ವರದಿ : ಅಶ್ರಫ್

ಚೆಯ್ಯಂಡಾಣೆ, ಆ. ೨ : ಚೆಯ್ಯಂಡಾಣೆ ವ್ಯಾಪ್ತಿಯ ನರಿಯಂದಡ, ಚೇಲಾವರ, ಕೋಕೇರಿ, ಮರಂದೋಡ, ಕರಡ ಗ್ರಾಮಗಳ ಸುತ್ತಮುತ್ತ ಹವಾಮಾನ ವೈಪರಿತ್ಯದ ಪರಿಣಾಮ ಅರೇಬಿಕಾ ಕಾಫಿ ಅವಧಿ ಪೂರ್ವವಾಗಿ ಹಣ್ಣಾಗಿದೆ. ಇನ್ನು ಸುರಿಯುತ್ತಿರುವ ಮಳೆಯಿಂದ ಶೇ.೫೦ಕ್ಕೂ ಹೆಚ್ಚು ಅರೇಬಿಕಾ ಕಾಫಿಯ ಜತೆ ರೋಬಸ್ಟ ಕಾಫಿಯು ಉದುರು ತ್ತಿದ್ದು ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ.

ಫಸಲಿಗೆ ಕೊಳೆರೋಗವೂ ಭಾದಿಸಿದ್ದು, ಬೆಳೆಗಾರರು ಆತಂಕ ಪಡುವಂತಾಗಿದೆ. ಕಾಫಿ ನಾಡಿನ ರೈತರು ಹೈರಾಣಾರಾಗಿದ್ದು ಬೆಳೆ ನಷ್ಟದಿಂದ ವ್ಯಥೆಪಡುವಂತಾಗಿದೆ. ವ್ಯತಿರಿಕ್ತ ವಾತಾ ವರಣದಿಂದಾಗಿ ಕಾಫಿ ತೋಟಗಳಲ್ಲಿ ಅರೇಬಿಕಾ ಕಾಫಿ ಉದುರುತ್ತಿದ್ದು, ಬೆಳೆಗಾರರು ಅಸಹಾಯಕರಾಗಿದ್ದಾರೆ.

ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಅರೇಬಿಕಾ ಕಾಫಿ ಗಿಡಗಳಲ್ಲಿ ಹಣ್ಣಾಗುವುದು, ನವೆಂಬರ್‌ನಲ್ಲಿ ಅರೇಬಿಕಾ ಕಾಫಿ ಕೊಯ್ಯುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಅರೇಬಿಕಾ ಕಾಫಿ ಜುಲೈನಲ್ಲಿ ಹಣ್ಣಾಗಿದ್ದು ಇದೀಗ ಸುರಿಯುತ್ತಿರುವ ಮಳೆಯಿಂದಾಗಿ ಸಂಪೂರ್ಣವಾಗಿ ಕೊಳೆಯುತ್ತಿದೆ. ತಾಲೂಕಿನ ಎಲ್ಲಾ ಭಾಗಗಳಲ್ಲಿ ರೋಬಸ್ಟಾ ಕಾಫಿ ಉದುರುವಿಕೆ ಹಾಗೂ ಕೊಳೆರೋಗಕ್ಕೆ ತುತ್ತಾಗುತ್ತಿದೆ.

ಈಗಾಗಲೇ ಕೂಲಿ ಕಾರ್ಮಿಕರ ಕೊರತೆ ಹೆಚ್ಚುತ್ತಿರುವ ಕೂಲಿ ಕಾರ್ಮಿಕರ ವೇತನ, ಕಾಡಾನೆಗಳ ಹಾವಳಿ, ಹೆಚ್ಚುತ್ತಿರುವ ನಿರ್ವಹಣೆಯ ವೆಚ್ಚ, ಇದರಿಂದ ಸಹಜವಾಗಿಯೇ ಕಾಫಿ ಬೆಳೆಗಾರರು ಆತಂಕಕ್ಕೀಡಾಗಿದ್ದು ಇದೀಗ ಹವಾಮಾನ ವೈಪರಿತ್ಯ ಪರಿಣಾಮದಿಂದಾಗಿ ಸಂಪೂರ್ಣವಾಗಿ ತತ್ತರಿಸಿದ್ದಾರೆ.

ಮಾರುಕಟ್ಟೆಯಲ್ಲಿ ಅರೇಬಿಕಾ ಕಾಫಿ ಹಾಗೂ ರೋಬಸ್ಟ ಕಾಫಿಗೆ ದರ ಹಾವಳಿ, ಹೆಚ್ಚುತ್ತಿರುವ ನಿರ್ವಹಣೆಯ ವೆಚ್ಚ, ಇದರಿಂದ ಸಹಜವಾಗಿಯೇ ಕಾಫಿ ಬೆಳೆಗಾರರು ಆತಂಕಕ್ಕೀಡಾಗಿದ್ದು ಇದೀಗ ಹವಾಮಾನ ವೈಪರಿತ್ಯ ಪರಿಣಾಮದಿಂದಾಗಿ ಸಂಪೂರ್ಣವಾಗಿ ತತ್ತರಿಸಿದ್ದಾರೆ.

ಮಾರುಕಟ್ಟೆಯಲ್ಲಿ ಅರೇಬಿಕಾ ಕಾಫಿ ಹಾಗೂ ರೋಬಸ್ಟ ಕಾಫಿಗೆ ದರ ಏರಿಕೆಯಾಗಿದೆ, ಇತ್ತ ಹವಾಮಾನ ಬದಲಾವಣೆ, ಮಳೆಯ ಕಾರಣದಿಂದ ಕೊಡಗಿನಲ್ಲಿರುವ ಕಾಫಿ ಕೊಳೆರೋಗ ಹಾಗೂ ಉದುರುವಿಕೆಯಿಂದ ಬೆಳೆಗಾರರು ಬೆಳೆಯನ್ನು ನಿಭಾಯಿಸಲು ಪರಿತಪಿಸುವ ಪರಿಸ್ಥಿತಿ ನಿರ್ಮಾಣ ವಾಗಿದೆ.

(ಮೊದಲ ಪುಟದಿಂದ) ಸಂಬAಧಿಸಿದ ಇಲಾಖೆ ಕಾಫಿ ಬೋರ್ಡ್ ಅಧ್ಯಯನ ನಡೆಸಿ ಇದಕ್ಕೆ ಸೂಕ್ತ ಬೆಳೆ ಪರಿಹಾರ ನೀಡಬೇಕು ಎಂದು ಕಾಫಿ ಬೆಳೆಗಾರ ಚೆಯ್ಯಂಡಾಣೆಯ ಎಸ್.ಎಸ್. ಸುಮಂತ್ ಒತ್ತಾಯಿಸಿದ್ದಾರೆ.ಇದಕ್ಕೆ ಹವಾಮಾನ ಬದಲಾವಣೆ, ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನ ಕಾರಣ. ಬೇಸಿಗೆಯಲ್ಲಿ ಗಿಡಕ್ಕೆ ನೀರು ಹಾಯಿಸುವುದು ಹಾಗೂ ನೆರಳು ನಿರ್ವಹಣೆ ಮಾಡಿದರೆ ಸ್ವಲ್ಪ ಮಟ್ಟಿಗೆ ಈ ರೋಗವನ್ನು ನಿಯಂತ್ರಿಸಬಹುದೆAದು ಬೆಳೆಗಾರ ಚೇಲಾವರ ಪಟ್ಟಚೆರುವಾಳಂಡ ಸುಬ್ಬಯ್ಯ ಅಭಿಪ್ರಾಯಪಟ್ಟಿದ್ದಾರೆ.