ಕುಶಾಲನಗರ, ಆ. ೪: ಕುಶಾಲನಗರ ಪಟ್ಟಣದಲ್ಲಿ ಅಕ್ರಮವಾಗಿ ಹೋರಿಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಕುಶಾಲನಗರ ಪಟ್ಟಣ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಇಬ್ಬರನ್ನು ವಶಕ್ಕೆ ಪಡೆದು ಎರಡು ಹೋರಿಗಳು ಮತ್ತು ಒಂದು ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಮಾದಾಪುರ ಕಡೆಯಿಂದ ಕುಶಾಲನಗರ ಮೂಲಕ ಕೊಪ್ಪ ರಾಣಿ ಗೇಟ್‌ಗೆ ವಾಹನ ಒಂದರಲ್ಲಿ (ಏಂ ೧೧ಃ ೬೩೨೧) ದಾಖಲೆಗಳು ಇಲ್ಲದೆ ಸಾಗಿಸುತ್ತಿದ್ದ ಸಂದರ್ಭ ಕುಶಾಲನಗರ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಸಿಬ್ಬಂದಿಗಳು ಜಾಯ್ ಮತ್ತು ಮಂಜುನಾಥ್ ಎಂಬವರುಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.