ಪೊನ್ನಂಪೇಟೆ, ಜು. ೨೮: ಸಾಲದ ಬಾಧೆಯಿಂದಾಗಿ ವ್ಯಕ್ತಿಯೊಬ್ಬರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೊನ್ನಂಪೇಟೆ ಸಮೀಪದ ಚಿಕ್ಕಮಂಡೂರು ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಚಿಕ್ಕಮಂಡೂರು ನಿವಾಸಿ ದಿವಂಗತ ಅಜ್ಜಿಕುಟ್ಟಿರ ಗಣಪತಿ ಎಂಬವರ ಪುತ್ರ ಉಮೇಶ್ (ಉಮ್ಮಣ-೫೩) ಎಂಬವರೇ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.
ಉಮೇಶ್ ಅವರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಇತ್ತೀಚಿಗೆ ವಿಪರೀತ ಸಾಲ ಮಾಡಿಕೊಂಡಿರುವುದೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ. ಬೆಳಿಗ್ಗೆ ಎದ್ದ ಉಮೇಶ್ ಅವರು ಎಂದಿನAತೆ ಹಾಲು ಕರೆಯಲು ಕೊಟ್ಟಿಗೆಯತ್ತ ತೆರಳಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೊದಲೇ ನಿರ್ಧರಿಸಿದಂತಿದ್ದ ಉಮೇಶ್ ಕೊಟ್ಟಿಗೆ ಸಮೀಪದ ಲೈನ್ಮನೆಗೆ ತೆರಳಿ ಕೋವಿಯಿಂದ ಸ್ವಯಂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬAಧಿಸಿದAತೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಉಮೇಶ್ ಪತ್ನಿ, ಇಬ್ಬರು ಪುತ್ರಿಯರನ್ನು ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.