ಕೊಡಗು ಜಿಲ್ಲೆಯಲ್ಲಿ ನಾಳೆ ಕರ್ಕಾಟಕ ಮಾಸದ ೧೮ನೇ ದಿನದ ಸಂಭ್ರಮ. ಈ ಮಾಸ ಮಳೆಗಾಲದ ಮಧ್ಯ ಭಾಗವಾಗಿದೆ. ಕೊಡಗಿನ ಜನರ ಕೃಷಿ ಚಟುವಟಿಕೆಯ ಕಕ್ಕಡ ಪದಿನೆಟ್ಟ್ ಹಾಗೂ ತುಳು ಭಾಷಿಗರ ‘ಆಟಿ ಪದಿನೆಣ್ಮ’ ಆಚರಣೆಯು ಗುರುವಾರ ಕೊಡಗು ಜಿಲ್ಲೆಯಾದ್ಯಂತ ಸಂಪ್ರದಾಯಬದ್ಧವಾಗಿ ಆಚರಿಸಲ್ಪಡುತ್ತದೆ. ಕನ್ನಡ ಭಾಷಿಗರ ‘ಆಷಾಢ’ ಎಂಬ ಪದವೇ ಕೊಡವರ ‘ಕಕ್ಕಡ’ ಹಾಗೂ ತುಳು ಭಾಷಿಗರ ‘ಆಟಿ’ ಆಚರಣೆಯಾಗಿದೆ.

ಕೊಡಗಿನಲ್ಲಿ ಕಕ್ಕಡ ಮಾಸ ಅಥವಾ ಆಟಿ ತಿಂಗಳ ೧೮ನೇ ದಿನವನ್ನು ಆಯುರ್ವೇದ ಸಂಬAಧದ ಜಾನಪದ ಹಬ್ಬವನ್ನಾಗಿ ಆಚರಿಸ ಲಾಗುತ್ತದೆ. ಅಂದು ಸಂಪ್ರದಾಯದAತೆ ಸಾಮೂಹಿಕವಾಗಿ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿ, ನಂತರ ಮನೆಯಲ್ಲಿ ಮಧುಬನ ಅಥವಾ ಮದ್ದುಸೊಪ್ಪಿನ ಪಾಯಸ ಹಾಗೂ ಮರಕೆಸುವಿನ ಪತ್ರೊಡೆಯೊಂದಿಗೆ ಹಬ್ಬದ ಸಂಭ್ರಮಾಚರಣೆ ಮಾಡಲಾಗುವುದು.

ಕಕ್ಕಡ ಪದಿನೆಟ್ಟ್ ಹಾಗೂ ಆಟಿ ಪದಿನೆಣ್ಮದ ವೈಶಿಷ್ಟö್ಯವೇ ಮದ್ದುಸೊಪ್ಪಿನ ಪಾಯಸ ಸೇವನೆ. ಕಕ್ಕಡ ಅಥವಾ ಆಟಿ ತಿಂಗಳ ಆರಂಭ ದಿನದಿಂದ ಹಿಡಿದು ಸೊಪ್ಪಿನ ಗಿಡದಲ್ಲಿ ಒಂದೊAದು ವಿಧದ ಔಷಧಿಯ ಗುಣಗಳು ಸೇರಲಾರಂಭಿಸುತ್ತದೆಯAತೆ. ೧೮ನೇ ದಿನದಂದು ೧೮ ವಿಧದ ಔಷಧಿಗಳು ಸೇರಿ ಸಂಪೂರ್ಣ ವಾಗುತ್ತದೆ ಎಂದು ಪ್ರತೀತಿ. ಈ ದಿನದಂದು ಮಾತ್ರ ಅದು ಸುವಾಸ ನಾಭರಿತವಾಗಿರುತ್ತದೆ.

೧೮ನೇ ದಿನದಂದು ಸೊಪ್ಪನ್ನು ತಂದು ಬೇಯಿಸಿ ಆ ನೀರಿನಿಂದ ಕೇಸರಿ ಬಾತ್, ತುಪ್ಪದ ಅನ್ನ ಹಾಗೂ ಅಕ್ಕಿ ಪಾಯಸ ಇಲ್ಲವೇ ವಿವಿಧ ರೀತಿಯ ಅನ್ನದ ಅಡುಗೆ ತಯಾರಿಸಿ ಸವಿಯಲಾಗುತ್ತದೆ. ಆರೋಗ್ಯಕ್ಕೆ ಒಳ್ಳೆಯದೆಂಬ ಭಾವನೆಯೇ ಮಧುಬನದ ಸೇವನೆಗೆ ಕಾರಣ ಎಂದು ಹೇಳಲಾಗುತ್ತದೆ.

ಗೌಡ ಜನಾಂಗದವರು, ಇತರರು ಸಹ ಆಷಾಢದ ಕೊನೆಯಲ್ಲಿ ಆಟಿ ಅಮಾವಾಸ್ಯೆಯ ದಿನ ಮದ್ದುಸೊಪ್ಪಿನ ರಸದಿಂದ ತಯಾರಿಸಿದ ವೈವಿಧ್ಯಮಯ ಅಡುಗೆಯನ್ನು ಸವಿದು ಸಂಭ್ರಮಿಸುತ್ತಾರೆ.

ಮರಕೆಸ: ಕರ್ಕಾಟಕ ಮಾಸದಲ್ಲಿ ಕಾಡಿನಲ್ಲಿ ಸಸ್ಯಗಳು ಸಮೃದ್ಧಿಯಾಗಿ ಬೆಳೆಯುತ್ತವೆ. ಕೊಡಗಿನಲ್ಲಿ ಮದ್ದುಸೊಪ್ಪಿನ ಜತೆ ಮರದ ಮೇಲೆ ಬಿಡುವ ‘ಮರಕೆಸ’ ಎಂಬ ಸೊಪ್ಪು ಕೂಡ ಔಷಧ ರೂಪ ತಾಳುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮರಕೆಸವನ್ನು ಬಳಸುತ್ತಾರೆ. ಆಟಿ ಮಾಸದಲ್ಲಿ ಯಾವ ದಿನವಾದರೂ ಈ ಸೊಪ್ಪನ್ನು ಉಪಯೋಗಿಸಿದರೆ ಆರೋಗ್ಯಕ್ಕೆ ತುಂಬ ಒಳ್ಳೆಯದು. ಮರಕೆಸದಿಂದ ಪತ್ರೊಡೆ ಎಂಬ ತಿಂಡಿ ಮಾಡಿ ಸವಿಯುತ್ತಾರೆ.

- ಶ.ಗ. ನಯನತಾರಾ, ಶನಿವಾರಸಂತೆ.