ಸೋಮವಾರಪೇಟೆ, ಜು. ೨೫: ಬೆಂಗಳೂರು-ಜಾಲ್ಸೂರು ರಾಜ್ಯ ಹೆದ್ದಾರಿ ಕಾಮಗಾರಿ ಸೋಮವಾರಪೇಟೆಯ ಬಾಣವಾರ ದಿಂದ ಸೋಮವಾರಪೇಟೆ ಪಟ್ಟಣ ದವರೆಗೆ ಪ್ರಗತಿಯಲ್ಲಿದ್ದು, ಈ ರಸ್ತೆ ಕಾಮಗಾರಿಗೆ ರಾಜ್ಯ ಸರ್ಕಾರ ರೂ. ೧೦ ಕೋಟಿ ನೀಡಿದ್ದರೂ, ಸಮರ್ಪಕವಾಗಿ ಕಾಮಗಾರಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಬಾಣಾವರದಿಂದ ಪಟ್ಟಣಕ್ಕೆ ಸಂಪರ್ಕಿಸುವ ೧೨ ಕಿಲೋ ಮೀಟರ್ ರಸ್ತೆಯಲ್ಲಿ ರಸ್ತೆ ವಿಸ್ತರಣೆ, ಡಾಂಬರೀಕರಣ ಮಾಡುವುದು, ರಸ್ತೆಯ ಬದಿಯಲ್ಲಿ ಚರಂಡಿ ಮತ್ತು ಮೋರಿಗಳ ನಿರ್ಮಾಣಕ್ಕೆ ಹಣ ನೀಡಲಾಗಿದೆ. ಆದರೆ, ರಸ್ತೆ ಬದಿಯ ಚರಂಡಿಯನ್ನು ಕೆಲವು ಕಡೆಗಳಲ್ಲಿ ರಸ್ತೆಗಿಂತಲೂ ಎತ್ತರ ಮಾಡಲಾಗಿದೆ. ತಣ್ಣೀರುಹಳ್ಳ ವ್ಯಾಪ್ತಿಯಲ್ಲಿ ಚರಂಡಿ ಬದಿಗೆ ಮಣ್ಣನ್ನು ತುಂಬದೆ, ನೀರು ನಿಂತು ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಚರಂಡಿಯನ್ನು ದಾಟುವಾಗಿ ಹಲವರು ಬೀಳುತ್ತಿದ್ದಾರೆ. ಅಲ್ಲದೆ, ಗುಂಡಿಗಳಲ್ಲಿ ನೀರು ಸಂಗ್ರ ಹವಾಗಿ ರಸ್ತೆ ಮೇಲೆ ಹರಿ ಯುತ್ತಿದ್ದು, ಸಂಬAಧಿಸಿದ ಇಂಜಿನಿಯರ್ ಗಳಿಗೆ ತಿಳಿಸಿ ದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಗ್ರಾಮ ಸ್ಥರಾದ

ಹರೀಶ್ ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಮಗಾರಿ ಮಾಡಿಸುತ್ತಿರುವ ಚರಣ್, ರಸ್ತೆ ಬದಿಯಲ್ಲಿ ಪಂಚಾಯಿತಿ ಕುಡಿಯುವ ನೀರು ಸರಬರಾಜು ಮಾಡುವ ಕಬ್ಬಿಣದ ಪೈಪ್ ಇದ್ದು, ಅದನ್ನು ಸರಿಪಡಿಸಲು ನೀರು ಸರಬರಾಜು ಮಾಡುವ ಕೆಲಸಗಾರರು ಬಿಡುವಂತೆ ಕೇಳಿದ್ದರಿಂದ ಹಾಗೆಯೇ ಬಿಟ್ಟಿರುವುದಾಗಿ ತಿಳಿಸಿದರು.

ಲೋಕೋಪಯೋಗಿ ಇಲಾ ಖೆಯ ಎಇಇ ವೆಂಕಟೇಶ್ ಮಾತನಾಡಿ, ಮಳೆ ಹೆಚ್ಚಾಗಿ ರುವುದರಿಂದ ಕಾಮಗಾರಿ ಮಾಡಲು ಸಾಧ್ಯವಾಗಿಲ್ಲ. ಮುಂದಿನ ಒಂದೆರಡು ದಿನಗಳ ಒಳಗೆ ಉಳಿದಿರುವ ಗುಂಡಿಗಳನ್ನು ಮುಚ್ಚಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.