ಕುಶಾಲನಗರ, ಆ. ೩: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಕುಶಾಲನಗರ ಟೌನ್ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ಗುಡ್ಡೆಹೊಸೂರು ಕಡೆಯಿಂದ ಕೂಡಿಗೆ ಕಡೆಗೆ ಸಾಗುತ್ತಿದ್ದ ವಾಹನವನ್ನು ತಪಾಸಣೆಗೆ ಒಳಪಡಿಸಿದ ಸಂದರ್ಭ ನಾಲ್ಕು ಗೋವುಗಳು ಪತ್ತೆಯಾಗಿದ್ದು ಈ ಸಂದರ್ಭ ವಾಹನದಲ್ಲಿದ್ದ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಕುಶಾಲನಗರ ಟೌನ್ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿ ವಾಹನವನ್ನು ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ನಾಲ್ಕು ಗೋವುಗಳನ್ನು ಮೈಸೂರು ಪಿಂಜರ್ ಪೋಲ್‌ಗೆ ಸಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.