ಮಡಿಕೇರಿ, ಆ. ೯: ವಿಧಾನಸಭಾ ಚುನಾವಣೆಯ ನಂತರ ಕ್ಷೀಣಿಸಿದ್ದ ರಾಜಕೀಯ ಚಟುವಟಿಕೆ ಇದೀಗ ಮತ್ತೆ ಗರಿಗೆದರಿದೆ. ‘ಹಳ್ಳಿ ಸರಕಾರ’ ಎಂದು ಕರೆಸಿಕೊಳ್ಳುವ ಗ್ರಾಮ ಪಂಚಾಯಿತಿಯ ೨ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಶಾಂತಿಯುತವಾಗಿ ನಡೆದಿದೆ.

ಬಿ.ಶೆಟ್ಟಿಗೇರಿ- ಅಚ್ಚರಿಯ ಫಲಿತಾಂಶ

ಗೋಣಿಕೊಪ್ಪಲು: ತೀವ್ರ ಕುತೂಹಲ ಕೆರಳಿಸಿದ್ದ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಕೊಲ್ಲೀರ ಬೋಪಣ್ಣ ೨ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಸ್ಪರ್ಧಿಸಿದ್ದ ಏಕೈಕ ಅಭ್ಯರ್ಥಿ ಸಿ.ಎಂ. ಕಾವೇರಮ್ಮ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

೬ ಸದಸ್ಯರನ್ನೊಳಗೊಂಡ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಯಲ್ಲಿ ಮೊದಲನೇ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರುಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಪಡೆದಿದ್ದರು. ಈ ಸಂದರ್ಭ ೫ ಸ್ಥಾನಗಳು ಬಿಜೆಪಿಯ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣದಲ್ಲಿದ್ದ ಕೊಲ್ಲೀರ ಬೋಪಣ್ಣ ಕೇವಲ ೫ ಮತಗಳ ಅಂತರದಿAದ ಗೆಲುವು ಸಾಧಿಸಿ ಈ ಹಿಂದೆ ಪಂಚಾಯಿತಿಗೆ ಆರಿಸಿ ಬಂದಿದ್ದರು.

೨ನೇ ಅವಧಿಗೆ ಸಾಮಾನ್ಯ ಕ್ಷೇತ್ರದಿಂದ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿತ್ತು. ೬ ಸಂಖ್ಯೆ ಬಲವುಳ್ಳ ಪಂಚಾಯಿತಿ ಯಲ್ಲಿ ಬಿಜೆಪಿ ಬೆಂಬಲಿತರು ೫ ಸದಸ್ಯರನ್ನು ಹೊಂದಿರುವುದರಿAದ ಈ ಬಾರಿಯು ಅಧ್ಯಕ್ಷ ಸ್ಥಾನವು ಬಿಜೆಪಿ ಬೆಂಬಲಿತ ಸದಸ್ಯರಿಗೆ ಒಲಿ ಯಲಿದೆ ಎಂದು ಊಹಿಸಲಾಗಿತ್ತು.

ಬದಲಾದ ರಾಜಕೀಯ ಬೆಳ ವಣಿಗೆಯಲ್ಲಿ ಕಾಂಗ್ರೆಸ್‌ನ ಕೊಲ್ಲೀರ ಬೋಪಣ್ಣ ಅಧ್ಯಕ್ಷಗಿರಿಗೆ ನಾಮಪತ್ರ ಸಲ್ಲಿಸಿ ಕುತೂಹಲ ಕೆರಳಿಸಿದ್ದರು. ಮತ ಎಣಿಕೆ ವೇಳೆ ೪ ಮತಗಳನ್ನು ಪಡೆಯುವ ಮೂಲಕ ಬೋಪಣ್ಣ ಆಶ್ಚರ್ಯಕರ ರೀತಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡರು. ಮತ್ತೋರ್ವ ಅಧ್ಯಕ್ಷ ಆಕಾಂಕ್ಷಿ ಗಣಪತಿ ಎಂ.ಪಿ, ೨ ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಏಕೈಕ ಮಹಿಳೆ ಸಿ.ಎಂ. ಕಾವೇರಮ್ಮ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಇವರನ್ನು ಅವಿರೋಧ ವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು, ಗಿರಿಜನ ತಾಲೂಕು ಅಧಿಕಾರಿಗಳಾದ ಡಿ.ಜಿ. ಗುರುಶಾಂತಪ್ಪ ಘೋಷಣೆ ಮಾಡಿದರು.

ಕೇವಲ ೬ ಸದಸ್ಯರನ್ನೊಳ ಗೊಂಡ ಈ ಪಂಚಾಯಿತಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಸಂದರ್ಭ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಚುನಾವಣಾ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎಸ್. ನೇತ್ರಾವತಿ, ಎಂ.ಪಿ.ಗಣಪತಿ, ಸಿ.ಎಂ. ಕಾವೇರಮ್ಮ, ಕೆ.ಎಸ್.ಲಕ್ಷಿö್ಮ, ಬಿ.ಎಂ. ಜಗದೀಶ್, ಮಾಜಿ ಸದಸ್ಯ ಚಂದುರ ಪವಿ ರೋಹಿತ್ ಹಾಜರಿದ್ದರು.

ಅಧ್ಯಕ್ಷರಾಗಿ ಕೊಲ್ಲೀರ ಬೋಪಣ್ಣ ಹೆಸರು ಘೋಷಣೆ ಆಗುತ್ತಿದ್ದಂತೆಯೇ ಪಂಚಾಯಿತಿಯ ಹೊರ ಭಾಗದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಘೋಷಣೆ ಕೂಗಿ ಹರ್ಷ ವ್ಯಕ್ತ ಪಡಿಸಿದರು. ಪೊನ್ನಂ ಪೇಟೆ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಮೀದೇರಿರ ನವೀನ್, ಪ್ರ.ಕಾರ್ಯ ದರ್ಶಿ ಎ.ಜೆ. ಬಾಬು, ವಲಯ ಅಧ್ಯಕ್ಷ ತೀತಮಾಡ ಸದನ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕಡೇಮಾಡ ಕುಸುಮ ಜೋಯಪ್ಪ, ಉಮೇಶ್ ಕೇಚಮಯ್ಯ, ಕೊಲ್ಲೀರ ಸುಬ್ರಮಣಿ, ಚಂದುರ ರೋಹಿತ್, ತಟ್ಟಂಡ ಜೋಯಪ್ಪ, ಚಂದುರ ಈರಪ್ಪ, ಅಣ್ಣಿರ ಹರೀಶ್, ತೀತಮಾಡ ಮಮತ ಚಂಗಪ್ಪ, ಬೋಪಣ್ಣ, ನಿರನ್ ಮುದ್ದಪ್ಪ, ಸುಮನ್, ಸೋಮಣ್ಣ, ನಾಳ್ಯಮಂಡ ಪ್ರದೀಪ್, ಕೊಲ್ಲೀರ ಪೂಣಚ್ಚ, ಗಗನ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೊಲ್ಲೀರ ಬೋಪಣ್ಣ ಪ್ರತಿಕ್ರಿಯಿಸಿ ಪಂಚಾಯಿತಿಯ ಸರ್ವ ಸದಸ್ಯರ ವಿಶ್ವಾಸ ಪಡೆದು ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು. ಪ್ರಮುಖವಾಗಿ ಪರಿಶಿಷ್ಟರ ಅಭಿವೃದ್ಧಿಗೆ ಹಾಗೂ ಕುಡಿಯುವ ನೀರು, ರಸ್ತೆಗೆ ಆದ್ಯತೆ ನೀಡಲಾಗುವುದು. ಪಂಚಾಯಿತಿ ಕಚೇರಿಗೆ ಶಾಸಕರನ್ನು ಬರ ಮಾಡಿಕೊಂಡು ಇಲ್ಲಿಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗುವುದು ಎಂದರು.

ಚುನಾವಣಾ ಅಧಿಕಾರಿಯಾಗಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಿ.ಜಿ.ಗುರುಶಾಂತಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗ ಳಾದ ಎ.ಜಿ.ಪರಮೇಶ್, ಪಂಚಾ ಯಿತಿ ಸಿಬ್ಬಂದಿಗಳು ಗೋಣಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ರೂಪಬೀರದಾರ್ ಹಾಜರಿದ್ದರು.

ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಆಯ್ಕೆ ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಆಯ್ಕೆ

ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಭಾಸ್ಕರ್ ನಾಯಕ್, ಉಪಾಧ್ಯಕ್ಷರಾಗಿ ಶಶಿಕಲಾ ಆಯ್ಕೆಯಾದರು. ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಭಾಸ್ಕರ್ ನಾಯಕ್, ಕೆ.ಬಿ.ಶಂಶುದ್ದಿನ್, ಚಂದ್ರಶೇಖರ್ ನಾಮಪತ್ರ ಸಲ್ಲಿಸಿದ್ದರು. ಬಿಸಿಎಂ ಎ ಮಹಿಳಾ ಉಪಾಧ್ಯಕ್ಷ ಸ್ಥಾನಕ್ಕೆ ಶಶಿಕಲಾ, ಆಶಾ ಎಂ.ಎಸ್. ನಾಮ ಪತ್ರ ಸಲ್ಲಿಸಿದ್ದರು.

ಚಂದ್ರಶೇಖರ್ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಶಂಶುದ್ದಿನ್ ಮತ್ತು ಭಾಸ್ಕರ್ ನಾಯಕ್ ನಡುವೆ ಚುನಾವಣೆ ನಡೆಯಿತು. ಈ ಪೈಕಿ ಭಾಸ್ಕರ ನಾಯಕ್‌ಗೆ ೧೮ ಮತಗಳು, ಶಂಶುದ್ದಿನ್‌ಗೆ ೬ ಮತಗಳು ಲಭಿಸಿದವು. ಉಪಾಧ್ಯಕ್ಷ ಸ್ಧಾನಕ್ಕೆ ಚುನಾವಣೆಯಲ್ಲಿ ಶಶಿಕಲಾ ನವರಿಗೆ ೧೩ ಮತಗಳು, ಆಶಾ ಅವರಿಗೆ ೧೧ ಮತಗಳು ದೊರಕಿತು. ಈ ಸಂದರ್ಭ ಸದಸ್ಯರಾದ ಕೆ.ಕೆ.ಭೋಗಪ್ಪ, ಶಿವಮ್ಮ, ಶಶಿಕಲಾ, ದೀಪಾ, ಈರಯ್ಯ, ಗಿರೀಶ್, ಜ್ಯೋತಿ, ಹರೀಶ್, ಚೈತ್ರ, ಮಂಜು, ಭಾಗ್ಯ, ಖತೀಜ, ಪಾರ್ವತಮ್ಮ, ದಿನೇಶ್, ಗೌರಮ್ಮ, ಇಂದಿರ, ಫಿಲೋಮಿನಾ, ಚಂದ್ರಶೇಖರ್, ಲಕ್ಷಿö್ಮ, ಮಣಿಕಂಠ, ಸುರೇಶ್, ಮತದಾನದಲ್ಲಿ ಪಾಲ್ಗೊಂಡಿದ್ದರು.

ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಕೂಡುಮಂಗ ಳೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಚುನಾವಣಾ ಪ್ರಕ್ರಿಯೆ ನೆರವೇರಿಸಿದರು. ಈ ಸಂದರ್ಭ ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮನು ರೈ, ಬಿಜೆಪಿ ಪಕ್ಷದ ಪ್ರಮುಖ ರಾದ ಕುಮಾರಪ್ಪ, ಕಿಟ್ಟಿ, ಕೆ. ವರದ, ಮನು, ವಾಂಚಿರ ಮನು ನಂಜುಡ, ಪ್ರಶಾಂತ್, ಮಂಜುನಾಥ, ಪ್ರವೀಣ್, ರವಿಕುಮಾರ್, ರಾಜು ಸೇರಿದಂತೆ ಶಕ್ತಿ ಕೇಂದ್ರದ ಅಧ್ಯಕ್ಷರು, ವಿವಿಧ ಘಟಕಗಳ ಪ್ರಮುಖರು ಹಾಜರಿದಸೋಮವಾರಪೇಟೆ: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿಯ ೨ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗ್ರಾ.ಪಂ. ಸಭಾಂಗಣದಲ್ಲಿ ನಡೆದಿದ್ದು, ಬಿ.ಜೆ.ಪಿ. ಬೆಂಬಲಿತರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಗ್ರಾ.ಪಂ. ಅಧ್ಯಕ್ಷರಾಗಿ ಯಶಾಂತ್‌ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ರೇಣುಕಾ ವೆಂಕಟೇಶ್ ಅವರುಗಳು ಜಯಭೇರಿ ಬಾರಿಸಿದ್ದಾರೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಅವರ ಉಪಸ್ಥಿತಿಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ, ಬಿ.ಜೆ.ಪಿ. ಬೆಂಬಲಿತ ಡಿ.ಕೆ. ಯಶಾಂತ್‌ಕುಮಾರ್ ಹಾಗೂ ಕಾಂಗ್ರೆಸ್ ಬೆಂಬಲಿತ ಹೆಚ್.ವಿ. ಮಿಥುನ್ ಅವರುಗಳು ಸ್ಪರ್ಧಿಸಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ. ಬೆಂಬಲಿತ ರೇಣುಕಾ ವೆಂಕಟೇಶ್ ಹಾಗೂ ಕಾಂಗ್ರೆಸ್ ಬೆಂಬಲಿತ ಅನ್ನಪೂರ್ಣ ಲೋಕೇಶ್ ಸ್ಪರ್ಧಿಸಿದ್ದರು. ೧೨ ಸದಸ್ಯ ಬಲದ ಗ್ರಾ.ಪಂ.ನಲ್ಲಿ ಬಿ.ಜೆ.ಪಿ. ಅಭ್ಯರ್ಥಿಗಳು ೭ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ೫ ಮತಗಳನ್ನು ಪಡೆದರು. ಈ ಹಿಂದೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಲಕ್ಷಿö್ಮÃ ಪಾಂಡಿಯನ್, ಉಪಾಧ್ಯಕ್ಷರಾಗಿ ಹೆಚ್.ವಿ. ಮಿಥುನ್ ಅವರುಗಳು ಅಧಿಕಾರ ನಿರ್ವಹಿಸಿದ್ದರು. ಕಾಂಗ್ರೆಸ್ ಆಡಳಿತದಲ್ಲಿದ್ದ ಹಾನಗಲ್ಲು ಗ್ರಾ.ಪಂ. ಈ ಬಾರಿ ಬಿಜೆಪಿ ತೆಕ್ಕೆಗೆ ಬಂದಿದ್ದು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭ ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಬಿ.ಜೆ.ಪಿ. ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್ ತಿಮ್ಮಯ್ಯ, ಶಕ್ತಿ ಕೇಂದ್ರದ ಅಧ್ಯಕ್ಷ ಜಗದೀಶ್, ಗ್ರಾ.ಪಂ. ಸದಸ್ಯರುಗಳಾದ ಕೆ.ಎಸ್. ಪ್ರಕಾಶ್, ಸುದೀಪ್, ಬಿ.ಎಸ್. ಸುರೇಶ್ ರಘು, ಜಿ. ವಿಜಯ ಸೇರಿದಂತೆ ಪ್ರಮುಖರಾದ ಕೆ.ಬಿ. ಮಾದಪ್ಪ, ಅಪ್ಪಚ್ಚು ಚಂದ್ರಕಾAತ್ ಮತ್ತಿತರರು ಉಪಸ್ಥಿತರಿದ್ದರು.

ಅಧ್ಯಕ್ಷರಾಗಿ ದಿನೇಶ್Ä್ದ, ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು.

ಹಾನಗಲ್ಲು ಗ್ರಾ.ಪಂ. ಅಧ್ಯಕ್ಷರಾಗಿ ಯಶಾಂತ್

ಹಾಲುಗುAದ ಗ್ರಾ.ಪಂ. ಅಧ್ಯಕ್ಷರಾಗಿ ದಿನೇಶ್

ಮಡಿಕೇರಿ: ಹಾಲುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಪಂದಿಕAಡ ದಿನೇಶ್ (ಕುಶ) ಹಾಗೂ ಅಮೀನಾ ಅವಿರೋಧವಾಗಿ ಆಯ್ಕೆಯಾದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ದಿನೇಶ್ ಹಾಗೂ ಅಮೀನಾ ನಾಮಪತ್ರ ಸಲ್ಲಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ.ಬಿ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿತ್ತು. ಹತ್ತು ಸದಸ್ಯರ ಬಲವಿರುವ ಹಾಲುಗುಂದ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಬಹುಮತವಿದ್ದ ಕಾರಣ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಚುನಾ ವಣಾಧಿಕಾರಿಯಾಗಿ ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯನಿರ್ವಹಿಸಿದರು.

ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರÀ ಧರ್ಮಜ ಉತ್ತಪ್ಪ, ಹಿಂದುಳಿದ ವರ್ಗಗಳ ಅಧ್ಯಕ್ಷ ಬಾನಂಡ ಪೃಥ್ಯು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೀತೆಬೊಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ದುರಹಮಾನ್ (ಅಂದಾಯಿ), ಲೋಕೇಶ್, ಪೂವಯ್ಯ, ಬೇಬಿ, ನಾಗೇಶ್, ದೀಪು ಮಾಚಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.

ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷೆಯಾಗಿ ವಸಂತಿ ರತನ್

ಶ್ರೀಮಂಗಲ: ಶ್ರೀಮಂಗಲ ಗ್ರಾಮ ಪಂಚಾಯಿತಿಗೆ ಮುಂದಿನ ಅವಧಿಯ ಅಧ್ಯಕ್ಷರಾಗಿ ಕಳ್ಳಂಗಡ ವಸಂತಿ ರತನ್ ಹಾಗೂ ಉಪಾಧ್ಯಕ್ಷರಾಗಿ ರಾಣಿ ಪಿ.ಕೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ರಾಣಿ.ಪಿ.ಕೆ. ಅವರು ಅವಿರೋಧವಾಗಿ ಆಯ್ಕೆಯಾದರು. ಆದರೆ ಪಂಚಾಯಿತಿಯಲ್ಲಿ ಒಟ್ಟು ೧೧ ಸದಸ್ಯರಲ್ಲಿ ೧೦ ಸದಸ್ಯರು ಬಿಜೆಪಿ ಪಕ್ಷದ ಬೆಂಬಲಿತರಾಗಿದ್ದು ಒಬ್ಬರು ಮಾತ್ರ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ಇದ್ದಾರೆ.

ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಅಭ್ಯರ್ಥಿ ಆಯ್ಕೆಯಲ್ಲಿ ಒಮ್ಮತ ಮೂಡದ ಹಿನ್ನೆಲೆ ಚುನಾವಣೆ ನಡೆಯಿತು.

ಚೋಕಿರ ಕಲ್ಪನಾ ತಿಮ್ಮಯ್ಯ ಮತ್ತು ಕಳ್ಳಂಗಡ ವಸಂತಿ ರತನ್ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಮತದಾನದ ವೇಳೆ ಒಬ್ಬ ಸದಸ್ಯರು ಇಬ್ಬರಿಗೆ ಮತ ಹಾಕಿದ ಹಿನ್ನೆಲೆ ಇಬ್ಬರು ಅಭ್ಯರ್ಥಿಗಳು ತಲಾ ಐದು ಮತ ಪಡೆದರು. ಇದರಿಂದ ಲಾಟರಿ ಮೂಲಕ ಆಯ್ಕೆ ನಡೆದ ಹಿನ್ನೆಲೆ ಕಳ್ಳಂಗಡ ವಸಂತಿ ರತನ್ ಅವರಿಗೆ ಅಧ್ಯಕ್ಷ ಸ್ಥಾನದ ಅದೃಷ್ಟ ಒಲಿಯಿತು. ಚುನಾವಣಾಧಿಕಾ ರಿಯಾಗಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಕಾರ್ಯನಿರ್ವಹಿಸಿದರು.

ಶ್ರೀಮಂಗಲ: ಶ್ರೀಮಂಗಲ ಗ್ರಾಮ ಪಂಚಾಯಿತಿಗೆ ಮುಂದಿನ ಅವಧಿಯ ಅಧ್ಯಕ್ಷರಾಗಿ ಕಳ್ಳಂಗಡ ವಸಂತಿ ರತನ್ ಹಾಗೂ ಉಪಾಧ್ಯಕ್ಷರಾಗಿ ರಾಣಿ ಪಿ.ಕೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ರಾಣಿ.ಪಿ.ಕೆ. ಅವರು ಅವಿರೋಧವಾಗಿ ಆಯ್ಕೆಯಾದರು. ಆದರೆ ಪಂಚಾಯಿತಿಯಲ್ಲಿ ಒಟ್ಟು ೧೧ ಸದಸ್ಯರಲ್ಲಿ ೧೦ ಸದಸ್ಯರು ಬಿಜೆಪಿ ಪಕ್ಷದ ಬೆಂಬಲಿತರಾಗಿದ್ದು ಒಬ್ಬರು ಮಾತ್ರ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ಇದ್ದಾರೆ.

ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಅಭ್ಯರ್ಥಿ ಆಯ್ಕೆಯಲ್ಲಿ ಒಮ್ಮತ ಮೂಡದ ಹಿನ್ನೆಲೆ ಚುನಾವಣೆ ನಡೆಯಿತು.

ಚೋಕಿರ ಕಲ್ಪನಾ ತಿಮ್ಮಯ್ಯ ಮತ್ತು ಕಳ್ಳಂಗಡ ವಸಂತಿ ರತನ್ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಮತದಾನದ ವೇಳೆ ಒಬ್ಬ ಸದಸ್ಯರು ಇಬ್ಬರಿಗೆ ಮತ ಹಾಕಿದ ಹಿನ್ನೆಲೆ ಇಬ್ಬರು ಅಭ್ಯರ್ಥಿಗಳು ತಲಾ ಐದು ಮತ ಪಡೆದರು. ಇದರಿಂದ ಲಾಟರಿ ಮೂಲಕ ಆಯ್ಕೆ ನಡೆದ ಹಿನ್ನೆಲೆ ಕಳ್ಳಂಗಡ ವಸಂತಿ ರತನ್ ಅವರಿಗೆ ಅಧ್ಯಕ್ಷ ಸ್ಥಾನದ ಅದೃಷ್ಟ ಒಲಿಯಿತು. ಚುನಾವಣಾಧಿಕಾ ರಿಯಾಗಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಕಾರ್ಯನಿರ್ವಹಿಸಿದರು.

ಮಡಿಕೇರಿ: ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಕೆದಂಬಾಡಿ ಪ್ರವೀಣ್ ಕುಮಾರ್ ಹಾಗೂ ಪೊಡನೊಳನ ಬಿ. ದಿನೇಶ್ ಸ್ಪರ್ಧಿಸಿದ್ದರು. ೮ ಜನ ಸದಸ್ಯ ಬಲದ ಪಂಚಾಯಿತಿಯ ಅಧ್ಯಕ್ಷ ಚುನಾವಣೆಯಲ್ಲಿ ೪ ಮತಗಳನ್ನು ಪಡೆದ ದಿನೇಶ್ ಅವರು ಜಯಶೀಲರಾದರೆ ೩ ಮತಗಳನ್ನು ಪಡೆದ ಕೆದಂಬಾಡಿ ಪ್ರವೀಣ್ ಕುಮಾರ್ ಪರಾಭವಗೊಂಡರು. ಒಂದು ಮತ ತಿರಸ್ಕೃತಗೊಂಡಿತು.

ನೂತನ ಅಧ್ಯಕ್ಷ ದಿನೇಶ್ ಪಿ.ಬಿ. ಮಾತನಾಡಿ, ಸುಮಾರು ೩ ಕೋಟಿ ಅನುದಾನ ತಂದು ವಾರ್ಡ್ಅನ್ನು ಅಭಿವೃದ್ಧಿಪಡಿಸಲು ಶ್ರಮಿಸಿದ್ದೆ. ಅಂದಿನಿAದ ಜನರು ತಾನು ಅಧ್ಯಕ್ಷನಾಗುವುದನ್ನು ಬಯಸಿದ್ದರು. ಅದು ಇಂದು ಸಾಕಾರಗೊಂಡಿದೆ ಎಂದರು. ಅಧಿಕಾರವನ್ನು ಬಳಸಿಕೊಂಡು ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯಿತಿಯ ಅಭಿವೃದ್ಧಿಗೆ ದುಡಿಯುವುದಾಗಿ ಹೇಳಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಚಂದ್ರಕಲಾ ಅವರು ನಾಮಪತ್ರ ಹಿಂಪಡೆದಿದ್ದರಿAದ ಉಪಾಧ್ಯಕ್ಷ ಸ್ಥಾನಕ್ಕೆ ಬೇಬಿ ಅವರು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಮಡಿಕೇರಿ ಬಿ.ಇ.ಓ. ದೊಡ್ಡೇಗೌಡ ನಡೆಸಿಕೊಟ್ಟರು. ಸದಸ್ಯರು ಹಾಗೂ ಪಿ.ಡಿ.ಓ. ಯಾದವ್ ಉಪಸ್ಥಿತರಿದ್ದರು.

ಫಾತೀಮಾಗೆ ಒಲಿದ ಅಧ್ಯಕ್ಷೆ ಸ್ಥಾನ

ತಿತಿಮತಿ ಗ್ರಾ.ಪಂ. ಅಧ್ಯಕ್ಷೆಯಾಗಿ ಪೊನ್ನು

*ಗೋಣಿಕೊಪ್ಪ: ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪೊನ್ನು ಹಾಗೂ ಉಪಾಧ್ಯಕ್ಷರಾಗಿ ಶಾಮಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೊನ್ನು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ಯಾಮಲಾ ಹೊರತಾಗಿ ಇತರ ಅರ್ಹ ಸದಸ್ಯರು ನಾಮಪತ್ರ ಸಲ್ಲಿಸದೆ ಇರುವುದರಿಂದ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ನಂದೀಶ್ ಮಾಹಿತಿ ನೀಡಿದರು.

೧೧ ಸದಸ್ಯರ ಬಲ ಹೊಂದಿರುವ ಪಂಚಾಯಿತಿಯಲ್ಲಿ ೯ ಬಿಜೆಪಿ ಸದ ಸ್ಯರು ಒಬ್ಬರು ಪಕ್ಷೇತರ ಮತ್ತೊಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳು ಇದ್ದಾರೆ. ಚುನಾವಣೆಯಲ್ಲಿ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿಯಾಗಿ ಬಿಜೆಪಿ ಪ್ರಮುಖರಲ್ಲಿ ಬೇಡಿಕೆ ಸಲ್ಲಿಸಿದ ಬೆಂಬಲಿತ ಸದಸ್ಯ ವಿಜಯ್ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಗೈರು ಹಾಜರಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಪೊನ್ನು ಅವರ ಅಧ್ಯಕ್ಷ ಸ್ಥಾನ ಮತ್ತು ಶ್ಯಾಮಲಾ ಅವರ ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಸದಸ್ಯರುಗಳಾದ ಎನ್.ಎನ್. ಅನೂಪ್, ಸರಸ್ವತಿ, ಹೆಚ್.ಕೆ. ಆಶಾ, ರಾಜೇಶ್ವರಿ, ಪಿ.ಕೆ. ಶಂಕರ, ಜಿ. ಚಂದ್ರಶೇಖರ, ಪಿ.ಎಂ. ಚುಂಬ್ರು, ಎಂ.ಎA. ಅಪ್ರೊಸ್, ಒಮ್ಮ ತದ ಬಲ ತುಂಬಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಪಿಡಿಓ ಮಮತ ಹಾಗೂ ತಿತಿಮತಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಅಪ್ಪಿ ಮತ್ತು ಕಾರ್ಯಕರ್ತರು ಇದ್ದರು.

ಕಮಲ ಉತ್ತಯ್ಯ ಬೆಟ್ಟಗೇರಿ ಗ್ರಾ.ಪಂ. ಅಧ್ಯಕ್ಷೆ

ಮಡಿಕೇರಿ : ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚಳಿಯಂಡ ಕಮಲ ಉತ್ತಯ್ಯ ಚುನಾಯಿತರಾಗಿದ್ದಾರೆ.

ಒಟ್ಟು ೧೬ ಸದಸ್ಯರ ಬಲ ಹೊಂದಿರುವ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಸಂಖ್ಯೆ ಒಟ್ಟು ೧೩ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಂಖ್ಯೆ ೩ ಇತ್ತು. ಆದರೆ, ಬುಧವಾರ ಚುನಾವಣೆ ನಡೆದ ಸಂದರ್ಭ ಕಾಂಗ್ರೆಸ್ ಅಧ್ಯಕ್ಷರ ಅಭ್ಯರ್ಥಿಗೆ ೯ ಮತಗಳು ದೊರಕಿದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಬಾಡನ ಲಿಕಿತಾ ಅವರಿಗೆ ೭ ಮತಗಳು ದೊರಕಿವೆ. ಉಪಾಧ್ಯಕ್ಷರಾಗಿ ದೇವಯ್ಯರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಸದಸ್ಯ ನಂದಕುಮಾರ್, ಹಿಂದುಳಿದ ವರ್ಗದ ಕಾರ್ಯದರ್ಶಿ ಉಡೋತ್ ಗೋಪಾಲ್ ಪೂಜಾರಿ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ಹಂಡ್ಲಿ-ಸುಧಾ ಅವಿರೋಧ ಆಯ್ಕೆ

ಮುಳ್ಳೂರು: ಸಮೀಪದ ಹಂಡ್ಲಿ ಗ್ರಾ.ಪಂ. ಆಡಳಿತ ಮಂಡಳಿಗೆ ೨ನೇ ಅವಧಿಗೆ ವರಿಷ್ಠರ ಆಯ್ಕೆಗಾಗಿ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸುಧಾ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ಸ್ಥಾನಕ್ಕೆ ಬಸವರಾಜು ಮತ್ತು ಅಶೋಕ್ ಸ್ಪರ್ಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್.ಎಸ್. ಅಶೋಕ್ ೬ ಮತಗಳನ್ನು ಪಡೆದರೆ ಬಸವರಾಜು ೫ ಮತಗಳನ್ನು ಪಡೆದರು. ಅಶೋಕ್ ೧ ಮತ ಹೆಚ್ಚು ಪಡೆದಿರುವ ಹಿನ್ನೆಲೆ ಚುನಾ ವಣಾಧಿಕಾರಿ ಅಶೋಕ್ ಆಯ್ಕೆಯಾಗಿರುವುದಾಗಿ ಘೋಷಿ ಸಿದರು. ಉಪಾಧ್ಯಕ್ಷರಾಗಿ ಆಯ್ಕೆ ಯಾಗಿರುವ ಅಶೋಕ್ ಪಕ್ಷೇತರರಾಗಿ ಸ್ಪರ್ಧಿಸಿದ್ದರು

ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಚುನಾ ವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಪಿಡಿಓ ಮೇದಪ್ಪ, ಕಾಂಗ್ರೆಸ್ ವಲಯ ಅಧ್ಯಕ್ಷ ವೀರೇಂದ್ರಕುಮಾರ್, ಕಾಂಗ್ರೆಸ್ ಪ್ರಮುಖರಾದ ಜಿ.ಎಂ. ಕಾಂತರಾಜ್, ಶರತ್‌ಶೇಖರ್, ಎಸ್.ಕೆ.ಶಿವಪ್ಪ, ಜರ್ನಾಧನ್, ಮಹಮ್ಮದ್‌ಖನ್ನಾ, ಭರತ್, ಅಶ್ವಥ್, ಲಕ್ಷಿö್ಮ ಶೆಟ್ಟರ್ ಮುಂತಾದವರು ಇದ್ದರು.

ಆಯ್ಕೆಯಾಗಿರುವುದಾಗಿ ಘೋಷಿ ಸಿದರು. ಉಪಾಧ್ಯಕ್ಷರಾಗಿ ಆಯ್ಕೆ ಯಾಗಿರುವ ಅಶೋಕ್ ಪಕ್ಷೇತರರಾಗಿ ಸ್ಪರ್ಧಿಸಿದ್ದರು

ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಚುನಾ ವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಪಿಡಿಓ ಮೇದಪ್ಪ, ಕಾಂಗ್ರೆಸ್ ವಲಯ ಅಧ್ಯಕ್ಷ ವೀರೇಂದ್ರಕುಮಾರ್, ಕಾಂಗ್ರೆಸ್ ಪ್ರಮುಖರಾದ ಜಿ.ಎಂ. ಕಾಂತರಾಜ್, ಶರತ್‌ಶೇಖರ್, ಎಸ್.ಕೆ.ಶಿವಪ್ಪ, ಜರ್ನಾಧನ್, ಮಹಮ್ಮದ್‌ಖನ್ನಾ, ಭರತ್, ಅಶ್ವಥ್, ಲಕ್ಷಿö್ಮ ಶೆಟ್ಟರ್ ಮುಂತಾದವರು ಇದ್ದರು.

ಆಯ್ಕೆಯಾಗಿರುವುದಾಗಿ ಘೋಷಿ ಸಿದರು. ಉಪಾಧ್ಯಕ್ಷರಾಗಿ ಆಯ್ಕೆ ಯಾಗಿರುವ ಅಶೋ�