ಸಮೃದ್ಧಿ ಇ-ವೇ ಕಾಮಗಾರಿ ಕ್ರೇನ್ ಕುಸಿದು ಬಿದ್ದು ೧೬ ಮಂದಿ ಕಾರ್ಮಿಕರು ಸಾವು

ಥಾಣೆ, ಆ. ೧: ಮಹಾರಾಷ್ಟçದ ಥಾಣೆ ಜಿಲ್ಲೆಯಲ್ಲಿ ಸಮೃದ್ಧಿ ಎಕ್ಸ್ಪ್ರೆಸ್‌ವೇ ಮೂರನೇ ಹಂತದ ನಿರ್ಮಾಣದ ವೇಳೆ ಸೇತುವೆಯ ಚಪ್ಪಡಿ ಮೇಲೆ ಕ್ರೇನ್ ಬಿದ್ದು ೧೬ ಕಾರ್ಮಿಕರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಮಹಾರಾಷ್ಟçದ ಥಾಣೆ ಜಿಲ್ಲೆಯ ಶಾಹಪುರದ ಸರ್ಲಾಂಬೆ ಗ್ರಾಮದ ಬಳಿ ಗಿರ್ಡರ್ ಉಡಾವಣಾ ಯಂತ್ರ ಕ್ರೇನ್ ಕುಸಿದು ಈ ದುರ್ಘಟನೆ ನಡೆದಿದೆ. ಕಾರ್ಮಿಕರು ವಿಶೇಷವಾದ ಗಿರ್ಡರ್ ಉಡಾವಣಾ ಯಂತ್ರವನ್ನು ನಿರ್ವಹಿಸುತ್ತಿದ್ದರು, ಇದು ಹೆದ್ದಾರಿಗಳು, ರೈಲು ಸೇತುವೆಗಳ ನಿರ್ಮಾಣದಲ್ಲಿ ಮತ್ತು ಎತ್ತರದ ಕಟ್ಟಡಗಳಿಗೆ ಅಡಿಪಾಯವಾಗಿ ಬಳಸಲಾಗುವ ದೊಡ್ಡ ಉಕ್ಕಿನ ಕಿರಣಗಳು ಅಥವಾ ಗರ್ಡರ್‌ಗಳನ್ನು ಚಲಿಸಲು ವಿನ್ಯಾಸಗೊಳಿಸಲಾದ ಕ್ರೇನ್ ಆಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಕ್ರೇನ್ ಕುಸಿತ ಅಪಘಾತದಲ್ಲಿ ಸಂಭವಿಸಿದ ಜೀವಹಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ ೨ ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ೫೦ ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಚಂದ್ರನೆಡೆಗೆ ಸಾಗಿದ ಚಂದ್ರಯಾನ ನೌಕೆ

ಬೆಂಗಳೂರು, ಆ. ೧: ಜುಲೈ ೧೪ ರಂದು ಶ್ರೀಹರಿಕೋಟಾದ ಸತೀಶ್ ಧವಾನ್ ಬಾಹ್ಯಾಕಾಶ ಕೇಂದ್ರದಿAದ ಉಡಾವಣೆಗೊಂಡ ಚಂದ್ರಯಾನ -೩ ನೌಕೆ ಭೂಮಿಯ ಕಕ್ಷೆಯಿಂದ ಹೊರಗೆ ಸಾರಿ ಚಂದ್ರನೆಡೆಗೆ ತನ್ನ ಪಯಣ ಬೆಳೆಸಿದೆ. ಒಟ್ಟು ೫ ಹಂತಗಳಲ್ಲಿ ಭೂಮಿಯ ಸುತ್ತದ ಕಕ್ಷೆಯಲ್ಲಿ ಏರಿಕೆ ಕಂಡು ವೇಗ ಹೆಚ್ಚಿಸಿಕೊಂಡ ನೌಕೆಯು, ತನ್ನ ೫ ನೆ ಹಂತದ ಕಕ್ಷೆಯ (ಗರಿಷ್ಠ - ೧,೨೭,೬೦೯ ಕಿಮಿ ; ಕನಿಷ್ಟ - ೨೩೬ ಕಿ.ಮೀ ) ಕನಿಷ್ಟ ದೂರದ ಸ್ಥಳದಿಂದ ಭೂ ಕಕ್ಷೆಯಿಂದ ಹೊರ ಸಾಗಿದೆ. ಲೂನಾರ್ ಟ್ರಾನ್ಸ್ಫರ್ ಟ್ರಾಜೆಕ್ಟರಿ ಮೂಲಕ ಇಸ್ರೋ ಈ ನೌಕೆಯನ್ನು ಚಂದ್ರನತ್ತ ಸಾಗಿಸಲು ಪ್ರಯತ್ನಿಸಿ ಯಶಸ್ವಿಯಾಗಿದೆ. ಇನ್ನು ೪ ದಿನಗಳಲ್ಲಿ, ಅಂದರೆ ಆಗಸ್ಟ್ ೫ ರಂದು ಚಂದ್ರನ ಗುರುತ್ವಾಕರ್ಷಣೆಗೆ ಆಕರ್ಷಿತಗೊಂಡು ಕಕ್ಷೆಯ ಸುತ್ತ ಪ್ರತಿ ಹಂತದಲ್ಲಿ ವೇಗ ಕಡಿತ ಮಾಡಿಕೊಂಡು ಪ್ರದಕ್ಷಿಸಲಾರಂಭಿಸಲಿದೆ. ಆಗಸ್ಟ್ ೨೩ ಅಥವಾ ೨೪ ರಂದು ಚಂದ್ರ ನೆಲೆ ತಲುಪಲಿದೆ.

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ

ನವದೆಹಲಿ, ಆ. ೧: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ೧೦೦ ರೂ.ನಷ್ಟು ಅಗ್ಗವಾಗಿದೆ. ಮಂಗಳವಾರದಿAದ ಜಾರಿಗೆ ಬರುವಂತೆ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ೯೯.೭೫ ರೂ. ಇಳಿಕೆಯಾಗಿದೆ. ೧೯ ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ರೂ. ೯೯.೭೫ ಕಡಿತವಾಗಿದೆ. ಈ ಹಿನ್ನೆಲೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಮಾರಾಟ ಬೆಲೆ ರೂ. ೧,೬೮೦ ಆಗಿದೆ. ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ರೂ. ೧೮೫೨.೫೦ ಆಗಿದೆ. ಕೋಲ್ಕತ್ತಾದಲ್ಲಿ ೧೮೨೦.೫೦ ಹಾಗೂ ಚೆನ್ನೆöÊನಲ್ಲಿ ರೂ. ೧೮೫೨.೫೦ ಆಗಿದೆ. ಆದರೆ ಗೃಹಬಳಕೆ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಗುರುಗ್ರಾಮ್ ಮಸೀದಿಗೆ ಬೆಂಕಿ-ಹರಿಯಾಣದ ನುಹ್‌ನಲ್ಲಿ ಕರ್ಫ್ಯೂ ಜಾರಿ!

ಗುರುಗ್ರಾಮ್, ಆ. ೧: ಗುರುಗ್ರಾಮ್‌ನ ಮಸೀದಿಯೊಂದರ ಮೇಲೆ ಗುಂಪೊAದು ದಾಳಿ ಮಾಡಿ ಇಮಾಮ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು ಮಸೀದಿಗೆ ಬೆಂಕಿ ಹಚ್ಚಲಾಗಿದೆ. ನುಹ್ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಮೆರವಣಿಗೆಯನ್ನು ತಡೆಯುವ ಪ್ರಯತ್ನದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಗುರುಗ್ರಾಮ್‌ನ ಸೆಕ್ಟರ್ ೫೭ ಪ್ರದೇಶದಲ್ಲಿ ೨೬ ವರ್ಷದ ಇಮಾಮ್ ನನ್ನು ಹತ್ಯೆ ಮಾಡಲಾಗಿದ್ದು ನೆರೆಯ ನುಹ್‌ನಿಂದ ಹಿಂಸಾಚಾರ ಹರಡುತ್ತಿದ್ದಂತೆ ಮಸೀದಿಗೆ ಬೆಂಕಿ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಧ್ಯರಾತ್ರಿಯ ನಂತರ ಗುಂಪೊAದು ಸೆಕ್ಟರ್ ೫೭ರ ಅಂಜುಮನ್ ಮಸೀದಿಗೆ ನುಗ್ಗಿ, ಗುಂಪಿನಲ್ಲಿದ್ದ ಕೆಲವರು ಮಸೀದಿಯಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿ ಬೆಂಕಿ ಹಚ್ಚಿದ್ದಾರೆ. ಏತನ್ಮಧ್ಯೆ, ಅಧಿಕಾರಿಗಳು ಮಂಗಳವಾರ ನುಹ್‌ನಲ್ಲಿ ಕರ್ಫ್ಯೂ ಜಾರಿ ಮಾಡಿದ್ದು ಹಿಂಸಾಚಾರದಲ್ಲಿ ಇಬ್ಬರು ಗೃಹ ರಕ್ಷಕರು ಸಾವನ್ನಪ್ಪಿದ್ದಾರೆ. ಮೃತ ಗೃಹರಕ್ಷಕರನ್ನು ನೀರಜ್ ಮತ್ತು ಗುರುಸೇವಕ್ ಎಂದು ಗುರುತಿಸಲಾಗಿದೆ. ಅವರನ್ನು ಖೇದಾಲಿ ದೌಲಾ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು. ನುಹ್‌ನಲ್ಲಿ ಸೋಮವಾರ ನಡೆದ ಹಿಂಸಾಚಾರದಲ್ಲಿ ಗಾಯಗೊಂಡಿದ್ದ ಇನ್ನಿಬ್ಬರು ಗಾಯಗೊಂಡು ಸಾವನ್ನಪ್ಪಿದ್ದಾರೆ.