ಮಡಿಕೇರಿ, ಜು. ೨೮: ಮಡಿಕೇರಿಯ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ರೋಟರಿ ವುಡ್ಸ್ ಮತ್ತು ನೆಹರು ಯುವ ಕೇಂದ್ರ ಹಾಗೂ ಜಿಲ್ಲಾ ಯುವ ಒಕ್ಕೂಟದ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ತಿಮ್ಮಯ್ಯ ಸ್ಮಾರಕ ಭವನ ವ್ಯಾಪ್ತಿಯಲ್ಲಿ ಹತ್ತು ಸಸಿಗಳನ್ನು ನೆಡಲಾಯಿತು.

ರೋಟರಿ ವುಡ್ಸ್ ಅಧ್ಯಕ್ಷ ಕೆ. ವಸಂತ್ ಕುಮಾರ್, ಕಾರ್ಯದರ್ಶಿ ಕಿಗ್ಗಾಲು ಹರೀಶ್, ಸಹಾಯಕ ಗವರ್ನರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್. ಸಂಪತ್ ಕುಮಾರ್, ಕ್ಲಬ್ ಖಜಾಂಚಿ ಧನಂಜಯ ಶಾಸ್ತಿç, ನೆಹರು ಯುವ ಕೇಂದ್ರದ, ದೀಪ್ತಿ, ರಂಜಿತ, ಜಿಲ್ಲಾ ಒಕ್ಕೂಟ ಅಧ್ಯಕ್ಷ ಸುಕುಮಾರ್, ತಿಮ್ಮಯ್ಯ ಮ್ಯೂಸಿಯಂ ವ್ಯವಸ್ಥಾಪಕ ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಸೇರಿದಂತೆ ರೋಟರಿ ಸದಸ್ಯರು ಪಾಲ್ಗೊಂಡಿದ್ದರು.