ಕೂಡಿಗೆ, ಆ. ೧೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯ ತೋಟಗಾರಿಕಾ ಕ್ಷೇತ್ರದ ಆವರಣದಲ್ಲಿ ೨೦೨೨-೨೩ನೇ ಸಾಲಿನಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ಬೆಳೆಸಲಾದ ತೆಂಗಿನ ಗಿಡಗಳನ್ನು ಶಾಸಕ ಡಾ. ಮಂಥರ್ ಗೌಡ ಅವರು ರೈತರಿಗೆ ವಿತರಣೆ ಮಾಡಿದರು.
ಈ ಸಂದರ್ಭ ತೋಟಗಾರಿಕಾ ಪಿತಾಮಹ ಎಂ.ಹೆಚ್. ಮರಿಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸುವ ಮೂಲಕ ಶಾಸಕರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕ್ಷೇತ್ರದಲ್ಲಿ ಬೆಳೆಸಲಾದ ೧೩,೬೫೦ ತೆಂಗಿನ ಗಿಡಗಳನ್ನು ತಾಲೂಕು ವ್ಯಾಪ್ತಿಯ ರೈತರ ಜಮೀನಿನ ದಾಖಲೆ ಆಧಾರದ ಮೇಲೆ ಮೊದಲ ಹಂತದಲ್ಲಿ ನೀಡುವ ಕಾರ್ಯ ಆರಂಭಗೊAಡಿತು. ಈ ಸಂದರ್ಭ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಶೋಭಾ, ಹಾರಂಗಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ವರದರಾಜ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಪ್ರಮುಖರಾದ ನಟೇಶ್ ಗೌಡ ಸೇರಿದಂತೆ ನೂರಾರು ರೈತರು, ಮತ್ತಿತರರು ಇದ್ದರು.