ಗೋಣಿಕೊಪ್ಪಲು, ಜು. ೨೮: ಗಿರಿಜನರು ಪೌಷ್ಟಿಕ ಆಹಾರದಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಸರ್ಕಾರ ಅನುಷ್ಠಾನ ಮಾಡಿರುವ ಯೋಜನೆಯನ್ನು ಸಮರ್ಪಕವಾಗುವಂತೆ ಸದ್ಬಳಕೆ ಮಾಡಿಕೊಳ್ಳುವಂತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಕರೆ ನೀಡಿದರು.
ಪೊನ್ನಂಪೇಟೆ ತಾಲೂಕು ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ ಗ್ರಾಮದಲ್ಲಿರುವ ಗಿರಿಜನರ ಬಸವೇಶ್ವರ ಬಡಾವಣೆ ಯಲ್ಲಿ ಗಿರಿಜನರಿಗೆ ೨೦೨೩-೨೪ನೇ ಸಾಲಿನ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು, ಗಿರಿಜನರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ರೀತಿಯ ಯೋಜನೆಗಳನ್ನು ಜಾರಿ ಗೊಳಿಸಿದೆ. ಇದರಲ್ಲಿ ಪೌಷ್ಟಿಕ ಆಹಾರ ವಿತರಣೆಯು ಒಂದಾಗಿದೆ. ಸರ್ಕಾರ ನೀಡುವ ಆಹಾರವನ್ನು ಸದ್ಬಳಕೆ ಮಾಡಿ ಕೊಳ್ಳುವ ಮೂಲಕ ಗಿರಿಜನರು ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದರು.
ವರ್ಷಕ್ಕೆ ಆರು ಬಾರಿ ಗಿರಿಜನರಿಗೆ ಪೌಷ್ಟಿಕ ಆಹಾರ ಈ ಹಿಂದೆ ವಿತರಿಸಲಾಗುತ್ತಿತ್ತು. ಇದೀಗ ಸರ್ಕಾರದೊಂದಿಗೆ ಚರ್ಚೆ ನಡೆಸಿ ವರ್ಷದ ೧೨ ತಿಂಗಳು ನೀಡಲು ಮನವಿ ಸಲ್ಲಿಸಲಾಗಿದೆ. ಕನಿಷ್ಟ ೯ ತಿಂಗಳಾದರೂ ಈ ಪ್ರಯೋಜನ ಗಿರಿ ಜನರಿಗೆ ಲಭಿಸಲಿದೆ. ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದೆ. ಆಹಾರ ಕಿಟ್ನಲ್ಲಿ ಗುಣಮಟ್ಟದ ಪೌಷ್ಟಿಕ ಆಹಾರವಿದ್ದು ಇದನ್ನು ಸರಿಯಾಗಿ ಬಳಕೆ ಮಾಡುವಂತೆ ತಿಳಿಸಿದರು.
ಪೌಷ್ಟಿಕ ಆಹಾರ ವಿತರಣೆಯ ಟೆಂಡರ್ ಪ್ರಕ್ರಿಯೆ ಇನ್ನೂ ಕೂಡ ಆರಂಭವಾಗಿಲ್ಲ. ಶಾಸಕರ ಶ್ರಮದಿಂದ ಗಿರಿಜನರು ಪೌಷ್ಟಿಕ ಆಹಾರದಿಂದ ಹಿಂದೆ ವಿತರಿಸಲಾಗುತ್ತಿತ್ತು. ಇದೀಗ ಸರ್ಕಾರದೊಂದಿಗೆ ಚರ್ಚೆ ನಡೆಸಿ ವರ್ಷದ ೧೨ ತಿಂಗಳು ನೀಡಲು ಮನವಿ ಸಲ್ಲಿಸಲಾಗಿದೆ. ಕನಿಷ್ಟ ೯ ತಿಂಗಳಾದರೂ ಈ ಪ್ರಯೋಜನ ಗಿರಿ ಜನರಿಗೆ ಲಭಿಸಲಿದೆ. ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದೆ. ಆಹಾರ ಕಿಟ್ನಲ್ಲಿ ಗುಣಮಟ್ಟದ ಪೌಷ್ಟಿಕ ಆಹಾರವಿದ್ದು ಇದನ್ನು ಸರಿಯಾಗಿ ಬಳಕೆ ಮಾಡುವಂತೆ ತಿಳಿಸಿದರು.
ಪೌಷ್ಟಿಕ ಆಹಾರ ವಿತರಣೆಯ ಟೆಂಡರ್ ಪ್ರಕ್ರಿಯೆ ಇನ್ನೂ ಕೂಡ ಆರಂಭವಾಗಿಲ್ಲ. ಶಾಸಕರ ಶ್ರಮದಿಂದ ಗಿರಿಜನರು ಪೌಷ್ಟಿಕ ಆಹಾರದಿಂದ ಕಾರ್ಯದರ್ಶಿ ಎ.ಜೆ. ಬಾಬು, ಮಹಿಳಾ ಕಾಂಗ್ರೆಸ್ನ ಕಡೆಮಾಡ ಕುಸುಮ, ನೂರೇರ ಧನ್ಯ, ಪುಲಿಯಂಡ ರೋಶನ್, ಹಾತೂರು ಗ್ರಾಮ ಪಂಚಾಯಿತಿ ಸದಸ್ಯ ಕೊಕ್ಕಂಡ ಗಿಣಿ ಗಣಪತಿ, ಅರುವತ್ತೋಕ್ಕಲು ಗ್ರಾಮ ಪಂಚಾಯಿತಿ ಸದಸ್ಯ ಸುಗುಣ ಸೋಮಯ್ಯ, ಕಾಂಗ್ರೆಸ್ ಪ್ರಮುಖರಾದ ಕೊಕ್ಕಂಡ ರೋಶನ್, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೆ.ಸಿ. ಅಪ್ಪಣ್ಣ, ಹಾತೂರು ಗ್ರಾಮ ಪಂಚಾಯಿತಿ ಪಿಡಿಓ ಉಸ್ಮಾ, ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.