ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, ಜು. ೨೮: ೨೦೧೭ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಪರ ಪ್ರಮುಖ ವಕೀಲರೊಬ್ಬರು ಏಪ್ರಿಲ್ ತಿಂಗಳಿನಲ್ಲಿ ತಮ್ಮ ಕಾರಿಗೆ ಗುಂಡು ಹಾರಿಸಿದ ಘಟನೆಯನ್ನು ಉಲ್ಲೇಖಿಸಿ ಪೊಲೀಸ್ ರಕ್ಷಣೆ ಕೋರಿ ಬೆಂಗಳೂರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಡಿಕೇರಿ ಮೂಲದ ವಕೀಲ ಪಿ. ಕೃಷ್ಣಮೂರ್ತಿ ಅವರು ಕಳೆದ ಏಪ್ರಿಲ್ ೧೩ ರಂದು ಗುರುವಾರ ತಡರಾತ್ರಿ ತಮ್ಮ ಕಾರಿಗೆ ಗುಂಡು ಹಾರಿಸಿದ ಪ್ರಕರಣದ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಎಫ್‌ಐಆರ್ ಪ್ರತಿಯೊಂದಿಗೆ ಭದ್ರತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕೃಷ್ಣಮೂರ್ತಿ ಅವರಿಗೆ ಭದ್ರತೆ ಒದಗಿಸುವ ಕುರಿತು ನ್ಯಾಯಾಲಯವು ಕೊಡಗು ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ಅವರಿಂದ ವರದಿ ಕೇಳಿದೆ. ಈ ಹಿಂದೆ ವಕೀಲರ ಕಾರಿಗೆ ಗುಂಡು ಹಾರಿಸಿದ ಪ್ರಕರಣದ ಫೋರೆನ್ಸಿಕ್ ತನಿಖೆಯಲ್ಲಿ ಕೃಷ್ಣಮೂರ್ತಿ ಅವರ ಕಾರಿನ ಮೇಲೆ ಹಾರಿದ ಬುಲೆಟ್ ಮುಂಭಾಗದ ಎಡ ಬಾಗಿಲಿನ ಒಳಭಾಗಕ್ಕೆ ಗುಂಡು ತಗುಲಿರುವುದನ್ನು ತಿಳಿಸಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಐವರು ಪ್ರಮುಖ ಆರೋಪಿಗಳಿಗೆ ವಕೀಲರಾಗಿರುವ ಕೃಷ್ಣಮೂರ್ತಿ ಅವರು ತಾವು ಕುಶಾಲನಗರದ ವಿಹೆಚ್‌ಪಿ ಭಜರಂಗದಳ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮನೆಗೆ ಹಿಂತಿರುಗುವಾಗ ರಾತ್ರಿ ೧೧ ಘಂಟೆಗೆ ಹತ್ಯೆ ಯತ್ನ ನಡೆಸಲಾಗಿದೆ ಎಂದು ದೂರು ಸಲ್ಲಿಸಿದ್ದರು.

ಎಫ್‌ಐಆರ್ ಪ್ರಕಾರ, ಕೃಷ್ಣಮೂರ್ತಿ ಅವರು ಗುಂಡು ಹಾರಿದ ಶಬ್ದವನ್ನು ಕೇಳಿದ್ದು ಮತ್ತು ಬಲಭಾಗದ ಹಿಂದಿನ ಕಿಟಕಿಯು ಒಡೆದು ಗುಂಡು ಒಳಗೆ ಪ್ರವೇಶಿಸಿರುವುದನ್ನೂ ನೋಡಿದ್ದಾರೆ. ಬಾಗಿಲಿನ ಒಳಗೆ ರಂಧ್ರ ಆಗಿದ್ದು ಸೀಟಿನ ಮೇಲೆ ಕಿಟಕಿಯ ಗಾಜಿನ ಚೂರುಗಳು ಬಿದ್ದಿದ್ದವು. ಇದು ತನ್ನನ್ನು ಕೊಲ್ಲುವ ಪ್ರಯತ್ನ ಎಂದು ಕೃಷ್ಣಮೂರ್ತಿ ಹೇಳಿದ್ದರು. ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಕೊಲೆ ಯತ್ನ ಮತ್ತು ಶಸ್ತಾçಸ್ತç ಬಳಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೋರೆನ್ಸಿಕ್ ತನಿಖೆ ಪ್ರಕಾರ ಇದಕ್ಕೆ .೨೨ ರೈಫಲ್ ಅನ್ನು ಬಳಸಲಾಗಿದೆ ಆದರೆ ಬುಲೆಟ್ ಎಡ ಬಾಗಿಲಿನ ಒಳಭಾಗಕ್ಕೆ ತಗುಲಿತು, ಗುಂಡು ಹಾರಿಸಿದಾಗ ಬಂದೂಕನ್ನು ಹಿಡಿದಿರುವ ವ್ಯಕ್ತಿಯು ಯಾವ ಸ್ಥಾನದಲ್ಲಿ ಇದ್ದ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ವಕೀಲ ಮತ್ತು ವಿಎಚ್‌ಪಿ ಕೊಡಗು ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಅವರು ಗೌರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್, ಅಮಿತ್ ದೆಗ್ವೇಕರ್, ರಾಜೇಶ್ ಬಂಗೇರಾ ಮತ್ತು ಶರದ್ ಕಲಾಸ್ಕರ್ ಅವರನ್ನು ಪ್ರತಿನಿಧಿಸುತ್ತಾರೆ, ಕಾಳೆ ಮತ್ತು ದೆಗ್ವೇಕರ್ ಈ ಹಿಂದೆ ಸನಾತನ ಸಂಸ್ಥೆ ಮತ್ತು ಅದರ ಅಂಗಸAಸ್ಥೆಯಾದ ಹಿಂದೂ ಜನಜಾಗೃತಿ ಸಮಿತಿ (ಊಎS)ಯೊಂದಿಗೆ ನಿಕಟ ಸಂಬAಧ ಹೊಂದಿದ್ದರು. ಏಪ್ರಿಲ್ ೧೩ ರಂದು ವಕೀಲರ ಮೇಲೆ ಗುಂಡು ಹಾರಿಸಿದ ಘಟನೆಯ ನಂತರ, ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು ಏಪ್ರಿಲ್ ೧೩ ರಂದು ಕರ್ನಾಟಕ ಪೊಲೀಸ್ ಪ್ರಧಾನ ಕಚೇರಿಯನ್ನು ಸಂಪರ್ಕಿಸಿ ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯನ್ನು ಕೋರಿ ಹಿರಿಯ ಪೊಲೀಸ್ ಅಧಿಕಾರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ. ವಕೀಲ ಕೃಷ್ಣಮೂರ್ತಿ ಅವರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಪಿಎಫ್‌ಐ ಮತ್ತು ನಕ್ಸಲೀಯರ ಸಂಭಾವ್ಯ ಪಾತ್ರವನ್ನು ತನಿಖೆ ಮಾಡಿ ಎಂದು ಸಮಿತಿಯ ಕರ್ನಾಟಕ ಘಟಕವು ಏಪ್ರಿಲ್ ೧೩ರಂದು ತನ್ನ ಸಾಮಾಜಿಕ ಮಾಧ್ಯಮ ಪ್ರಕಟಣೆಯಲ್ಲಿ ಒತ್ತಾಯಿಸಿತ್ತು.

ಈ ಕುರಿತು ಪೊಲೀಸ್ ಉನ್ನತಾಧಿಕಾರಿ ಕೆ. ರಾಮರಾಜನ್ ಅವರನ್ನು ಸಂಪರ್ಕಿಸಿದಾಗ ತಮಗೆ ಬೆಂಗಳೂರು ನ್ಯಾಯಾಲಯದಿಂದ ಯಾವುದೇ ನೋಟೀಸ್ ಬಂದಿಲ್ಲ ಎಂದು ತಿಳಿಸಿದ್ದಾರೆ.