ಮಡಿಕೇರಿ, ಆ. ೭: ೧ನೇ ಮೊಣ್ಣಂಗೇರಿ ಗ್ರಾಮದವರಾದ ಅಮ್ಮಚಿಮಣಿಯಂಡ ಚೆಂಗಪ್ಪ - ಸುನೀತ (ತವರುಮನೆ ಮುಕ್ಕಾಟೀರ, ದೊಡ್ಡಪುಲಿಕೋಟು) ಅವರ ಮಗಳು ಸುಶ್ಮಿತ ಚೆಂಗಪ್ಪ ಎ. ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ೫೭ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಎಂ.ಎಸ್ಸಿ ಕೃಷಿ ಮಾರಾಟ ಮತ್ತು ಸಹಕಾರದಲ್ಲಿ ೨ ಚಿನ್ನದ ಪದಕಗಳನ್ನು ಪಡೆದುಕೊಂಡರು. ಇವರು ಕಾಂತೂರು ಮೂರ್ನಾಡ್‌ನವರಾದ ಅವರೆಮಾದಂಡ ತೇಜ್ ತಿಮ್ಮಯ್ಯ ಅವರ ಪತ್ನಿ.