ಕೂಡಿಗೆ, ಆ. ೩ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ನರಸಮ್ಮ ಅವಿರೋಧವಾಗಿ ಆಯ್ಕೆಯಾದರು. ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕರಾದ ಕೆ.ಕೆ.ಹೇಮಂತ್ ಕುಮಾರ್, ೧೧ ಮಂದಿ ನಿರ್ದೇಶಕರನ್ನು ಒಳಗೊಂಡ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.
ಈ ಸಂದರ್ಭ ನಿರ್ದೇಶಕರುಗಳಾದ ಪುನೀತ್ ಕುಮಾರ್, ಗಿರೀಶ್, ಗೌತಮ್ ಕುಮಾರ್, ರವಿಕುಮಾರ್, ನಟೇಶ್ ಕುಮಾರ್, ಹರೀಶ್, ಜಯಮ್ಮ, ವಿಶ್ವೇಶ್ವರಯ್ಯ, ಅಣ್ಣಾಜಿ ಹಾಜರಿದ್ದರು. ಚುನಾವಣಾಧಿಕಾರಿಯಾಗಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಭಾಸ್ಕರ್ ಕಾರ್ಯ ನಿರ್ವಹಿಸಿದರು. ಗ್ರಾಮ ಪ್ರಮುಖರಾದ ಕೆ.ವಿ. ಸಣ್ಣಪ್ಪ, ರಾಜೇಶ್, ಕೂಡ್ಲೂರು ಕುಮಾರ್, ಸುನಿಲ್ ರಾವ್, ಜವರೇಗೌಡ, ವೈ,ಟಿ, ಪರಮೇಶ್ವರ್, ಮಂಜುನಾಥ, ಸುರೇಶ್, ರಾಮಚಂದ್ರ, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.