ಮಡಿಕೇರಿ, ಜು. ೨೮: ಸಮಾಜ-ಸಂಘ ಸಂಸ್ಥೆಗಳು ಸಮುದಾಯದ ಬಡವರ, ಕಟ್ಟಕಡೆಯ ಮಂದಿಯ ಪರವಾಗಿ ಕೆಲಸ ಮಾಡುವಂತಾಗ ಬೇಕೆಂದು ಜಿಲ್ಲೆಯ ಶಾಸಕರುಗಳಾದ ಡಾ. ಮಂಥರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರುಗಳು ಅಭಿಮತ ವ್ಯಕ್ತಪಡಿಸಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟ, ಕೊಡಗು ಗೌಡ ಸಮಾಜ ಹಾಗೂ ಎಲ್ಲ ಗೌಡ ಸಮಾಜಗಳ ಪರವಾಗಿ ಕೊಡಗು ಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಡಿಕೇರಿ, ಜು. ೨೮: ಸಮಾಜ-ಸಂಘ ಸಂಸ್ಥೆಗಳು ಸಮುದಾಯದ ಬಡವರ, ಕಟ್ಟಕಡೆಯ ಮಂದಿಯ ಪರವಾಗಿ ಕೆಲಸ ಮಾಡುವಂತಾಗ ಬೇಕೆಂದು ಜಿಲ್ಲೆಯ ಶಾಸಕರುಗಳಾದ ಡಾ. ಮಂಥರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರುಗಳು ಅಭಿಮತ ವ್ಯಕ್ತಪಡಿಸಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟ, ಕೊಡಗು ಗೌಡ ಸಮಾಜ ಹಾಗೂ ಎಲ್ಲ ಗೌಡ ಸಮಾಜಗಳ ಪರವಾಗಿ ಕೊಡಗು ಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಉಳಿದುಬಿಡುತ್ತಾರೆ. ಹಾಗಾಗಿ ಜವಾಬ್ದಾರಿಯಲ್ಲಿರುವವರು ಪಾಪದವರನ್ನು ಮುಂದೆ ತರಬೇಕೆಂದು ಹೇಳಿದರು. ಕಾನೂನು ರೀತಿಯ ಅಥವಾ ರಾಜಕೀಯ ಹೋರಾಟ ಗಳಲ್ಲಿ ಎಲ್ಲರಿಗೂ ಮುಂದೆ ಬರಬೇಕೆಂಬ ಆಸೆ ಇರುತ್ತದೆ. ಕೆಲವರಿಗೆ ಮಾತ್ರ ಅವಕಾಶ ಸಿಗುತ್ತದೆ. ಎಲ್ಲರಿಗೂ ಸಿಗುವದು ಕಷ್ಟ, ತಾಳ್ಮೆ ಇದ್ದರೆ ಸಿಕ್ಕೇ ಸಿಗುತ್ತದೆ. ಈ ನಿಟ್ಟಿನಲ್ಲಿ ಸಮಾಜಗಳೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ; ಸಮಾಜದಲ್ಲಿ ಶಾಂತಿ ಸೌಹಾರ್ದತೆ ಯನ್ನು ಕಾಪಾಡುವ ದೊಡ್ಡ ಜವಾಬ್ದಾರಿ ಆಡಳಿತ ವರ್ಗ ಹಾಗೂ ಶಾಸಕರದ್ದಾಗಿರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯವಸ್ಥೆಗಳ ಬಗ್ಗೆ, ಗೊಂದಲ, ಮೂಲಭೂತ ಹಕ್ಕುಗಳ ಬಗ್ಗೆ ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಅದರ ಈಡೇರಿಕೆ ಕಾನೂನು ಹಾಗೂ ಸಂವಿಧಾನ ಆಧಾರಿತವಾಗಿ ನಡೆಯಬೇಕು. ಭಾವನೆಗಳ ಆಧಾರದಲ್ಲಿ ನಡೆಯಬಾರದು, ಕಾನೂನು, ಸಂವಿಧಾನಾತ್ಮಕವಾಗಿ ಉತ್ತರ ನೀಡಬೇಕು. ಸಂವಿಧಾನದಲ್ಲಿ ಕಾನೂನು ಉತ್ಕೃಷ್ಟವಾಗಿದೆ, ಇದನ್ನು ಅರಿಯದೆ ರಾಜಕಾರಣಿಗಳು ಜನರ ಹಾಗೂ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಆದರೆ ಇದಕ್ಕೆ ನಾವಿಬ್ಬರು ಶಾಸಕರು ಅವಕಾಶ ನೀಡುವದಿಲ್ಲ ಎಂದು ಹೇಳಿದರು.
ಜನರ ಭಾವನೆಗಳನ್ನ, ಚಿಂತನೆಗಳನ್ನ ರಕ್ಷಣೆ ಮಾಡಬೇಕು. ಎಲ್ಲವನ್ನೂ ಬಗೆಹರಿಸಬೇಕು. ಆದರೆ, ಕಾನೂನಿನಡಿಯಲ್ಲಿ ಶಾಂತಿಯುತವಾಗಿ ಮಾಡಬೇಕೆಂಬ ಚಿಂತನೆ ಇರಬೇಕು. ಇದಕ್ಕೆ ಎಲ್ಲರ
(ಮೊದಲ ಪುಟದಿಂದ) ಸಹಕಾರ ಇರುತ್ತದೆ ಎಂಬ ನಂಬಿಕೆ ಇದೆ. ಜಾತಿ, ಧರ್ಮ, ಶ್ರಿಮಂತ, ಬಡವ, ಜನಾಂಗ ಬೇಧ ಬಾವಗಳು ನಾವೇ ಕಾಲ್ಪನಿಕವಾಗಿ ಸೃಷ್ಟಿ ಮಾಡಿಕೊಂಡಿರುವAತದ್ದು, ಎಲ್ಲವನ್ನೂ ಬೇಧಿಸಿ, ಯಾವದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಸಂಪೂರ್ಣವಾಗಿ, ಸಂವಿಧಾನಾತ್ಮಕ, ಕಾನೂನಾತ್ಮಕವಾಗಿ ಸರಿಪಡಿಸಿಕೊಂಡು ಹೋಗುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಗೌಡ ಸಮಾಜದ ಅಭಿವೃದ್ಧಿಗೆ ಹಿಂದಿನ ಮುಖ್ಯಮಂತ್ರಿಗಳು ೭೫ ಲಕ್ಷ ಅನುದಾನ ನೀಡಿದ್ದಾರೆಂದು ತಿಳಿದಿದೆ. ಈ ಬಾರಿ ಹೆಚ್ಚಿನ ಅನುದಾನ ಸಿಗಬಹುದೆಂಬ ವಿಶ್ವಾಸವಿದೆ, ನಾವಿಬ್ಬರೂ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ.
ಸಮಾಜದ ಏಳಿಗೆಗೆ, ಬಡವರ ಏಳಿಗೆ, ವಿದ್ಯಾಭಿವೃದ್ಧಿ, ಎಲ್ಲರಿಗೂ ಸ್ಥಾನಮಾನ, ಅವಕಾಶ ಸಿಗುವ ನಿಟ್ಟಿನಲ್ಲಿ ಸಮಾಜಗಳು ಕೆಲಸ ಮಾಡಬೇಕು. ನಮ್ಮ ಮಕ್ಕಳು ನಗರ ಪ್ರದೇಶದಲ್ಲಿ ಸ್ಪರ್ಧೆ ಮಾಡುವ ಅನಿವಾರ್ಯತೆ ಇದೆ. ಜಿಲ್ಲೆಯ ಎಲ್ಲ ಮೂಲ ನಿವಾಸಿಗಳ ಮಕ್ಕಳನ್ನು ಮುಂದೆ ತರುವ ಕೆಲಸ ನಾವು ಮಾಡಬೇಕು, ಉನ್ನತ ಹುದ್ದೆಗೇರುವಂತಾಗುವ ಕೆಲಸ ಮಾಡಬೇಕಿದೆ, ಎಲ್ಲರೂ ಇದಕ್ಕೆ ಕೈಜೋಡಿಸಬೇಕೆಂದರು. ಎಲ್ಲ ಜಾತಿ, ಧರ್ಮ, ಮತದವರು ಮತ ನೀಡಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಎಲ್ಲರಿಗೂ ಪ್ರಶ್ನೆ ಮಾಡುವ ಸಂಪೂರ್ಣ ಅಧಿಕಾರ ಇದೆ, ಉತ್ತರ ಕೊಡುವ ಜವಾಬ್ದಾರಿ ನನ್ನದಾಗಿದೆ, ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಸಾಮರಸ್ಯದ ನಾಡನ್ನು ಕಟ್ಟೋಣವೆಂಬ ಆಶಯ ವ್ಯಕ್ತಪಡಿಸಿದರು. ಇದೇ ಸಂದರ್ಭ ಜಿಲ್ಲೆಯ ಹಾಗೂ ಹೊರ ಜಿಲ್ಲೆಯಲ್ಲಿರುವ ಗೌಡ ಸಮಾಜಗಳ, ಸಂಘಟನೆಗಳ ಪ್ರಮುಖರು ಶಾಸಕರುಗಳನ್ನು ಸನ್ಮಾನಿಸಿ, ಗೌರವಿಸಿದರು.
ವೇದಿಕೆಯಲ್ಲಿ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಉಪಸ್ಥಿತರಿದ್ದರು. ಕೊಡಗು ಗೌಡ ಸಮಾಜಗಳ ಅಧ್ಯಕ್ಷ ಸೂರ್ತಲೆ ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಳಿಬೈಲು ಹರಿಣಿ ಪ್ರಾರ್ಥಿಸಿದರೆ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಸ್ವಾಗತಿಸಿದರು. ದಂಬೆಕೋಡಿ ಸುಹಾಸಿನಿ ಹಾಗೂ ಕೊಲ್ಯದ ಗಿರೀಶ್ ಸನ್ಮಾನಿತರ ಪರಿಚಯ ಮಾಡಿದರು. ಮೂಡಗದ್ದೆ ವಿನೋದ್ ನಿರೂಪಿಸಿದರೆ, ಅಮೆ ಸೀತಾರಾಂ ವಂದಿಸಿದರು.
ಕೊಡಗು ಜಿಲ್ಲೆಯ ಜಮ್ಮಾ ಹಿಡುವಳಿ ಮೂಲನಿವಾಸಿ ಜನಾಂಗಕ್ಕೆ ಬಂದೂಕು ಹೊಂದಲು ಭಾರತೀಯ ಬಂದೂಕು ಕಾಯ್ದೆ ೧೯೫೯ರ ಕಲಂ ೩ ಮತ್ತು ೪ ರಿಂದ ವಿನಾಯಿತಿಗೆ ದತ್ತವಾದ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಸಂಖ್ಯೆ ೧೭.೪.೧೯೬೨ ಪಿ. ೪ ದಿ. ೬.೭.೧೯೬೩ರ ಆದೇಶ ಪರಿಪಾಲನೆಯಲ್ಲಿ ಕೊಡಗಿನ ಜಿಲ್ಲಾಡಳಿತ ಕೊಡಗಿನ ಎಲ್ಲಾ ಮೂಲನಿವಾಸಿ ಜನಾಂಗಗಳನ್ನು ಕೂರ್ಗ್ ಬೈರೇಸ್ ಎಂಬ ಪರಭಾಷೆಯಲ್ಲಿ ಪರಿಗಣಿಸದೆ ಅನ್ಯಾಯವೆಸಗುತ್ತಿರುವುದನ್ನು ತಾವುಗಳು ಪರಿಶೀಲಿಸಿ ಸರಕಾರದ ಮಟ್ಟದಲ್ಲಿ ಕ್ರಮಕೈಗೊಂಡು ಕೊಡಗಿನ ಎಲ್ಲಾ ಮೂಲನಿವಾಸಿಗಳಿಗೆ ಜಾತಿ ಆಧಾರದಲ್ಲಿ ಈ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು.
ಭಾಗಮಂಡಲ ಕ್ಷೇತ್ರದ ಶ್ರೀ ಭಗಂಡೇಶ್ವರ ದೇವಸ್ಥಾನ, ಹಾಗೆಯೇ ತಲಕಾವೇರಿ ಕ್ಷೇತ್ರದ ಆಡಳಿತ ವೈಖರಿ ಬಗ್ಗೆ ಆಗಿಂದಾಗ್ಗೆ ಎರಡು ಜನಾಂಗಗಳ ಮಧ್ಯೆ ವ್ಯತಿರಿಕ್ತ ಅಭಿಪ್ರಾಯಗಳು ಏಳುತ್ತಿದ್ದು, ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ಹಾಗೂ ಜಾತಿ ವೈಷಮ್ಯದ ಕಿಡಿ ಭುಗಿಲೇಳುತ್ತಿರುವ ಬಗ್ಗೆ ಪರಿಶೀಲಿಸುವಂತೆ ಕೋರಿಕೆ. ಶತಮಾನಗಳಿಂದ ಆಚರಣೆಯಲ್ಲಿರುವ ತಕ್ಕ ಮುಖ್ಯಸ್ಥರ ಅಧಿಕಾರ ಹಾಗೆಯೇ ಪುರೋಹಿತರ ವೈದಿಕ ಕಾರ್ಯಗಳು ಯಥಾಸ್ಥಿತಿಯಲ್ಲಿ ಮುಂದುವರಿಯುವAತೆ ಕ್ರಮಕೈಗೊಳ್ಳಬೇಕಾಗಿದೆ.
ಶ್ರೀ ಭಗಂಡೇಶ್ವರ ಹಾಗೂ ತಲಕಾವೇರಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸ್ಥಾನ ನೇಮಕಾತಿಯಲ್ಲಿ ರಾಜಕೀಯ ನುಸುಳಿ ಸ್ಥಳೀಯರನ್ನು ನಿರ್ಲಕ್ಷಿಸಲಾಗುತ್ತಿದೆ. ಭಾಗಮಂಡಲ ಹಾಗೂ ಸುತ್ತಮುತ್ತಲಿನಲ್ಲಿ ಅಧಿಕ ಸಂಖ್ಯೆಯಲ್ಲಿ ನೆಲೆಸಿ ಅಲ್ಲಿನ ದೈನಂದಿನ ದೇವಸ್ಥಾನಗಳ ಆಗುಹೋಗುಗಳಲ್ಲಿ ಪ್ರತಿನಿತ್ಯ ಪಾತ್ರವಹಿಸುತ್ತಿರುವ ಗೌಡ ಜನಾಂಗಕ್ಕೆ ಇಂದಿನವರೆಗೆ ಅಧ್ಯಕ್ಷ ಸ್ಥಾನ ಸಿಗದೆ, ಹಿಂದಿನ ಮೂರು ಅವಧಿಯಲ್ಲಿಯೂ ಅವಕಾಶ ವಂಚಿತವಾಗಿದೆ. ಮುಂದಿನ ಸಾಲಿನ ವ್ಯವಸ್ಥಾಪನಾ ಸಮಿತಿ ರಚನೆ ಸಂದರ್ಭ ಗೌಡ ಜನಾಂಗದ ಒಬ್ಬ ಸಮರ್ಥ ಹಾಗೂ ಜಾತ್ಯತೀತ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ಲಭಿಸುವ ಬಗ್ಗೆ ಕ್ರಮಕೈಗೊಳ್ಳಬೇಕಿದೆ.
ನೂತನವಾಗಿ ನಿರ್ಮಾಣಗೊಂಡಿರುವ ಕೊಡಗು ಗೌಡ ಸಮಾಜ ಕಟ್ಟಡದ ಮೇಲಂತಸ್ತಿನಲ್ಲಿ ಒಂದು ಸಾಂಸ್ಕೃತಿಕ ಭವನ ನಿರ್ಮಾಣದ ಉದ್ದೇಶವನ್ನು ಕೊಡಗು ಗೌಡ ಸಮಾಜ ಹೊಂದಿದ್ದು, ಇದರ ಕಾಮಗಾರಿಗೆ ಸರಕಾರದಿಂದ ಹೆಚ್ಚಿನ ಅನುದಾನ ಮಂಜೂರಾತಿಗೆ ಕ್ರಮಕೈಗೊಳ್ಳಬೇಕು.
ಕೊಡಗು ಗೌಡ ಸಮಾಜ ಹಲವು ಜನಾಂಗಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮಡಿಕೇರಿ ತಾಲೂಕು ಮದೆ ಗ್ರಾಮದಲ್ಲಿ ಜಾಗ ಒಂದರ ಮಂಜೂರಾತಿಗೆ ಕೋರಿದ್ದು, ಸಂಬAಧಿತ ಪೂರ್ಣ ಕಡತ ಜಿಲ್ಲಾಡಳಿತದ ಶಿಫಾರಸ್ಸಿನೊಂದಿಗೆ ಸರಕಾರದ ಸಚಿವಾಲಯದಲ್ಲಿದೆ. ಅದರ ಮಂಜೂರಾತಿಗೆ ಆಗಬೇಕಾದ ಸೂಕ್ತ ಕ್ರಮ ವಹಿಸಿ ಸಹಕರಿಸುವಂತೆ ವಿನಂತಿ. (ಜಿಲ್ಲಾಡಳಿತದಿಂದ ಸರಕಾರಕ್ಕೆ ಸಲ್ಲಿಸಲಾದ ಶಿಫಾರಸ್ಸು ಪತ್ರದ ಪ್ರತಿಯನ್ನು ಲಗತ್ತಿಸಿದೆ.)
ಕೊಡಗು ಗೌಡ ಸಮಾಜ ಮಡಿಕೇರಿ ಕಟ್ಟಡದ ವಾಹನ ನಿಲುಗಡೆ ಜಾಗಕ್ಕೆ ಹೊಂದಿಕೊAಡ ಮಣ್ಣಿನ ಬರೆ ಮಳೆ ನೀರಿನಿಂದ ಕುಸಿದು ಅಪಾಯವಾಗದಂತೆ ಕಾಂಕ್ರಿಟ್ ತಡೆಗೋಡೆಯನ್ನು ಜಿಲ್ಲಾಡಳಿತಕ್ಕೆ ಲಭ್ಯವಿರುವ ವಿಪತ್ತು ಪರಿಹಾರ ನಿಧಿಯಿಂದ ಅನುದಾನ ಒದಗಿಸಿ ನಿರ್ಮಿಸಲು ಕ್ರಮಕೈಗೊಂಡು ಆಗಬಹುದಾದ ಅನಾಹುತವನ್ನು ತಡೆಯುವ ಬಗ್ಗೆ ಕ್ರಮವಹಿಸುವಂತೆ ಮನವಿ ಸಲ್ಲಿಸಲಾಗಿದೆ.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಶಾಸಕ ಮಂಥರ್ಗೌಡ, ಕೆಲವೊಂದು ಬಹಳ ವರ್ಷಗಳ ಸಮಸ್ಯೆಯಾಗಿವೆ. ಕಾನೂನಿನಡಿಯಲ್ಲಿ ಸಾಧ್ಯವಾಗುವುದನ್ನು ಶಾಸಕ ಪೊನ್ನಣ್ಣ ಅವರೊಡಗೂಡಿ ಪರಿಹರಿಸುವುದಾಗಿ ಭರವಸೆ ನೀಡಿದರು.
ಶಾಸಕ ಪೊನ್ನಣ್ಣ ಪ್ರತಿಕ್ರಿಯಿಸಿ, ಬೇಡಿಕೆಗಳ ಈಡೇರಿಕೆಗೆ ಈರ್ವರು ಸೇರಿ ಪ್ರಯತ್ನಿಸುತ್ತೇವೆ. ಜಾಗ ಮಂಜೂರಾತಿ ಹಾಗೂ ಅನುದಾನಕ್ಕೆ ಸಂಬAಧಿಸಿದAತೆ ಸರಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.