ಮಡಿಕೇರಿ, ಆ. ೭: ಪ್ರಸಕ್ತ ಸಾಲಿನ ಪ್ರಧಾನಮಂತ್ರಿ ರಾಷ್ಟಿçÃಯ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ರಾಷ್ಟಿçÃಯ ಪ್ರಶಸ್ತಿಗಳ ಪೋರ್ಟಲ್ hಣಣಠಿs://ಚಿತಿಚಿಡಿಜs.gov.iಟಿ ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದ್ದು, ಮಕ್ಕಳು ಶೌರ್ಯ, ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಕಲೆ ಮತ್ತು ಸಾಂಸ್ಕೃತಿಕ ಮತ್ತು ನಾವಿನ್ಯತೆ ಕ್ಷೇತ್ರಗಳಲ್ಲಿ ಪ್ರತಿಭೆಯನ್ನು ತೋರಿರುವವರು ರಾಷ್ಟçಮಟ್ಟದ ಪ್ರಶಸ್ತಿಗೆ ಮನ್ನಣೆ ಪಡೆದಿರುತ್ತಾರೆ. ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಮಕ್ಕಳು ಭಾರತದ ಪ್ರಜೆಯಾಗಿದ್ದು, ಭಾರತದಲ್ಲಿ ವಾಸವಾಗಿರಬೇಕು ಮತ್ತು ಅರ್ಜಿ-ನಾಮನಿರ್ದೇಶನ ಸಲ್ಲಿಸುವ ಕೊನೆಯ ದಿನಾಂಕಕ್ಕೆ ೧೮ ವರ್ಷ ಮೀರಿರಬಾರದು. ಯಾವುದೇ ಇತರ ವ್ಯಕ್ತಿಯು ಅರ್ಹ ಮಗುವನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು. ಪಿ.ಎಂ.ಆರ್.ಬಿ.ಪಿ. ಅರ್ಜಿಗಳನ್ನು ಆನ್‌ಲೈನ್ ಪೋರ್ಟಲ್ (hಣಣಠಿs://ಚಿತಿಚಿಡಿಜs.gov.iಟಿ) ನಲ್ಲಿ ಮಾತ್ರ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ತಾ. ೩೧ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ನ್ಯಾಷನಲ್ ಅವಾರ್ಡ್ ಪೋರ್ಟಲ್‌ನ ವೆಬ್‌ಸೈಟ್ hಣಣಠಿs://ಚಿತಿಚಿಡಿಜs.gov.iಟಿ ನ್ನು ವೀಕ್ಷಿಸಬಹುದು. ಹಾಗೂ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಡಿಕೇರಿ ಇವರ ದೂ. ೦೮೨೭೨-೨೯೮೩೭೯ನ್ನು ಸಂಪರ್ಕಿಸಬಹುದು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.