ಚೆಯ್ಯಂಡಾಣೆ, ಆ. ೧೦: ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸದಸ್ಯರಾದ ಚೆಂಬಾರAಡ ಐಸಮ್ಮ ಚಕ್ಕೇರ ಇಸ್ಮಾಯಿಲ್ ಹಾಗೂ ಆಫ್ಸತ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ನಾಪೋಕ್ಲುವಿನ ಪ್ರವಾಸಿ ಮಂದಿರದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಎಮ್ಮೆಮಾಡು ವಲಯ ಕಾಂಗ್ರೆಸ್ ಅಧ್ಯಕ್ಷ ಹಂಸ ಅವರು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭ ಬೂತ್ ಅಧ್ಯಕ್ಷ ಇಬ್ರಾಹಿಂ ಹಾಜಿ, ಎಮ್ಮೆಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಯಿಷಾ, ಸದಸ್ಯರಾದ ಯೂಸುಫ್, ಗಫೂರ್, ಮಾಹಿನ್, ಮಾಜಿ ಸದಸ್ಯ ಅರೆಯಂಡ ಹಂಸ, ಎಮ್ಮೆಮಾಡು ಬೂತ್ ಅಧ್ಯಕ್ಷ ಇಬ್ರಾಹಿಂ ಹಾಜಿ, ಕಾರ್ಯದರ್ಶಿ ಅಝೀಝ್, ಪಡಿಯಾಣಿ ಬೂತ್ ಅಧ್ಯಕ್ಷ ಪಿ.ಕೆ. ಹನೀಫ, ಕೂರುಳಿ ಪರಂಬು ಬೂತ್ ಅಧ್ಯಕ್ಷ ಆಲಿ ಹಾಜಿ, ಪಕ್ಷದ ಪ್ರಮುಖರಾದ ಆಜು ಕರೀಂ, ಅಬ್ದುಲ್ ಖಾದರ್, ವಝೀರ್ ಮತ್ತಿತರರು ಹಾಜರಿದ್ದರು.