ಚೆಯ್ಯಂಡಾಣೆ, ಜು. ೨೮: ಎಡಪಾಲದ ನಜ್ಮುಲ್ ಹುದಾ ಮದರಸದ "ಮುಅಲ್ಲಿಂ ಡೇ" ಕಾರ್ಯಕ್ರಮ ಎಡಪಾಲ ಜುಮಾ ಮಸೀದಿಯಲ್ಲಿ ಯಶಸ್ವಿಯಾಗಿ ಜರುಗಿತು.
ಧ್ವಜಾರೋಹಣವನ್ನು ಪೊಯಾಪಳ್ಳಿ ಜುಮಾ ಮಸೀದಿಯ ಅಧ್ಯಕ್ಷ ಕೆ.ಯು. ಶಾಫಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬೂಬಕ್ಕರ್ ಮುಸ್ಲಿಯಾರ್ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯರು ಹಾಗೂ ಕೊಡಗು ಜಿಲ್ಲಾ ನಾಇಬ್ ಖಾಝಿಗಳಾದ ಅಬ್ದುಲ್ಲ ಫೈಝಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನೌಫಲ್ ಹುದವಿ ಮುಅಲ್ಲಿಂ ಡೇ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮೊದಲು ಎಡಪಾಲ ಜುಮಾ ಮಸೀದಿ ಮುದರ್ರಿಸ್ ನಿಝಾರ್ ಫೈಝಿ ನೇತೃತ್ವದಲ್ಲಿ ಅಂಡತ್ ಮಾನಿ ದರ್ಗಾ ಹಾಗೂ ಸಮೀಪದ ಖಬರ್ ಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್, ಎನ್ಹೆಚ್ವೈಎ ಅಧ್ಯಕ್ಷ ರಿಯಾಝ್, ಮದರಸ ಅಧ್ಯಾಪಕರು, ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತ ಹಾಗೂ ವಂದನೆಯನ್ನು ಸದರ್ ಮುಅಲ್ಲಿಂ ಹಮೀದ್ ಮುಸ್ಲಿಯಾರ್ ನೆರವೇರಿಸಿದರು.