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಕಾರ್ಯಕ್ಕೆ ಯಾವುದೇ ಸಮಯ ನಿಗದಿ ಇಲ್ಲ. ಈ ತಿಂಗಳಲ್ಲಿ ನೋಂದಣಿ ಮಾಡಿಸುವವರ ಸಂಖ್ಯೆ ಹೆಚ್ಚಬಹುದು. ಡಿಸೆಂಬರ್ ಅಥವಾ ಜನವರಿಯಲ್ಲಿ ಯುವನಿಧಿ ಯೋಜನೆ ಜಾರಿಯಾಗುತ್ತದೆ ಎಂದರು. ಈ ಬಾರಿ ಮುಂಗಾರು ಮಳೆ ಕೇರಳದಲ್ಲಿ ವಿಳಂಬವಾಗಿ ಕಡಿಮೆಯಾಗಿರುವುದರಿಂದ, ಕೊಡಗಿನಲ್ಲಿಯೂ ಕಡಿಮೆಯಾಗಿರುವುದ ರಿಂದ ಜಲಾಶಯಗಳಲ್ಲಿ ನೀರು ಕಡಿಮೆಯಾಗಿದೆ. ಇದುವರೆಗೆ ಹೆಚ್ಚುವರಿ ನೀರು ಬಂದರೆ ತಮಿಳು ನಾಡಿಗೆ ಬಿಡುತ್ತಿದ್ದೆವು. ಈ ಬಾರಿ ಹೆಚ್ಚುವರಿ ನೀರು ಬಿಡಲು ಆಗಲಿಲ್ಲ. ಹಾಗಾಗಿ ತಮಿಳು ನಾಡು ಸರ್ಕಾರ ತಗಾದೆ ತೆಗೆದಿದೆ, ನಮ್ಮ ರಾಜ್ಯದ ರೈತರ ಪರಿಸ್ಥಿತಿ ನೋಡಿಕೊಂಡು ನಾವು ನೀರು ಬಿಡುವ ಬಗ್ಗೆ ತೀರ್ಮಾನ ಮಾಡಬೇಕಾಗುತ್ತದೆ ಎಂದು ಹೇಳಿದರು.

೨೧ ಪಿಸ್ತೂಲ್‌ಗಳನ್ನು ಹೊಂದಿದ್ದ ವ್ಯಕ್ತಿಯ ಬಂಧನ

ನವದೆಹಲಿ, ಆ. ೧೨: ಸ್ವಾತಂತ್ರ‍್ಯ ದಿನಾಚರಣೆಗೂ ಮುನ್ನ, ದೆಹಲಿ ಪೊಲೀಸರ ವಿಶೇಷ ಘಟಕ, ೩೨ ವರ್ಷದ ವ್ಯಕ್ತಿಯನ್ನು ಬಂಧಿಸಿದ್ದು, ಆತನಿಂದ ೨೧ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಮಧ್ಯಪ್ರದೇಶದ ಸಾಗರ್ ನಿವಾಸಿ ಲಾಲ್ ಸಿಂಗ್ ಚಾದರ್ ತನ್ನ ತವರು ರಾಜ್ಯದ ಬುರ್ಹಾನ್‌ಪುರದಲ್ಲಿ ಅಕ್ರಮ ಶಸ್ತಾçಸ್ತçಗಳನ್ನು ಖರೀದಿಸಿ, ದೆಹಲಿ-ಎನ್‌ಸಿಆರ್‌ಗೆ ಸರಬರಾಜು ಮಾಡುತ್ತಿದ್ದ ಎಂದು ಅವರು ಹೇಳಿದ್ದಾರೆ. ಆಗಸ್ಟ್ ೪ ರಂದು ಚಾದರ್ ತನ್ನ ಸಂಪರ್ಕದಲ್ಲಿರುವ ಒಬ್ಬರಿಗೆ ಶಸ್ತಾçಸ್ತçಗಳನ್ನು ತಲುಪಿಸಲು ರಿಂಗ್ ರೋಡ್‌ನಲ್ಲಿರುವ ಗಾಂಧಿ ಮ್ಯೂಸಿಯಂ ಬಳಿ ತೆರಳುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು ಎಂದು ವಿಶೇಷ ಪೊಲೀಸ್ ಆಯುಕ್ತ (ವಿಶೇಷ ಸೆಲ್) ಎಚ್‌ಜಿಎಸ್ ಧಲಿವಾಲ್ ಅವರು ತಿಳಿಸಿದ್ದಾರೆ.