ಬೆಂಗಳೂರು, ಜು. ೨೦: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ದಿನ ಬಂಧಿತರಾಗಿರುವ ಶಂಕಿತ ಉಗ್ರರಿಂದ ೪ ಗ್ರೆನೇಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಶಂಕಿತ ಭಯೋತ್ಪಾದಕನೊಬ್ಬನಿಂದ ನಾಲ್ಕು ಗ್ರೆನೇಡ್‌ಗಳನ್ನು ಕೇಂದ್ರ ಅಪರಾಧ ವಿಭಾಗದ ಶೋಧಕರು ಪತ್ತೆ ಮಾಡಿದ್ದಾರೆ. ಜಾಹಿದ್ ತಬ್ರೇಜ್ (೨೫) ಎಂಬ ಬಂಧಿತ ಶಂಕಿತ ಉಗ್ರ ತನ್ನ ಕೊಡಿಗೇಹಳ್ಳಿಯ ನಿವಾಸದಲ್ಲಿ ಈ ಗ್ರೆನೇಡ್‌ಗಳನ್ನು ಇಟ್ಟುಕೊಂಡಿದ್ದ. ಈ ತಂಡದ ನಾಯಕ ಎನ್ನಲಾಗಿದ್ದು, ತಲೆಮರೆಸಿ ಕೊಂಡಿರುವ ಜುನೈದ್ ಎಂಬಾತನಿAದ ಯಾರೋ ಒಬ್ಬರ ಮೂಲಕ ಅವುಗಳನ್ನು ಪಡೆದುಕೊಂಡಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಡಾ.ಶರಣಪ್ಪ ಎಸ್‌ಡಿ ಸುದ್ದಿಗಾರರಿಗೆ ತಿಳಿಸಿದರು.
ಆರೋಪಿಯು ತನ್ನ ಮನೆಯಲ್ಲಿ ಮರಳಿನ ಚೀಲದಲ್ಲಿ ಈ ಗ್ರೆನೇಡ್‌ಗಳನ್ನು ಅಡಗಿಸಿಟ್ಟಿದ್ದ. ಈ ಗ್ರೆನೇಡ್‌ಗಳು ಜೀವಂತ ವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬಂಧಿತ ಶಂಕಿತರಿAದ ಏಳು ಪಿಸ್ತೂಲ್‌ಗಳು, ೪೫ ಲೈವ್ ಕಾರ್ಟ್ರಿಡ್ಜೆಗಳು ಮತ್ತು ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಬಂಧಿತ ಶಂಕಿತ ಉಗ್ರರೆಲ್ಲರೂ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸರಣಿ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಶಂಕಿತರನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.