ನಾಪೋಕ್ಲು, ಆ. ೧೦: ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಗಟ್ಟಿಯಾದಾಗ ಮಾನಸಿಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಕಾಫಿ ಬೆಳೆಗಾರ ಹಾಗೂ ಕೊಡಗು ಕಾಫಿ ಬೆಳೆಗಾರರ ಸಂಘದ ನಿರ್ದೇಶಕ ಎನ್.ಎಸ್. ಉದಯಶಂಕರ್ ಹೇಳಿದರು.
ಇಲ್ಲಿನ ಅಂಕುರ್ ಪಬ್ಲಿಕ್ ಶಾಲಾ ವತಿಯಿಂದ ಶಿವಚಾಳಿಯಂಡ ಜಗದೀಶ್ ಮತ್ತು ವಿಜು ಪೂಣಚ್ಚ ಅವರ ಗದ್ದೆಗಳಲ್ಲಿ ಏರ್ಪಡಿಸಲಾಗಿದ್ದ ಮೂರನೇ ವರ್ಷದ ಸಿಬಿಎಸ್ಸಿ ಸಹೋದರ ಒಕ್ಕೂಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೆಸರುಗದ್ದೆ ಕ್ರೀಡಾಕೂಟಗಳು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ವನ್ನು ವೃದ್ಧಿಸಲು ಸಹಕಾರಿಯಾಗಿವೆ. ಅಂಕುರ್ ಪಬ್ಲಿಕ್ ಶಾಲೆಯು ಪ್ರತಿ ವರ್ಷ ಇಂತಹ ಕಾರ್ಯಕ್ರಮವನ್ನು ಆಯೋಜಿಸು ವುದರ ಮೂಲಕ ವಿದ್ಯಾರ್ಥಿಗಳ ಸ್ಪರ್ಧಾಮನೋ ಭಾವನೆಯನ್ನು ಜಾಗೃತಗೊಳಿಸುತ್ತದೆ ಎಂದರು. ಪ್ರಸ್ತುತ ಸನ್ನಿವೇಶದಲ್ಲಿ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ವ್ಯಸನದಲ್ಲಿ ಸಿಲುಕಿದ್ದಾರೆ. ಅತಿಯಾದ ಮೊಬೈಲ್ ಬಳಕೆ ನಮ್ಮನ್ನು ತಲೆತಗ್ಗಿಸುವಂತೆ ಮಾಡುತ್ತದೆ. ಪುಸ್ತಕಗಳನ್ನು ಓದುವುದರಿಂದ ತಲೆಯೆತ್ತಿ ಮುನ್ನಡೆಯಲು ಸಾಧ್ಯ ಎಂದರು.
ಅಂಕುರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ರತ್ನಾ ಚರ್ಮಣ್ಣ ಮಾತನಾಡಿ, ಸಿ.ಬಿ.ಎಸ್.ಸಿ. ಪಠ್ಯಕ್ರಮವನ್ನು ಬೋಧಿಸುವ ಎಂಟು ಶಾಲೆಗಳು ಸಹೋದಯ ಎಂಬ ಸಂಘಟನೆಯ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿವೆ. ಕಳೆದ ಮೂರು ವರ್ಷಗಳಿಂದ ಕೆಸರುಗದ್ದೆ ಕ್ರೀಡಾಕೂಟವನ್ನು ವಿದ್ಯಾರ್ಥಿಗಳಿಗಾಗಿ ಅಂಕುರ್ ಪಬ್ಲಿಕ್ ಶಾಲೆ ಆಯೋಜಿಸುತ್ತಿದೆ. ಶಾಲೆಯ ಪ್ರಾಯೋಜಕತ್ವದಲ್ಲಿ ಏರ್ಪಡಿಸ ಲಾಗಿದ್ದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸ್ಪರ್ಧಾಮನೋ ಭಾವನೆಯನ್ನು ಜಾಗೃತಗೊಳಿಸುತ್ತದೆ ಎಂದರು. ಪ್ರಸ್ತುತ ಸನ್ನಿವೇಶದಲ್ಲಿ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ವ್ಯಸನದಲ್ಲಿ ಸಿಲುಕಿದ್ದಾರೆ. ಅತಿಯಾದ ಮೊಬೈಲ್ ಬಳಕೆ ನಮ್ಮನ್ನು ತಲೆತಗ್ಗಿಸುವಂತೆ ಮಾಡುತ್ತದೆ. ಪುಸ್ತಕಗಳನ್ನು ಓದುವುದರಿಂದ ತಲೆಯೆತ್ತಿ ಮುನ್ನಡೆಯಲು ಸಾಧ್ಯ ಎಂದರು.
ಅಂಕುರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ರತ್ನಾ ಚರ್ಮಣ್ಣ ಮಾತನಾಡಿ, ಸಿ.ಬಿ.ಎಸ್.ಸಿ. ಪಠ್ಯಕ್ರಮವನ್ನು ಬೋಧಿಸುವ ಎಂಟು ಶಾಲೆಗಳು ಸಹೋದಯ ಎಂಬ ಸಂಘಟನೆಯ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿವೆ. ಕಳೆದ ಮೂರು ವರ್ಷಗಳಿಂದ ಕೆಸರುಗದ್ದೆ ಕ್ರೀಡಾಕೂಟವನ್ನು ವಿದ್ಯಾರ್ಥಿಗಳಿಗಾಗಿ ಅಂಕುರ್ ಪಬ್ಲಿಕ್ ಶಾಲೆ ಆಯೋಜಿಸುತ್ತಿದೆ. ಶಾಲೆಯ ಪ್ರಾಯೋಜಕತ್ವದಲ್ಲಿ ಏರ್ಪಡಿಸ ಲಾಗಿದ್ದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ನಿರ್ವಹಿಸಿದರು. ವಿವಿಧ ಶಾಲೆಗಳ ಶಿಕ್ಷಕರು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕ್ರೀಡಾಕೂಟದ ವಿಜೇತರು
ಹಗ್ಗಜಗ್ಗಾಟ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಕೊಡಗು ವಿದ್ಯಾಲಯ ಪ್ರಥಮ ಸ್ಥಾನ ಗಳಿಸಿದರೆ ಕೆವಿಜಿ ಸುಳ್ಯ ಶಾಲೆಯ ವಿದ್ಯಾರ್ಥಿ ಗಳು ದ್ವಿತೀಯ ಸ್ಥಾನ ಗಳಿಸಿದರು. ಬಾಲಕರ ವಿಭಾಗದಲ್ಲಿ ಕೆವಿಜಿ ಸುಳ್ಯ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿದರೆ, ಅಂಕುರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನಗಳಿಸಿದರು. ಥ್ರೋಬಾಲ್ ಸ್ಪರ್ಧೆಯಲ್ಲಿ ಕೊಡಗು ವಿದ್ಯಾಲಯ ಪ್ರಥಮ ಸ್ಥಾನಗಳಿಸಿದರೆ ಕುಶಾಲ ನಗರದ ಜ್ಞಾನಗಂಗಾ ಶಾಲೆ ದ್ವಿತೀಯ ಸ್ಥಾನ ಗಳಿಸಿತು. ಕೆಸರುಗದ್ದೆ ವಾಲಿಬಾಲ್ ಸ್ಪರ್ಧೆಯಲ್ಲಿ ಕೂಡಿಗೆಯ ಸೈನಿಕ್ ಶಾಲೆ ಪ್ರಥಮ ಸ್ಥಾನಗಳಿ ಸಿದರೆ, ಮಡಿಕೇರಿಯ ಎಎಲ್ಜಿ ಕ್ರೆಸೆಂಟ್ ಶಾಲೆ ದ್ವಿತೀಯ ಸ್ಥಾನ ಗಳಿಸಿತು.
ಕೆಸರುಗದ್ದೆ ಅಥ್ಲೆಟಿಕ್ಸ್ ವಿಭಾಗ ವಿಜೇತರು
೧೦೦ ಮೀಟರ್ ಕಿರಿಯ ಬಾಲಕರ ವಿಭಾಗದಲ್ಲಿ ವಿಶಾಲ್ ಯಾದವ್ ಸೈನಿಕ್ ಶಾಲೆ (ಪ್ರಥಮ), ಆರ್ಯನ್ ಎಂ.ಆರ್. ಸೈನಿಕ್ ಶಾಲೆ (ದ್ವಿತೀಯ), ಚರ್ಮಣ್ಣ ಬಿ.ಕೆ. ಅಂಕುರ್ ಪಬ್ಲಿಕ್ ಶಾಲೆ, ನಾಪೋಕ್ಲು (ತೃತೀಯ). ೧೦೦ ಮೀಟರ್ ಕಿರಿಯ ಬಾಲಕಿಯರ ವಿಭಾಗದಲ್ಲಿ ತೇಜಲ್ ಬೋಪಣ್ಣ, ಕೊಡಗು ವಿದ್ಯಾಲಯ (ಪ್ರಥಮ), ಮಯಾಂಕ ಪಿ.ಎಂ, ಅಂಕುರ್ ಪಬ್ಲಿಕ್ ಶಾಲೆ (ದ್ವಿತೀಯ), ದೀಪ್ತಿ ಯಾದವ್, ಸೈನಿಕ್ ಶಾಲೆ ಕೂಡಿಗೆ (ತೃತೀಯ). ೧೦೦ ಮೀಟರ್ ಹಿರಿಯ ಬಾಲಕರ ವಿಭಾಗದಲ್ಲಿ ಪ್ರಜ್ವಲ್ ಅಯ್ಯಪ್ಪ ಪಿ.ಎಂ ಅಂಕುರ್ ಪಬ್ಲಿಕ್ ಶಾಲೆ (ಪ್ರಥಮ), ಪ್ರಮೋದ್ ಪಿ.ಎಂ., ಸೈನಿಕ್ ಶಾಲೆ ಕೂಡಿಗೆ (ದ್ವಿತೀಯ), ಪಿ.ಸಿ. ಶ್ರೀವಿಷ್ಣುರೈ, ಕೊಡಗು ವಿದ್ಯಾಲಯ ಮಡಿಕೇರಿ (ತೃತೀಯ).
೧೦೦ ಮೀಟರ್ ಕಿರಿಯ ಬಾಲಕಿಯರ ವಿಭಾಗದಲ್ಲಿ ಪೆರ್ಲಿನ್ ಪೊನ್ನಮ್ಮ, ಕೊಡಗು ವಿದ್ಯಾಲಯ ಮಡಿಕೇರಿ (ಪ್ರಥಮ), ಹರ್ಷ ಎ.ಎಸ್. ಜ್ಞಾನಗಂಗಾ ಶಾಲೆ ಅತ್ತೂರು (ದ್ವಿತೀಯ), ಪ್ರತೀಕ ಎಂ.ಕೆ. ಕೆವಿಜಿ ಸುಳ್ಯ (ತೃತೀಯ)
ಕಿರಿಯ ಬಾಲಕರ ೪.೧೦೦ ಮೀಟರ್ ರಿಲೇ ವಿಭಾಗದಲ್ಲಿ ಸೈನಿಕ್ ಶಾಲೆ ಕೂಡಿಗೆ (ಪ್ರಥಮ), ಕೆವಿಜಿ ಸುಳ್ಯ (ದ್ವಿತೀಯ), ಅಂಕುರ್ ಪಬ್ಲಿಕ್ ಶಾಲೆ, ನಾಪೋಕ್ಲು (ತೃತೀಯ).
ಕಿರಿಯ ಬಾಲಕಿಯರ ೪.೧೦೦ ಮೀಟರ್ ರಿಲೇ ವಿಭಾಗದಲ್ಲಿ ಕೊಡಗು ವಿದ್ಯಾಲಯ ಮಡಿಕೇರಿ (ಪ್ರಥಮ) ಕೆವಿಜಿ ಸುಳ್ಯ (ದ್ವಿತೀಯ), ಅಂಕುರ್ ಪಬ್ಲಿಕ್ ಶಾಲೆ (ತೃತೀಯ).