ಸೋಮವಾರಪೇಟೆ, ಆ. ೭: ಸಮೀಪದ ಮಸಗೋಡು ಗ್ರಾಮದ ತಣ್ಣೀರುಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಗಳಾದ ಖಲಂದರ್ ಶಾಫಿ ಬ್ಯಾಡಗೊಟ್ಟ ಅವರು ಉಚಿತವಾಗಿ ಪ್ರಿಂಟರ್ಅನ್ನು ನೀಡಿದರು. ಪಟ್ಟಣದಿಂದ ದೂರವಿರುವ ತಣ್ಣೀರುಹಳ್ಳ ಸರ್ಕಾರಿ ಶಾಲೆಗೆ ಪ್ರಿಂಟರ್ ಅಗತ್ಯವಾಗಿರುವ ಬಗ್ಗೆ ಶಾಲಾ ಶಿಕ್ಷಕ ಕೆ.ಜಿ. ನಾಗೇಂದ್ರ ಅವರು ಖಲಂದರ್ ಅವರ ಗಮನ ಸೆಳೆದ ಹಿನ್ನೆಲೆ ರೂ. ೨೦ ಸಾವಿರ ಮೌಲ್ಯದ ಪ್ರಿಂಟರ್ನ್ನು ಕೊಡಗೆಯಾಗಿ ನೀಡಿದರು.
ಈ ಸಂದರ್ಭ ಶಾಲಾ ಶಿಕ್ಷಕರು, ಖಲಂದರ್ ಅವರ ಕುಟುಂಬ ವರ್ಗದವರಾದ ರಫಿಯಾ, ಫಾತಿಮಾ, ಮೊಹಮ್ಮದ್ ನಾಫಿ ಅವರುಗಳು ಉಪಸ್ಥಿತರಿದ್ದರು.