ಮಡಿಕೇರಿ, ಆ. ೧೦: ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿರುವ ಜಿಲ್ಲೆಯವರೇ ಆಗಿರುವ ಪ್ರವೀಣ್ ಅವರು ಇದೀಗ ಮಡಿಕೇರಿ ತಹಶೀಲ್ದಾರ್ ಆಗಿ ನಿಯುಕ್ತಿಗೊಂಡಿದ್ದಾರೆ. ೧೯೯೭ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಇಲಾಖೆಗೆ ಸೇರ್ಪಡೆಯಾದ ಇವರು ೨೦೧೧ರಲ್ಲಿ ಶಿರಸ್ತೆದಾರ್ ಆಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದರು. ಈ ಸಂದರ್ಭ ಚುನಾವಣಾ ಜವಾಬ್ದಾರಿಯೊಂದಿಗೆ ಜುಡಿಷಿಯಲ್ ಹೆಡ್ ಮುನ್ಸಿಪ್ (ಜೆ.ಹೆಚ್.ಎಂ) ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ೨೦೨೧ರಲ್ಲಿ ಗ್ರೇಡ್-೨ ತಹಶೀಲ್ದಾರ್ ಆಗಿ ಉಪವಿಭಾಗಾಧಿಕಾರಿ ಕಚೇರಿ ವೀರಾಜಪೇಟೆ ತಾಲೂಕು ಕಚೇರಿಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದು ಇದೀಗ ಗ್ರೇಡ್-೧ ತಹಶೀಲ್ದಾರ್ ಆಗಿ ನಿಯುಕ್ತಿಗೊಂಡಿದ್ದು, ಮಡಿಕೇರಿ ತಾಲೂಕು ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರವೀಣ್ ಅವರು ಮೂಲತಃ ಕೈಕೇರಿಯ ನಿವಾಸಿ ಪಡಿಕಲ್ ಚಿಣ್ಣಪ್ಪ ಹಾಗೂ ಬೆಳ್ಯವ್ವ ದಂಪತಿ ಪುತ್ರ.