ಕರಿಕೆ, ಜು. ೨೩: ಚೆತ್ತುಕಾಯ ಪಚ್ಚೆಪಿಲಾವು ಎಂಬಲ್ಲಿ ಗಾಳಿ ಮಳೆಗೆ ಮನೆಯೊಂದರ ಹಿಂಭಾಗದ ಬರೆ ಕುಸಿದು ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಸುಂದರ ನಾಯ್ಕ ಎಂಬವರ ಮನೆಯ ಹಿಂಭಾಗ ಭಾನುವಾರ ಸಂಜೆ ಬರೆ ಹಾಗೂ ಕಲ್ಲುಗಳು ಕುಸಿದಿದ್ದು, ಇನ್ನಷ್ಟು ಕುಸಿಯುವ ಸ್ಥಿತಿಯಲ್ಲಿದ್ದು, ಮನೆಯವರು ಆತಂಕಕ್ಕೀಡಾಗಿದ್ದಾರೆ. -ಸುಧೀರ್ ಹೊದ್ದೆಟ್ಟಿ