ಕರಿಕೆ, ಜು. ೨೨: ಗ್ರಾಮದಲ್ಲಿ ಸುರಿಯುತ್ತಿರುವ ಗಾಳಿ ಮಳೆಗೆ ರಸ್ತೆಗೆ ಅಲ್ಲಲ್ಲಿ ಮರ, ಬರೆ ಕುಸಿದು ಸಂಚಾರಕ್ಕೆ ಅಡಚಣೆಯಾದ ಘಟನೆ ನಡೆದಿದೆ. ಚೆತ್ತುಕಾಯ ಬರೂಕ ಜಲವಿದ್ಯುತ್ ಉತ್ಪಾದನಾ ಘಟಕಕ್ಕೆ ತೆರಳುವ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಕೆಲ ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡು ಮಣ್ಣು ತೆಗೆಯುವ ಯಂತ್ರದ ಮೂಲಕ ತೆರವುಗೊಳಿಸಲಾಯಿತು. ಪಚ್ಚೆ ಪಿಲಾವು ಪಳ್ಳಿಕಳ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗೆ ಬರೆ ಕುಸಿದ ಪರಿಣಾಮ ಸಂಚಾರ ಬಂದ್ ಆಗಿದ್ದು, ಉಳಿದಂತೆ ಅಲ್ಲಲ್ಲಿ ಬರೆ, ಮರಗಳು ಕುಸಿದಿವೆ. ಅಡಿಕೆ, ರಬ್ಬರ್ ಬಾಳೆ, ಕಾಳುಮೆಣಸು, ಗೇರು ಬೆಳೆಗಳು ಹಾನಿಗೊಳಗಾಗಿವೆ.
-ಸುಧೀರ್ ಹೊದ್ದೆಟ್ಟಿ