ಕರಿಕೆ, ಜು. ೨೩: ನೆರೆಯ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಭಾಗಮಂಡಲ- ಕರಿಕೆ ಅಂತರ್ ರಾಜ್ಯ ಹೆದ್ದಾರಿ ಯ ಮೇಲಡ್ಕ (ಹನ್ನೊಂದನೇ ಮೈಲು) ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿದು ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಲ್ಲದೇ ಇದೇ ರಸ್ತೆಯ ವಿವಿಧ ಕಡೆಗಳಲ್ಲಿ ಮರಗಳು ಉರುಳಿ ಬಿದ್ದು ಹಲವು ತಾಸುಗಳ ಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು. ನಂತರ ತಲಕಾವೇರಿ ವನ್ಯಜೀವಿ ವಿಭಾಗದ ಭಾಗಮಂಡಲ ವಲಯದ ಅರಣ್ಯ ಸಿಬ್ಬಂದಿಗಳು ಮಳೆಯ ನಡುವೆ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಭಾಗಮಂಡಲ-ಕರಿಕೆ ರಸ್ತೆಗೆ ಮರಗಳು ಬಿದ್ದು ರಸ್ತೆ ಬಂದ್ ಆದಲ್ಲಿ ಇಲಾಖೆಯ ಗಮನಕ್ಕೆ ತಂದಲ್ಲಿ ತಮ್ಮ ಸಿಬ್ಬಂದಿ ತ್ವರಿತವಾಗಿ ತೆರವುಗೊಳಿಸು ವುದಾಗಿ ತಲಕಾವೇರಿ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ಕೊಟ್ರೆಶ್ ತಿಳಿಸಿದ್ದಾರೆ.

-ಸುಧೀರ್ ಹೊದ್ದೆಟ್ಟಿ