'ಬೆಂಗಳೂರು, ಜು. ೨೮ : ಹುಲಿಗಳ ಸಂರಕ್ಷಣೆಗಾಗಿ ರಾಜ್ಯದಲ್ಲಿ ಕೈಗೊಂಡ ವಿವಿಧ ಉಪಕ್ರಮಗಳ ಫಲವಾಗಿ ವ್ಯಾಘ್ರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಅಂರ‍್ರಾಷ್ಟಿçÃಯ ಹುಲಿದಿನಕ್ಕೆ ೨ ದಿನಗಳ ಮುನ್ನ ರಾಷ್ಟಿçÃಯ ಪ್ರಾಣಿ ಹುಲಿ ಗಣತಿಯ ವಿವರ ಬಿಡುಗಡೆ ಮಾಡಿರುವ ಅವರು, ರಾಷ್ಟಿçÃಯ ಹುಲಿ ಪ್ರಾಧಿಕಾರ (ಎನ್.ಟಿ.ಸಿ.ಎ.) ಮಾರ್ಗಸೂಚಿಯ ಪ್ರಕಾರ ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಹುಲಿ ಗಣತಿ ಮಾಡಲಾಗುತ್ತದೆ. ಇದರ ಭಾಗವಾಗಿ ಆನೆ, ಮಾಂಸಹಾರಿ ಮತ್ತು ಸಸ್ಯಹಾರಿ ಪ್ರಾಣಿಗಳ ಗಣತಿಯನ್ನೂ ದೇಶಾದ್ಯಂತ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಘಟ್ಟದ ಹೆಚ್ಚಿನ ಭಾಗ ಹೊಂದಿರುವ ಕರ್ನಾಟಕವು ಹುಲಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, ೨೦೨೧-೨೨ರ ಅವಧಿಯಲ್ಲಿ ಹುಲಿ ಗಣತಿಯನ್ನು ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ನಡೆಸಿದ್ದು, ರಾಜ್ಯದ ೫ ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಹಾಗೂ ಕಾಳಿ ಕಾನನ ಸೇರಿದಂತೆ ೩೭ ವನ್ಯಜೀವಿ ಧಾಮಗಳಲ್ಲಿ ಒಟ್ಟು ೩೭ ವಿಭಾಗದಲ್ಲಿ ನಡೆಸಲಾಗಿದೆ. ಈ ಗಣತಿಗೆ ಕ್ಯಾಮರಾ ಟ್ರ‍್ಯಾಪ್ ಮತ್ತು ಲೈನ್ ಟ್ರನ್ಸಾö್ಯಕ್ಟ್ ವಿಧಾನ ಬಳಸಲಾಗಿದೆ ಎಂದು ವಿವರಿಸಿದರು. ರಾಜ್ಯದ ಎಲ್ಲ ಸಂರಕ್ಷಿತ ಅರಣ್ಯಗಳಲ್ಲಿ ಅಳವಡಿಸಲಾಗಿದ್ದ ೫೩೯೯ ಕ್ಯಾಮರಾ ಟ್ರಾö್ಯಪ್‌ನಲ್ಲಿ ೬೬ ಲಕ್ಷಕ್ಕೂ ಹೆಚ್ಚು ವನ್ಯ ಜೀವಿಗಳ ಛಾಯಾಚಿತ್ರ ಕ್ರೋಢೀಕರಣವಾಗಿದ್ದು, ಆಧುನಿಕ ತಂತ್ರಜ್ಞಾನ ಬಳಸಿ ಹುಲಿಗಳ ಚಲನವಲನ, ಪ್ರಾದೇಶಿಕ ಪರಿಮಿತಿ (ಣeಡಿಡಿiಣoಡಿಥಿ) ಹುಲಿಗಳ ಮೈಮೇಲಿನ ಪಟ್ಟೆಗಳ ಆಧಾರದ ಮೇಲೆ ಹುಲಿಗಳ ಸಂಖ್ಯೆಯನ್ನು ಲೆಕ್ಕಹಾಕಲಾಗಿದೆ ಎಂದು ವಿವರ ನೀಡಿದರು.

೨೦೧೮ರಲ್ಲಿ ನಡೆದಿದ್ದ ಅಖಿಲ ಭಾರತ ಹುಲಿ ಗಣತಿಯ ಪ್ರಕಾರ ಕರ್ನಾಟಕದಲ್ಲಿ ನಡೆದ ಕ್ಯಾಮರಾ ಟ್ರಾö್ಯಪ್‌ನಲ್ಲಿ ೪೦೪ ಹುಲಿಗಳು ಪತ್ತೆಯಾಗಿದ್ದವು ಇದನ್ನು ವನ್ಯಜೀವಿ ಸಂಖ್ಯಾಶಾಸ್ತçದ ಪ್ರಕಾರ ವಿಶ್ಲೇಷಿಸಿದಾಗ ರಾಜ್ಯದಲ್ಲಿ ೪೭೫ರಿಂದ ೫೭೩ ಹುಲಿಗಳು ಇರಬಹುದು ಎಂದು ವಿಶ್ಲೇಷಿಸಲಾಗಿತ್ತು. ೨೦೨೨ರಲ್ಲಿ ರಾಜ್ಯದಲ್ಲಿ ೪೩೫ ಹುಲಿಗಳು ಪತ್ತೆಯಾಗಿದ್ದು ಈ ಸಂಖ್ಯೆ ಇನ್ನೂ ಹೆಚ್ಚು ಆಗಬಹುದು ಎಂದು ವಿಶ್ಲೇಷಿಸಬಹುದು ಎಂದರು.

ಬAಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ೬೧೨, ಭದ್ರಾದಲ್ಲಿ ೩೩೦, ಬಿಆರ್.ಟಿ.ಯಲ್ಲಿ ೨೮೮, ಕಾಳಿಯಲ್ಲಿ ೪೪೮, ನಾಗರಹೊಳೆಯಲ್ಲಿ ೫೦೨ ಕ್ಯಾಮರಾ ಪಾಯಿಂಟ್ ಅಳವಡಿಸಲಾಗಿತ್ತು. ಇದರಲ್ಲಿ ೩೭೬ ಅನನ್ಯ (ವಿಶಿಷ್ಟ) ಹುಲಿಗಳು ಪತ್ತೆಯಾಗಿವೆ ಎಂದು ವಿವರ ನೀಡಿದರು.

ಇದಲ್ಲದೆ ಬನ್ನೇರುಘಟ್ಟ ರಾಷ್ಟಿçÃಯ ಉದ್ಯಾನದಲ್ಲಿ ೮೦, ಬೆಳಗಾವಿ ವಿಭಾಗದಲ್ಲಿ ೧೧೯, ಭದ್ರಾವತಿ ವಿಭಾಗದಲ್ಲಿ ೧೨೧, ಕಾವೇರಿ ವನ್ಯಜೀವಿ ಧಾಮದಲ್ಲಿ ೪೭೩, ಚಿಕ್ಕಮಗಳೂರು ವನ್ಯಜೀವಿ ಅರಣ್ಯದಲ್ಲಿ ೪೧, ಹಳಿಯಾಳದಲ್ಲಿ ೧೦೬, ಕಾರವಾರ ವಿಭಾಗದಲ್ಲಿ ೧೩೫, ಕೊಪ್ಪ ವನ್ಯಜೀವಿಧಾಮದಲ್ಲಿ ೫೦, ಕುದುರೇಮುಖ ವಿಭಾಗದಲ್ಲಿ ೧೭೩, ಮಡಿಕೇರಿ (ಬ್ರಹ್ಮಗಿರಿ, ಪುಷ್ಪಗಿರಿ ಮತ್ತು ತಲಕಾವೇರಿ) ವಿಭಾಗದಲ್ಲಿ ೧೭೫, ಮಲೆ ಮಹದೇಶ್ವರ ಬೆಟ್ಟದಲ್ಲಿ ೪೩೨, ಮೈಸೂರು ವಿಭಾಗದಲ್ಲಿ ೩೬, ಶಿವಮೊಗ್ಗ ವನ್ಯಜೀವಿ ಧಾಮದಲ್ಲಿ ೧೮೨, ಶಿರಸಿ ವಿಭಾಗದಲ್ಲಿ ೧೦೭, ವಿರಾಜಪೇಟೆ ವಿಭಾಗದಲ್ಲಿ ೧೧೧, ಯಲ್ಲಾಪುರ ವಿಭಾಗದಲ್ಲಿ ೯೪ ಸೇರಿ ರಾಜ್ಯದಲ್ಲಿ ಒಟ್ಟಾರೆ ೪೭೮೬ ಕ್ಯಾಮರಾ ಪಾಯಿಂಟ್ ಅಳವಡಿಸಲಾಗಿತ್ತು, ಈ ಎಲ್ಲ ಕ್ಯಾಮರಾಗಳಲ್ಲಿ ೧ ಲಕ್ಷ ೬೧ಸಾವಿರದ ೫೩ ರಾತ್ರಿಯ ವೇಳೆ ಸಂಚಾರದ ಚಿತ್ರೀಕರಣ ಪ್ರಯತ್ನ ಮಾಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಪ್ರಪಂಚದಲ್ಲೇ ಮೊದಲ ಬಾರಿಗೆ ಹುಲಿ ಗಣತಿ ನಡೆದಿದ್ದು ಭಾರತದಲ್ಲೇ. ಜಾರ್ಖಂಡ್‌ನ ಪಲ್ಮಾವ್ ಹುಲಿ ರಕ್ಷಿತಾರಣ್ಯದಲ್ಲಿ ಪ್ರಾಯೋಗಿಕ ಗಣತಿ ನಡೆದಿತ್ತು. ೧೯೭೨ರಲ್ಲಿ ವನ್ಯಜೀವಿ ಕಾಯ್ದೆ ಜಾರಿಗೆ ಬಂದ ನಂತರ ೧೯೭೨ರಿಂದ ಹುಲಿ ಗಣತಿಯನ್ನು ಆರಂಭಿಸಲಾಯಿತು ಮತ್ತು ಪ್ರತಿ ೪ ಸಾಲಿನಲ್ಲಿ ಒಮ್ಮೆ ಗಣತಿ ಕಾರ್ಯ ನಡೆಸಲಾಗುತ್ತಿದೆ ಎಂದು ವಿವರಿಸಿದರು.

-ರವಿಕುಮಾರ್