ಮಡಿಕೇರಿ, ಆ. ೭: ಮಡಿಕೇರಿ ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೂಪದಿರ ಶಾರದಾ ನಂಜಪ್ಪ ಅವರನ್ನು ದೇಚೂರು ಕೊಡವಕೇರಿ ವತಿಯಿಂದ ಅಭಿನಂದಿಸಿ ಬೀಳ್ಕೊಡಲಾಯಿತು. ಕೇರಿಯ ಅಧ್ಯಕ್ಷ ಮೂವೇರ ಕೆ. ಜಯರಾಂ, ಕಾರ್ಯದರ್ಶಿ ಬಟ್ಟೀರ ಮೇದಪ್ಪ, ಉಪಾಧ್ಯಕ್ಷೆ ತಾಪಂಡ ಸರೋಜ ತಮ್ಮಯ್ಯ, ನಿರ್ದೇಶಕರುಗಳಾದ ಕುಂಞÂರ ಸೋಮಯ್ಯ, ನೂರೇರ ಭೀಮಯ್ಯ, ತಾಪಂಡ ಶುಭ ಲೋಕೇಶ್, ಮೂವೇರ ವಸಂತಿ ಜಯರಾಂ, ಕಲಿಯಂಡ ಜೀಜ ಅಚ್ಚಪ್ಪ, ಅಂಜಪರವAಡ ಉಷಾ ಉತ್ತಯ್ಯ ಇದ್ದರು.