ಮಡಿಕೇರಿ, ಆ. ೨: ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದ ನೂತನ ಸಮಿತಿ ರಚನಾ ಸಭೆಯು ಮಡಿಕೇರಿಯಲ್ಲಿ ನಡೆಯಿತು.

ಕೊಡಗು ಯುವ ಘಟಕದ ಗೌರವ ಸಲಹೆಗಾರ ಕುಶಾಲಪ್ಪ ಅವರು ಮಾತನಾಡಿ, ಯುವ ಘಟಕದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಮುಂದೆ ಯಾವ ರೀತಿ ಯುವ ಘಟಕ ಮುಂದು ವರಿಯಬೇಕೆಂದು ಸಲಹೆ ನೀಡಿದರು.

ಉದ್ಯಮಿ ದಾಮೋದರ ಅವರು ಮಾತನಾಡಿ, ಕುಲಾಲ ಸಂಘದ ಸ್ಥಾಪಕ ಅಧ್ಯಕ್ಷೆ ಮುತ್ತಮ್ಮ ನೀಡಿದ ಸೇವೆಯನ್ನು ನೆನಪಿಸಿಕೊಂಡರು. ಮುಂದೆ ಯುವಕರು ಸಂಘದಲ್ಲಿ ಸಕ್ರಿಯಗೊಂಡು ಸಂಘವನ್ನು ಬಲಪಡಿಸಿ ಎಂದು ಸಲಹೆ ನೀಡಿದರು. ಕೊಡಗು ಜಿಲ್ಲಾ ಅಧ್ಯಕ್ಷ ನಾಣಯ್ಯ ಅವರು ಮಾತನಾಡಿ, ಯುವ ಘಟಕವು ಕೊಡಗು ಜಿಲ್ಲಾ ಸಂಘಕ್ಕೆ ಪೂರಕವಾಗಿ ಕೆಲಸ ಮಾಡಲಿ ಮತ್ತು ಇದರಿಂದ ಸಂಘವು ಮತ್ತಷ್ಟು ಬೆಳೆಯಲು ಸಹಕಾರಿಯಾಗಲಿ ಎಂದು ನುಡಿದರು.

ನಂತರ ಮಾತನಾಡಿದ ಅರುಣ್ ಕುಲಾಲ್ ಕೂಡಿಗೆ, ಅವರು ಯುವಕರು ಮುಂದೆ ಬಂದಾಗ ಸಮಾಜ ಅಭಿವೃದ್ಧಿಯಾಗುತ್ತದೆ. ಜಿಲ್ಲೆಯ ಎಲ್ಲಾ ಯುವಕರು ಈ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಆಗ ಸಮಾಜ ಬಾಂಧವರ ಕಣ್ಣೀರು ಒರೆಸಲು ಈ ಘಟಕವು ಪೂರಕವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು. ನಂತರ ಸರ್ವಾನು ಮತದಿಂದ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ ಕುಶಾಲಪ್ಪ ಕುಶಾಲನಗರ, ದಾಮೋದರ ಮಡಿ ಕೇರಿ, ನಾರಾಯಣ ಮೂಲ್ಯ ಕುಶಾಲ ನಗರ, ಅಧ್ಯಕ್ಷರಾಗಿ ಚಂದ್ರಶೇಖರ್ ಕುಲಾಲ್ ಮೂರ್ನಾಡು, ಉಪಾ ಧ್ಯಕ್ಷರಾಗಿ ಅಶ್ವಥ್ ಮಡಿಕೆಬೀಡು, ಜಯಪ್ರಕಾಶ್ ಮಡಿಕೇರಿ, ಪ್ರಧಾನ ಕಾರ್ಯದರ್ಶಿ ಯಾಗಿ ಪವನ್ ಕುಲಾಲ್ ಚೇರಂಬಾಣೆ, ಜೊತೆ ï ಚೇರಂಬಾಣೆ, ಉದಯ್ ಕುಲಾಲ್ ಮಡಿಕೇರಿ, ಖಜಾಂಚಿ ಸುರೇಶ್ ಮಡಿಕೇರಿ, ಕ್ರೀಡಾ ಕಾರ್ಯದರ್ಶಿ ಹರೀಶ್ ಮಡಿಕೇರಿ, ಲೋಕೇಶ್ ಕುಶಾಲನಗರ, ಕ್ರೀಡಾ ಸಹ ಕಾರ್ಯದರ್ಶಿಗಳಾಗಿ ಮಂಜುನಾಥ ಕೆ.ಟಿ. ಮಡಿಕೆಬೀಡು, ದಯಾನಂದ್ ಚೇರಂಬಾಣೆ, ರಾಜೇಶ್ ಪನ್ನೇ, ಶೃತಿಕಾ ಬೆಟ್ಟಗೇರಿ, ಕೌಶಿಕ್ ಚೇರಂಬಾಣೆ, ಶರಣು ಚೇರಂಬಾಣೆ, ರಂಜನ್ ಕುಲಾಲ್ ಪುರುಷೋತ್ತಮ್ ಹೆಮ್ಮಾಡು, ಸಂಘಟನಾ ಕಾರ್ಯದರ್ಶಿಗಳು, ಗಿರೀಶ್ ಕುಲಾಲ್ ಮಡಿಕೆಬೀಡು, ದಿನೇಶ್ ಕುಲಾಲ್ ಐಗೂರು, ಅಪ್ಪಾಜಿ ಕುಶಾಲನಗರ, ಅರುಣ್ ಕುಲಾಲ್ ಕೂಡಿಗೆ, ರಾಮಚಂದ್ರ ಕುಶಾಲನಗರ, ಭರತ್ ಕುಲಾಲ್ ಸೋಮ ವಾರಪೇಟೆ, ಸಂಘಟನಾ ಸಹ ಕಾರ್ಯದರ್ಶಿಗಳಾಗಿ ಪ್ರಮೋದ್ ಕುಲಾಲ್, ನಾಗೇಶ್ ಕುಲಾಲ್ ಮಕಂದೂರು, ಯತೀಶ್, ಸತೀಶ್ ಕುಲಾಲ್, ಶರಣ್, ನಿರ್ದೇಶಕರಾಗಿ ವಿನು ಚೇರಂಬಾಣೆ, ಮಂಜುನಾಥ್ ಕುಶಾಲನಗರ, ಅಶೋಕ್ ಮಡಿಕೆ ಬೀಡು ಲಕ್ಷö್ಮಣ್ ಕೆ.ವೈ. ಮಡಿಕೆಬೀಡು, ರಾಜಮಣಿ ಚೇರಂಬಾಣೆ, ಶ್ರೀನಿವಾಸ್ ಮಡಿಕೆಬೀಡು, ದೇವಯ್ಯ ಚೇರಂಬಾಣೆ ಅವರನ್ನು ಆಯ್ಕೆ ಮಾಡಲಾಯಿತು.

ಚಂದ್ರಶೇಖರ್ ಕುಲಾಲ್ ಮೂರ್ನಾಡ್ ಸ್ವಾಗತಿಸಿದರು. ಪವನ್ ಕುಲಾಲ್ ಚೇರಂಬಾಣೆ ಧನ್ಯವಾದ ಸಮರ್ಪಿಸಿದರು. ಶ್ರೀನಿವಾಸ್ ಕೆ.ಕೆ. ಮಡಿಕೆಬೀಡು ಪ್ರಾರ್ಥಿಸಿದರು.