ಮಡಿಕೇರಿ, ಆ. ೪ : ಇತ್ತೀಚೆಗಷ್ಟೇ ಸಮಾಪ್ತಿಗೊಂಡ ದುಲೀಪ್ ಟ್ರೋಫಿ ಡೊಮೆಸ್ಟಿಕ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಮ್ಮ ತಂಡ ಸೌತ್ ಜೋನ್ ಗೆಲುವಿಗೆ ಕಾರಣಕರ್ತರಾದ ಹಾಗೂ ಸರಣಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದ ಕೊಡಗಿನ ಮಾಚಿಮಾಡ ವಿದ್ವತ್ ಕಾವೇರಪ್ಪ, ತಾ.೩ ರಂದು ಪುದುಚೆರಿಯಲ್ಲಿ ಸಮಾರೋಪಗೊಂಡ ದಿಯೋದಾರ್ ಟ್ರೋಫಿ ಏಕದಿನ ಡೊಮೆಸ್ಟಿಕ್ ಲೀಗ್ ನಲ್ಲಿಯೂ ಬಿರುಸಿನ ಬೌಲಿಂಗ್ ಮಾಡಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಗಳನ್ನು (೧೩) ಪಡೆದು ಸಾಧನೆಗೈದಿದ್ದಾರೆ. ಅವರು ಪ್ರತಿನಿಧಿಸಿದ ತಂಡ ಸೌತ್ ಜೋನ್, ಫೈನಲ್‌ನಲ್ಲಿ ಈಸ್ಟ್ ಜೋನ್ ವಿರುದ್ಧ ೪೫ ರನ್ ಗಳ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪ್ರಖ್ಯಾತ ರಾಷ್ಟಿçÃಯ ಟೂರ್ನಿಗಳಾದ ರಣಜಿ, ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದ ವಿದ್ವತ್, ಕಳೆದ ಐ.ಪಿ.ಎಲ್.ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಕೂಡ ಪ್ರತಿನಿಧಿಸಿದ್ದರು.