ಸೋಮವಾರಪೇಟೆ, ಆ. ೨: ಇಲ್ಲಿನ ತೋಟಗಾರಿಕಾ ಇಲಾಖೆಯ ಮುಂಭಾಗ ಕಳೆದ ಮೂರು ತಿಂಗಳಿನಿAದ ಪಲ್ಸರ್ ಬೈಕ್‌ವೊಂದು ಅನಾಥವಾಗಿ ನಿಂತಿದ್ದು, ಸಾರ್ವ ಜನಿಕ ವಲಯದಲ್ಲಿ ಅನುಮಾನ ಮೂಡಿಸಿದೆ.

ತೋಟಗಾರಿಕಾ ಇಲಾಖೆಯ ಆವರಣ ಗೋಡೆಯ ಪಕ್ಕದಲ್ಲಿ ನಿಲುಗಡೆಯಾಗಿರುವ ಪಲ್ಸರ್ ಬೈಕ್ (ಕೆ.ಎ.೧೨ ಹೆಚ್. ೬೨೬೮)ನ್ನು ಈವರೆಗೆ ತೆಗೆದುಕೊಂಡು ಹೋಗಿಲ್ಲ. ಮೂರು ತಿಂಗಳಿನಿAದಲೂ ಇಲ್ಲೇ ನಿಲುಗಡೆಗೊಂಡಿದ್ದು, ಅದರ ಮಾಲೀಕರೂ ಪತ್ತೆಯಾಗಿಲ್ಲ. ‘ಬೈಕ್ ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಕ್ರಮಕೈಗೊಂಡಿಲ್ಲ ಎಂದು ನಾಗರಿಕರು ದೂರಿದ್ದಾರೆ.