ಮಡಿಕೇರಿ, ಜು. ೨೨: ನಗರದ ಮುತ್ತಪ್ಪ ದೇವಾಲಯ ಬಳಿಯಲ್ಲಿ ಮರ ಹಾಗೂ ವಿದ್ಯುತ್ ಕಂಬ ಭಾರಿ ಗಾಳಿ, ಮಳೆಗೆ ಧರೆಗುರುಳಿದ ಪರಿಣಾಮ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡು ಸಮಸ್ಯೆ ಉಂಟಾಯಿತು.
ಅಬ್ಬಿಫಾಲ್ಸ್ ಮತ್ತು ಮಾಂದಲ ಪಟ್ಟಿಗೆ ತೆರಳುವ ಸಂಪರ್ಕ ಕಡಿತ ಗೊಂಡು ನೂರಾರು ವಾಹನಗಳು ರಸ್ತೆಯಲ್ಲಿ ನಿಲ್ಲಿಸಿ ಪರದಾಡಿದರು. ವಿದ್ಯಾರ್ಥಿಗಳು ಶಾಲೆಗೆ ತೆರಳಲಾಗದೇ ಸಂದಿಗ್ದ ಸ್ಥಿತಿಗೆ ಸಿಲುಕಿದರು. ಸ್ಥಳೀ ಯರ ಹಾಗೂ ಪೊಲೀಸರ ಸಹಕಾ ರದಿಂದ ವಿದ್ಯುತ್ ಇಲಾಖೆ ಸಿಬ್ಬಂದಿ ಗಳು ಮರ ಹಾಗೂ ವಿದ್ಯುತ್ ಕಂಬ ವನ್ನು ತೆರವುಗೊಳಿಸಿ ಸಂಚಾರಕ್ಕೆ ಅವ ಕಾಶ ಮಾಡಿಕೊಟ್ಟರು. -ಚನ್ನನಾಯಕ