ಮೈಸೂರು, ಜು. ೨೫: ಮುಂದಿನ ಆಗಸ್ಟ್ ಒಂದನೇ ತಾರೀಖಿನಿಂದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಯಲ್ಲಿ ದ್ವಿಚಕ್ರ, ತ್ರಿಚಕ್ರ, ಎತ್ತಿನ ಗಾಡಿ, ಟ್ರಾö್ಯಕ್ಟರ್ ಮತ್ತಿತರ ನಿಧಾನವಾಗಿ ಸಾಗುವ ಎಲ್ಲಾ ರೀತಿಯ ಜೆಸಿಬಿ, ಕೃಷಿ ವಾಹನಗಳನ್ನು ನಿಷೇಧಿಸಿ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಈ ನಿಷೇಧ ಮುಂದಿನ ಆಗಸ್ಟ್ ಒಂದರಿAದ ಜಾರಿಗೆ ಬರಲಿದೆ.
ಕೇವಲ ೯೦ ನಿಮಿಷಗಳಲ್ಲಿ ಬೆಂಗಳೂರಿನಿAದ ಮೈಸೂರಿಗೆ ತಲುಪುವ ಈ ೧೧೯-ಕಿಮೀ ಇ-ವೇ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಧಿಕೃತವಾಗಿ ಉದ್ಘಾಟನೆಯಾದಾಗಿನಿಂದ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದೆ. ಕಳೆದ ಅಕ್ಟೋಬರ್ನಲ್ಲಿ ಸಂಚಾರಕ್ಕೆ ತೆರೆಯಲಾದ ಈ ಎಕ್ಸ್ಪ್ರೆಸ್ ವೇ ನಲ್ಲಿ ಈವರೆಗೆ ಸುಮಾರು ೬೦೦ ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು ೧೬೦ ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನಿಷೇಧಿಸಲು ಚರ್ಚೆಗಳು ನಡೆಯುತ್ತಿತ್ತು. ಈ ಎಕ್ಸ್ಪ್ರೆಸ್ವೇನಲ್ಲಿ ವಾಹನಗಳಿಗೆ ಘಂಟೆಗೆ ೧೦೦ ಕಿಲೋಮೀಟರ್ ವೇಗದಲ್ಲಿ ಮಾತ್ರ ಚಲಿಸಲು ಅವಕಾಶ ಕಲ್ಪಿಸಲಾಗಿದೆ. ದ್ವಿ, ತ್ರಿಚಕ್ರ ವಾಹನಗಳಿಗೆ ಅವಕಾಶ ನೀಡಿದರೆ ಇತರ ವಾಹನಗಳು ೯೦ ನಿಮಿಷಗಳಲ್ಲಿ ಮತ್ತೊಂದು ಕಡೆಗೆ ತಲುಪುವುದು ಸಾಧ್ಯವಾಗುವುದಿಲ್ಲ ಅಲ್ಲದೆ ಈ ವಾಹನಗಳು ಲೇನ್ ಶಿಸ್ತನ್ನೂ ಪಾಲಿಸುವುದಿಲ್ಲ ಎಂಬ ಆರೋಪ ಇದೆ. ಅಲ್ಲದೆ ಬೈಕ್ ಸವಾರರು ಹುಚ್ಚಾಟ ಆಡುವುದಲ್ಲದೆ ವಿಪರೀತ ವೇಗದಲ್ಲಿ ಚಾಲಿಸುವುದರಿಂದ ಇತರ ವಾಹನಗಳು ಬೈಕ್ಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸುತ್ತಿವೆ.
ಅಲ್ಲದೆ ಬೈಕ್ಗಳಿಗೆ ರಾತ್ರಿ ವೇಳೆ ಚಾಲನೆಗೆ ಅವಕಾಶ ನೀಡುವುದರಿಂದ ದುಷ್ಕರ್ಮಿಗಳು ಇತರ ವಾಹನಗಳ ಸವಾರರನ್ನು ದರೋಡೆ ಮಾಡುವ ಅವಕಾಶವೂ ಇದೆ. ಈ ಹಿಂದೆ ಈ ಹೆದ್ದಾರಿಯಲ್ಲಿ ಪೊಲೀಸರ ಹೆಸರಿನಲ್ಲಿ ಕಾರ್ ಚಾಲಕರ ಚಿನ್ನ ದರೋಡೆ ಮಾಡಿದ ಘಟನೆಯೂ ನಡೆದಿತ್ತು. ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರಿನ ನೈಸ್ ರಸ್ತೆಯಲ್ಲಿ ರಾತ್ರಿ ೧೦ ಘಂಟೆಯಿAದ ಬೆಳಿಗ್ಗೆ ೫ ಘಂಟೆಯವರೆಗೆ ಈಗಲೂ ಬೈಕ್ಗಳ ಸಂಚಾರವನ್ನು ನಿಷೇಧಿಸಲಾ ಗಿದೆ. ಸರ್ಕಾರದ ಈ ನಿರ್ಧಾರಕ್ಕೆ ನಾಲ್ಕು ಚಕ್ರ ಮತ್ತು ಲಾರಿ ಮಾಲೀಕರಿಂದ ಬೆಂಬಲ ವ್ಯಕ್ತವಾಗಿದ್ದರೆ ಬೈಕ್ ಸವಾರರಿಂದ ಪ್ರತಿರೋಧ ವ್ಯಕ್ತವಾಗುತ್ತಿದೆ.