ಗೋಣಿಕೊಪ್ಪಲು, ಆ. ೨: ಸಮವಸ್ತç ಧರಿಸಿ ಕಾಲಿಗೆ ಶೂ ಅನ್ನು ಸಿಕ್ಕಿಸಿಕೊಂಡು ಸದಾ ಪುಸ್ತಕದ ಬ್ಯಾಗ್ ಹಿಡಿದು ಶಾಲೆಗೆ ತೆರಳುತ್ತಿದ್ದ ವಿದ್ಯಾ ರ್ಥಿಗಳು ಬುಧವಾರ ಮುಂಜಾನೆ ವೇಳೆ ಪುಸ್ತಕದ ಚೀಲಗಳನ್ನು ಬದಿಗಿಟ್ಟು ರೈತರ ಮಕ್ಕಳಾಗಿ ಭತ್ತದ ಗದ್ದೆಯಲ್ಲಿ ಇಳಿದು ಕೈಯಲ್ಲಿ ಪೈರನ್ನು ಹಿಡಿದು ಸಾಲು ಸಾಲಾಗಿ ನಾಟಿ ನೆಡುವ ವಿಶೇಷ ಅನುಭವವನ್ನು ಇಲ್ಲಿನ ಕಾಪ್ಸ್ ವಿದ್ಯಾರ್ಥಿಗಳು ಪಡೆಯುವ ಮೂಲಕ ಕೃಷಿಗೆ ಇರುವ ಗೌರವ ಹಾಗೂ ಮಾನ್ಯತೆಯನ್ನು ಖುದ್ದಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಿದರು. ರೈತ ಹೊಲವನ್ನು ಉತ್ತು ಬಿತ್ತಿ ಆ ಮೂಲಕ ಈ ನಾಡಿಗೆ ಅನ್ನ ನೀಡುವ ಅನ್ನದಾತನಿಗೆ ಆಗುವ ಕಷ್ಟಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು. ಭತ್ತದ ಕೃಷಿಯಲ್ಲಿ ನಾಡಿನ ಅನ್ನದಾತ ಯಾವ ರೀತಿ ಯಲ್ಲಿ ಬೆವರು ಸುರಿಸುತ್ತಾನೆ ಎಂದು ತಾವೇ ಭತ್ತದ ಗದ್ದೆಗೆ ಇಳಿದು ವಿಶೇಷ ಅನುಭವವನ್ನು ವಿದ್ಯಾರ್ಥಿಗಳು ಪಡೆದಿದ್ದಾರೆ.

ಗೋಣಿಕೊಪ್ಪಲುವಿನ ಕಾಪ್ಸ್ ಶಾಲೆಯ ನೂರಕ್ಕೂ ಅಧಿಕ ವಿದ್ಯಾ ರ್ಥಿಗಳು ತಮ್ಮ ವಿದ್ಯಾಭ್ಯಾಸದ ಸಮ ಯದಲ್ಲಿ ಕೃಷಿ ಚಟುವಟಿಕೆಗಳ ಅನುಭವವನ್ನು ಪಡೆಯುವ ಮೂಲಕ ಉಳಿದ ವಿದ್ಯಾರ್ಥಿಗಳಿಗೆ ಮಾದರಿ ಯಾಗಿದ್ದಾರೆ. ಅಮ್ಮತ್ತಿನಾಡು ಕಳ ತ್ಮಾಡು ಗ್ರಾಮದ ಕೊಲ್ಲೀರ ಕುಟುಂಬದ ಹಿರಿಯರಾದ ಕೊಲ್ಲೀರ ಉಮೇಶ್ ಹಾಗೂ ಕೊಲ್ಲೀರ ಗಯಾ ಸಹೋದರರ ಭತ್ತದ ಗದ್ದೆಯಲ್ಲಿ ನಾಟಿ ಕಾರ್ಯ ನಡೆಯಿತು.

ಈ ಭತ್ತದ ಗದ್ದೆಗೆ ತೆರಳಿದ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿ ಯರು ಭತ್ತದ ಗದ್ದೆಗೆ ಇಳಿದು ಗದ್ದೆಯಲ್ಲಿದ್ದ ಕೃಷಿಕರಿಂದ ಮಾಹಿತಿ ಪಡೆದು ಪೈರು ನೆಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕೊಲ್ಲಿರ ಉಮೇಶ್ ಹಾಗೂ ಗಯಾನವರು ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಪ್ರಾಮುಖ್ಯತೆ ಬಗ್ಗೆ ವಿವರ ನೀಡಿದರು. ಈ ಮಣ್ಣನ್ನು ನಂಬಿರುವ ಯಾವುದೇ ರೈತನಿಗೆ ಭೂಮಿತಾಯಿ ಎಂದಿಗೂ ಅನ್ಯಾಯ ಮಾಡಿರುವ ಉದಾಹರಣೆಗಳಿಲ್ಲ. ಈ ಭೂಮಿತಾಯಿಯನ್ನು ನಾವು ಸದಾ ಗೌರವದಿಂದ ನೋಡಬೇಕು.

ಈ ನಾಡಿನ ಅನ್ನದಾತ ಭತ್ತವನ್ನು ಬೆಳೆಯದಿದ್ದಲ್ಲಿ ಹಸಿವಿ ನಿಂದ ಜನರು ಕಂಗೆಟ್ಟು ಹೋಗಲಿ ದ್ದಾರೆ. ಎಷ್ಟೇ ದೊಡ್ಡ ವ್ಯಕ್ತಿ ಹಾಗೂ ಅಧಿಕಾರಿಯಾದರೂ ಕೃಷಿಗೆ ಗೌರವ ನೀಡಬೇಕು. ರೈತರಿಗೆ ಕೃಷಿಯೇ ಜೀವಾಳ ರೈತರನ್ನು ಸದಾ ಸ್ಮರಿಸಬೇಕು. ಆ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಯ ಅನುಭವವಾದಲ್ಲಿ ಮುಂದಿನ ಜೀವನ ದಲ್ಲಿ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಭತ್ತದ ಗದ್ದೆಯಲ್ಲಿಯೇ ಹಮ್ಮಿಕೊಳ್ಳಲಾ ಗಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ವಿದ್ಯಾರ್ಥಿ ಗಳು ಈ ವಿಶೇಷ ಅನುಭವವನ್ನು ಪಡೆದು ಸಂತೋಷ ಗೊಂಡಿದ್ದಾರೆ ಎಂದರು.

ವಿದ್ಯಾರ್ಥಿಗಳು ಕೃಷಿ ಚಟು ವಟಿಕೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡ ನಂತರ ಗ್ರಾಮೀಣ ಕ್ರೀಡೆ ಯಾದ ನಾಟಿ ಓಟದ ಸ್ಪರ್ಧೆ ಯನ್ನು ಆಯೋಜಿಸಲಾಗಿತ್ತು. ವಿಸ್ತಾರವಾದ ಭತ್ತದ ಗದ್ದೆಯಲ್ಲಿ ಕೆಸರಿನ ನಡುವೆ ವಿದ್ಯಾರ್ಥಿಗಳು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದರು. ಭತ್ತದ ಗದ್ದೆಯಲ್ಲಿ ಕೆಸರಿನೊಂದಿಗೆ ಹೊರಳಾಡಿ ಹೊಸ ಅನುಭವ ಪಡೆದರು. ವಿಶೇಷ ಕಾರ್ಯಕ್ರಮದಲ್ಲಿ ಕೂರ್ಗ್ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ರಾದ ವಿಜಯಲಕ್ಷಿö್ಮ, ಕೋ ಆರ್ಡಿ ನೇಟರ್ ವೇದ ಬೋಪಣ್ಣ, ಶಿಕ್ಷಕರಾದ ಸಂಚಿತ ಚಂಗಪ್ಪ, ಗಣೇಶ್, ಶಾಂತೆ ಯಂಡ ಟೀನಾ ಮಾಚಯ್ಯ, ವಿ.ಜಿ. ರಮ್ಯ, ವೀಣಾ, ಕಾವ್ಯ ಹಾಗೂ ಸೋಮಯ್ಯ ಹಾಜರಿದ್ದರು. -ಹೆಚ್.ಕೆ.ಜಗದೀಶ್