ಕರಿಕೆ, ಜು. ೨೨: ಗಡಿ ಗ್ರಾಮದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಲೋಕೋಪಯೋಗಿ ಇಲಾಖೆಯ ಅವೈಜ್ಞಾನಿಕ ಮೋರಿ ಕಾಮಗಾರಿ ಹಾಗೂ ಸಮರ್ಪಕ ಚರಂಡಿ ನಿರ್ಮಾಣ ಮಾಡದ ಕಾರಣ ಹೊಳೆಯ ನೀರು ರಸ್ತೆ ಯಲ್ಲಿ ತುಂಬಿ ಹರಿಯುತ್ತಿದ್ದು ಇದರಿಂದಾಗಿ ಭಾಗಮಂಡಲ- ಕರಿಕೆ ಮತ್ತು ಪಾಣತ್ತೂರು ಅಂತರ್ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಗ್ರಾಮದ ಹಳೆ ಮನೆ ಎಂಬಲ್ಲಿ ರಸ್ತೆಯ ಮೇಲೆ ಎರಡು ಮೂರು ಅಡಿಗಳಷ್ಟು ನೀರು ಹರಿಯುತ್ತಿದ್ದು, ಮೋರಿ ಹಾಗೂ ರಸ್ತೆ ಯ ಚರಂಡಿ ದುರಸ್ತಿಪಡಿಸದೆ ಪ್ರತಿ ವರ್ಷ ಈ ರೀತಿ ಸಮಸ್ಯೆ ಉಂಟಾ ಗುತ್ತಿದೆ ಎಂದು ಗ್ರಾಮಸ್ಥರು ‘ಶಕ್ತಿ' ಯೊಂದಿಗೆ ದೂರಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ದುರಸ್ತಿಗೆ ಕ್ರಮ ವಹಿ ಸಬೇಕಾಗಿದೆ. -ಸುಧೀರ್ ಹೊದ್ದೆಟ್ಟಿ