ಪೊನ್ನಂಪೇಟೆ, ಆ. ೩: ಹುದಿಕೇರಿ ಗ್ರಾಮ ಪಂಚಾಯಿತಿಗೆ ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೋಣಗೇರಿ ಗ್ರಾಮದ ಸದಸ್ಯೆ ಕುಪ್ಪಣಮಾಡ ಕಾವೇರಮ್ಮ ಹಾಗೂ ಉಪಾಧ್ಯಕ್ಷರಾಗಿ ಹುದಿಕೇರಿ ಗ್ರಾಮದ ಸದಸ್ಯೆ ಪಿ.ಎಂ. ಚೋಂದು ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಸಂದರ್ಭ ಶಕ್ತಿ ಕೇಂದ್ರದ ಪ್ರಮುಖರು, ಸಹ ಪ್ರಮುಖರು, ಬೂತ್ ಅಧ್ಯಕ್ಷರು, ಪಕ್ಷದ ಹಿರಿಯ ಮತ್ತು ಕಿರಿಯ ಕಾರ್ಯಕರ್ತರು, ಪದಾಧಿಕಾರಿಗಳು, ಹುದಿಕೇರಿ ವಿ.ಎಸ್.ಎಸ್.ಎನ್. ನ ಅಧ್ಯಕ್ಷರು, ನಿರ್ದೇಶಕರು, ಪಂಚಾಯಿತಿ ಸದಸ್ಯರು ಹಾಗೂ ತಾಲೂಕು ಮಂಡಲ ಅಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿ ಹಾಜರಿದ್ದರು.

ಚುನಾವಣಾ ಅಧಿಕಾರಿಯಾಗಿ ಮೂಕಳೆರ ದೀನ ಕುಶಾಲಪ್ಪ ಕಾರ್ಯ ನಿರ್ವಹಿಸಿದರು.