ಪೊನ್ನAಪೇಟೆ, ಜು. ೨೮: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸು ವಲ್ಲಿ ಪೊನ್ನಂಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಗೋಣಿಕೊಪ್ಪಲು ಸಮೀಪದ ಅರ್ವತೊಕ್ಕಲು ಮೈಸೂರಮ್ಮ ನಗರದ ವಿ.ಎಸ್. ಗುರುದತ್ (೩೧) ಬಂಧಿತ ಆರೋಪಿ.
ಗೋಣಿಕೊಪ್ಪಲು ಕಡೆಯಿಂದ ಗೂಡ್ಸ್ ಆಟೋ (ಕೆ.ಎ.೧೨, ಸಿ .೧೪೯೯)ನಲ್ಲಿ ಬೆಕ್ಕೆಸೊಡ್ಲೂರು, ಕಾನೂರು ಕಡೆಗೆ ಗಾಂಜಾ ಮಾರಾಟ ಮಾಡಲು ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಆರೋಪಿ ಗುರುದತ್ನನ್ನು ಹಿಡಿಯಲು ಪೊನ್ನಂಪೇಟೆ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. ಇಂದು ಬೆಳಗ್ಗೆ ೯.೩೦ ರ ಸಮಯದಲ್ಲಿ ಮುಗಟಗೇರಿ ಜಂಕ್ಷನ್ ಸಮೀಪ ಗೂಡ್ಸ್ ಆಟೋ ಬಂದಾಗ ಪೊಲೀಸರು ಆಟೋ ನಿಲ್ಲಿಸುವಂತೆ ಕೈ ತೋರಿಸಿ ದಾಗ, ಆರೋಪಿ ಆಟೋ ನಿಲ್ಲಿಸದೇ ವೇಗ ಹೆಚ್ಚಿಸಿ ಪರಾರಿಯಾಗಲು ಯತ್ನಿಸಿದಾಗ, ಪೊಲೀಸರು ಬೆನ್ನಟ್ಟಿ ಆತನನ್ನು ಸೆರೆ ಹಿಡಿದಿದ್ದಾರೆ.
ಗೂಡ್ಸ್ ಆಟೋದಲಿದ್ದ ೧೦ ಗ್ರಾಂ ತೂಕದ ೧೭ ಗಾಂಜಾ ಪ್ಯಾಕೇಟ್ಗಳನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಯನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಈ ಹಿಂದೆ ಕೂಡ ಆರೋಪಿ ಗುರುದತ್ನನ್ನು ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭ ಎರಡು ಬಾರಿ ಗೋಣಿಕೊಪ್ಪ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಆರೋಪಿ ಮತ್ತೆ ಗಾಂಜಾ ಮಾರಾಟದಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ.
ಎಸ್.ಪಿ. ರಾಮರಾಜನ್, ಅಡಿಷನಲ್ ಎಸ್ಪಿ ಸುಂದರ್ರಾಜ್ ಅವರ ನಿರ್ದೇಶನದ ಮೇರೆಗೆ, ಡಿವೈಎಸ್ಪಿ ಮೋಹನ್ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಗೋವಿಂದ ರಾಜು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆ ಸಬ್ ಇನ್ಸ್ಪೆಕ್ಟರ್ ಲಕ್ಷö್ಮಣ ಕಾಮಣ್ಣವರ್, ಕ್ರೆöÊಮ್ ಸಬ್ ಇನ್ಸ್ಪೆಕ್ಟರ್ ಹೆಚ್.ಸಿ.ಸುಬ್ರಮಣ್ಯ, ಸಿಬ್ಬಂದಿಗಳಾದ ಮಹದೇಶ್ವರ ಸ್ವಾಮಿ, ಹರೀಶ್, ಪ್ರವೀಣ್, ಗಣೇಶ್, ಪ್ರಮೀಳ, ಭಾಗವಹಿಸಿದ್ದರು.
- ಚನ್ನನಾಯಕ