*ಗೋಣಿಕೊಪ್ಪ, ಜು. ೨೮: ಮಹಿಳೆಯರು ಶಿಕ್ಷಣಕ್ಕೆ ಹೆಚ್ಚ ಒತ್ತು ನೀಡಿದಾಗ ಸ್ವಾವಲಂಬಿ ಬದುಕು ಕಂಡುಕೊಳ್ಳಲು ಸಾಧ್ಯ ಎಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು ಕರೆ ನೀಡಿದರು.
ಸ್ವಾತಂತ್ರö್ಯ ಹೋರಾಟಗಾರರ ಸ್ಮಾರಕ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಘಟಕದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಮಾತನಾಡಿದರು.
ತಮ್ಮ ಕಾರ್ಯವ್ಯಾಪ್ತಿಯಲ್ಲಿ ಶಿಸ್ತು ಬೆಳೆಸಿಕೊಂಡಾಗ ಮತ್ತು ಮಾಡುವ ಕೆಲಸದಲ್ಲಿ ಶೃದ್ಧೆ ಮತ್ತು ಭಕ್ತಿ ಹೊಂದಿದಾಗ ಸಾಧÀನೆ ಸಿದ್ಧಿಸುತ್ತದೆ ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಗ್ರಾ.ಪಂ. ಸದಸ್ಯ ಕೊಣಿಯಂಡ ಭೋಜಮ್ಮ ಮಾತನಾಡಿ, ಮನೆ ನಿಭಾಯಿಸುವಲ್ಲಿನ ಒತ್ತಡದಲ್ಲಿ ಮಹಿಳೆಯರು ಹೊರ ಪ್ರಪಂಚಕ್ಕೆ ದೂರವಾಗಿ ಉಳಿಯುತ್ತಿದ್ದೇವೆ. ಕೌಟುಂಬಿಕ ಹಿನ್ನೆಲೆಯ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿಯೂ ಕ್ರಿಯಾತ್ಮಕ ಸಮತೋಲನವನ್ನು ಕಾಪಾಡಿ ಕೊಳ್ಳಬೇಕು ಎಂದು ಹೇಳಿದರು.
ಗ್ರಾ.ಪಂ. ಸದಸ್ಯೆ ಹಾಗೂ ಒಕ್ಕೂಟದ ಕಾರ್ಯದರ್ಶಿ ಎಂ. ಮಂಜುಳಾ ಮಾತನಾಡಿ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಸ್ವಾವಲಂಬಿ ಬದುಕು ಕಂಡುಕೊಳ್ಳುವ ಮೂಲಕ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯ ನಿರತರಾದಾಗ ಬದುಕಿನಲ್ಲಿ ಉತ್ತಮ ವ್ಯವಸ್ಥೆಯೆಂದು ದೊರಕಬಲ್ಲದು. ಆರ್ಥಿಕವಾಗಿಯೂ ಬಲ ಹೊಂದಲು ತಮ್ಮ ಕೆಲಸದಲ್ಲಿನ ಪ್ರೇಮ ಮತ್ತು ಶಿಸ್ತು ಪಾಲನೆ ಬಹು ಮುಖ್ಯವಾಗುತ್ತದೆ.
ಈ ನಿಟ್ಟಿನಲ್ಲಿ ಚಿಂತಿತರಾಗುವ ಮೂಲಕ ಮಹಿಳೆಯರು ಮನೆಯ ಒಳಗಿನ ನಿಯಂತ್ರಣದಿAದ ಹೊರಬಂದು ಸಮಾಜದಲ್ಲಿ ಉತ್ತಮ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳುವುದರೊAದಿಗೆ ಕುಟುಂಬ ಸುಧಾರಣೆಗೆ ಆರ್ಥಿಕತೆಯನ್ನು ಒದಗಿಸಿಕೊಡುವ ಶಕ್ತಿವಂತಳಾಗಬೇಕು ಎಂದು ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯ ಅಧಿಕಾರಿ ಶ್ರೇಯಾ ಮಾತನಾಡಿ, ಮಹಿಳೆಯರು ಸಮಾಜದಲ್ಲಿ ಗುರುತಿಸಿಕೊಂಡು ಉತ್ತಮ ವೇದಿಕೆಯನ್ನು ಸೃಷ್ಟಿಸಿ ಕೊಳ್ಳಬೇಕು ಎಂಬ ಚಿಂತನೆಯಲ್ಲಿ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಅರಳಿದೆ.
ಈ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ಬಲ ತುಂಬುತ್ತಿದೆ. ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು. ಸವಿತಾ, ವಿಮಲಾ ಹಾಗೂ ಒಕ್ಕೂಟದ ಸದಸ್ಯರುಗಳು ಹಾಜರಿದ್ದರು.