sಸುಂಟಿಕೊಪ್ಪ, ಜು. ೨೫: ೭ನೇ ಹೊಸಕೋಟೆ ಸಮೀ ಪದ ಅಂದಗೋವೆ ಪೈಸಾರಿ ಯಲ್ಲಿ ಮಂಗಳವಾರ ಬೆಳಿಗ್ಗೆ ೯.೩೦ ಗಂಟೆಯ ಸುಮಾರಿಗೆ ಉರಗ ತಜ್ಞ ಶಾಜಿ ಅವರ ಮನೆಯ ಮುಂಭಾಗದಲ್ಲಿ ಮರಿಯಾನೆಯೊಂದಿಗೆ ಎರಡು ಕಾಡಾನೆಗಳು ಸಂಚರಿಸಿವೆ. ಇದನ್ನು ಕಂಡ ಗ್ರಾಮಸ್ಥರು ಬೊಬ್ಬೆ ಹೊಡೆದಿದ್ದಾರೆ. ಪರಿಣಾಮ ಕಾಡಾನೆಗಳು ಕಾಡಿಗೆ ತೆರಳುವ ಬದಲಾಗಿ ಊರಿನೊಳಗೆ ಪ್ರವೇಶಿಸಿದೆ. ಇದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ವಿಚಾರ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರು.