ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಜು. ೨೦: ಕಳೆದ ೨೦೦೮ ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಿಫಿನ್ ಕ್ಯಾರಿಯರ್ ಬಾಂಬ್ ಸ್ಫೋಟಿಸಿ ಬೆಚ್ಚಿ ಬೀಳಿಸಿದ್ದ ಕೇರಳ ಮೂಲದ ಉಗ್ರ ತಡಿಯಂಟವಿಡೆ ನಝೀರ್ ನಿನ್ನೆ ಬೆಂಗಳೂರಿನಲ್ಲಿ ಸೆರೆಸಿಕ್ಕ ಐವರು ಶಂಕಿತ ಉಗ್ರರ ಜತೆ ಸಂಪರ್ಕದಲ್ಲಿರುವುದು ಮತ್ತು ಅವರಿಗೆ ವಿಧ್ವಂಸಕ ಕೃತ್ಯ ಎಸಗಲು ಪ್ರಚೋದನೆ ನೀಡಿರುವ ಮಾಹಿತಿ ತಿಳಿದು ಬಂದಿದೆ. ಉನ್ನತ ಪೊಲೀಸ್ ಮೂಲಗಳ ಪ್ರಕಾರ ಕೇರಳದ ಪಿಡಿಪಿ ಪಕ್ಷದ ನಾಯಕ ೨೦೦೮ ರ ಬೆಂಗಳೂರು ಸ್ಫೋಟದಲ್ಲಿ ಈಗ ನ್ಯಾಯಾಂಗ ಬಂಧನದಲ್ಲಿರುವ ಅಬ್ದುಲ್ ಮದನಿಯ ಶಿಷ್ಯನೂ ಆಗಿದ್ದಾನೆ. ಈತನ ಉಗ್ರ ಚಟುವಟಿಕೆ ದೊಡ್ಡದಾಗಿದೆ.

ಈಗ ಕೇರಳ ಜೈಲಿನಲ್ಲಿರುವ ನಝೀರ್ ಜೈಲಿನಲ್ಲಿದ್ದುಕೊಂಡೇ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸುತ್ತಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಈತನು ಈ ಹಿಂದೆ ಕೊಡಗಿನ ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿದ್ದುಕೊಂಡು ಶುಂಠಿ ಕೃಷಿಯ ನೆಪದಲ್ಲಿ ಬೆಂಗಳೂರಿನಲ್ಲಿ ಭಯೋತ್ಪಾದನಾ ಕೃತ್ಯವೆಸಗಲು ಸ್ಕೆಚ್ ರೂಪಿಸಿದ್ದ. ಮದನಿಯ ಜೊತೆಗೂಡಿ ೧೯೯೮ರಲ್ಲಿ ಕೊಯಂಬತ್ತೂರಿನಲ್ಲಿ ಸ್ಫೋಟ ನಡೆಸಿದ್ದ ಈತ ನಂತರ ಬೆಂಗಳೂರಿನತ್ತ ಮುಖ ಮಾಡಿದ್ದ. ಬಳಿಕ ಹೊಸತೋಟವನ್ನೇ ತನ್ನ ಕಾರ್ಯಸ್ಥಾನ ಮಾಡಿಕೊಂಡಿದ್ದ ನಝೀರ್ ಬೆಂಗಳೂರಿನಲ್ಲಿ ೨೦೦೮ರಲ್ಲಿ ಸರಣಿ ಸ್ಫೋಟದ ಪ್ರಮುಖ ರೂವಾರಿ ಆಗಿದ್ದು ನಂತರ ನಾಪತ್ತೆಯಾಗಿದ್ದ. ಆಮೇಲೆ ಬಾಂಗ್ಲಾದೇಶಕ್ಕೆ ಪರಾರಿಯಾಗುವ ಯತ್ನದ ವೇಳೆ ಗಡಿಯಲ್ಲಿ ಬಿಎಸ್‌ಎಫ್ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದ. ಅಂದಿನ ಬೆಂಗಳೂರು ಸಿಸಿಬಿ ವಿಭಾಗದ ಡಿಸಿಪಿ ಸಿದ್ಧರಾಮಪ್ಪ ಹಾಗೂ ಎಸಿಪಿ ಓಂಕಾರಪ್ಪ ಮೇಘಾಲಯಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದು ಕರೆತಂದಿದ್ದರು. ಅದರಂತೆ ಪರಪ್ಪನ ಅಗ್ರಹಾರದ ಜೈಲು ಸೇರಿದ್ದ. ಆದರೆ ಅಷ್ಟೊತ್ತಿಗಾಗಲೇ ಈತ ಉಗ್ರ ಸಂಘಟನೆಯಲ್ಲಿ ತನ್ನದೇ ಆದ ಪ್ರಭಾವ ಹೊಂದಿದ್ದನು.

ಪಾಕಿಸ್ತಾನ ಮೂಲದ ಲಷ್ಕರ್ ಏ ತೊಯ್ಬಾದ ದಕ್ಷಿಣ ಭಾರತದ ಕಮಾಂಡರ್ ಆದ ನಝೀರ್‌ಗೆ ಪಾಕಿಸ್ತಾನದಲ್ಲಿ ತರಬೇತಿ, ಬಾಂಬ್ ತಯಾರಿ, ಸ್ಫೋಟಕ ವಸ್ತುಗಳ ಸಂಗ್ರಹಣೆ, ಬಾಂಬ್ ಸ್ಫೋಟ ಮಾಡುವುದು, ಅದಕ್ಕೆ ಬೇಕಾದ ಫಂಡಿAಗ್, ಟ್ರೆöÊನಿಂಗ್ ನೀಡುವುದರಲ್ಲಿ ಪರಿಣಿತಿ ಹೊಂದಿದ್ದನು. ಜೊತೆಗೆ ಈತನ ಪ್ರಮುಖ ಅಸ್ತç ಬ್ರೆöÊನ್‌ವಾಶ್ ಮಾಡುವುದಾಗಿತ್ತು. ಉಗ್ರರಾಗಲು ಸಿದ್ಧರಿರುವ ಮನೋಭಾವದ ವ್ಯಕ್ತಿಗಳ ಶೋಧ ನಡೆಸುತ್ತಿದ್ದ

ಈತ ಅಂತಹವರು ಸಿಕ್ಕರೆ ಬ್ರೆöÊನ್‌ವಾಶ್ ಮೂಲಕ ಉಗ್ರರಾಗಿ ಮಾರ್ಪಡಿಸುತ್ತಿದ್ದ. (ಮೊದಲ ಪುಟದಿಂದ) ಅದರ ಮುಂದುವರೆದ ಭಾಗವಾಗಿ ೨೦೧೭ರಲ್ಲಿ ಆರ್‌ಟಿ ನಗರದಲ್ಲಿ ನಡೆದಿದ್ದ ನೂರ್ ಅಹ್ಮದ್ ಮರ್ಡರ್ ಕೊಲೆ ಪ್ರಕರಣದ ಆರೋಪಿ ಜುನೈದ್ ಈತನಿಗೆ ಪರಿಚಯವಾಗುತ್ತಾನೆ. ಪರಪ್ಪನ ಅಗ್ರಹಾರದ ಜೈಲಿನಲ್ಲೇ ಇಬ್ಬರಿಗೂ ಸ್ನೇಹ ಏರ್ಪಡುತ್ತದೆ.

ನಝೀರ್ ಜೈಲಿನಲ್ಲೇ ತನ್ನ ಬ್ರೆöÊನ್‌ವಾಶ್ ಕೆಲಸ ಆರಂಭಿಸಿದ್ದ. ತನ್ನ ತತ್ವ ಸಿದ್ಧಾಂತಗಳಿಗೆ ಹೋಲುವ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ. ಈತ ಅವರೊಂದಿಗೆ ಆತ್ಮೀಯನಾಗುತ್ತಿದ್ದ. ಪರಮ ದೈವ ಭಕ್ತನಂತೆ ನಟಿಸಿ ತಾನು ಗುರುತಿಸಿದ ಸಮುದಾಯದ ಯುವಕರನ್ನು ಕರೆಸಿಕೊಳ್ಳುತ್ತಿದ್ದ ಈತ ವಿಧ್ವಂಸಕ ಕೃತ್ಯ ಎಸಗಲು ಅವರನ್ನು ಪ್ರೇರೇಪಿಸುತ್ತಿದ್ದ. ಅದೇ ರೀತಿ ಜುನೈದ್ ಭೇಟಿ ಬಳಿಕ ಆತನ ಜೊತೆಗೂಡಿ ಬೇಕಾದ ಸಿದ್ಧತೆ ನಡೆಸಿ ಆತನನ್ನು ಉಗ್ರವಾದದೆಡೆಗೆ ತಯಾರು ಮಾಡಿದ ನಝೀರ್ ಆತನನ್ನು ವಿದೇಶಕ್ಕೆ ಕಳುಹಿಸಿದ್ದ. ಬಳಿಕ ಜುನೈದ್ ಮೂಲಕವೇ ಒಂದು ತಂಡವನ್ನು ರಚಿಸಿ ಆತನ ಮುಖಾಂತರವೇ ಬೆಂಗಳೂರಿನಲ್ಲೊAದು ದೊಡ್ಡ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಸದ್ಯ ಇದೆಲ್ಲಾ ಈಗ ಸಿಸಿಬಿ ವಿಚಾರಣೆ ವೇಳೆ ಬಯಲಾಗಿದ್ದು, ಜುನೈದ್ ೮-೧೦ ಜನ ತಂಡ ಕಟ್ಟಿದ್ದಾನೆ ಎನ್ನಲಾಗಿದೆ. ಈಗ ಬೆಂಗಳೂರಿನಲ್ಲಿ ಐವರು ಸೆರೆಯಾಗಿದ್ದು ದಾವಣಗೆರೆಯಲ್ಲಿ ಗುರುವಾರ ಇನ್ನೊಬ್ಬ ಶಂಕಿತ ಉಗ್ರ ಸೆರೆಯಾಗಿದ್ದಾನೆ.

ಈಗ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಜುನೈದ್ ಜೊತೆ ಮಾತ್ರ ನಝೀರ್ ಚರ್ಚೆ ನಡೆಸುತ್ತಿದ್ದ. ಬೇಕಾದ ಫಂಡಿAಗ್, ಶಸ್ತಾçಸ್ತç ಹಾಗೂ ತರಬೇತಿಗಳನ್ನು ಆತನ ಮುಖಾಂತರವೇ ಕೊಡಿಸಿದ್ದಾನೆ ಎನ್ನಲಾಗಿದೆ. ಈಗ ಸೆರೆಸಿಕ್ಕಿರುವ ಆರು ಶಂಕಿತ ಉಗ್ರರಿಗೂ ಹಾಗೂ ನಝೀರ್‌ಗೂ ಯಾವುದೇ ಸಂಪರ್ಕ ಇರಲಿಲ್ಲ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ತಾಂತ್ರಿಕ ಸಾಕ್ಷö್ಯದ ಮೂಲಕ ಇದನ್ನು ಪತ್ತೆಹಚ್ಚಿದ್ದಾರೆ. ಈಗ ಕೇರಳ ಜೈಲಿನಲ್ಲಿರುವ ನಝೀರ್‌ನನ್ನು ಸಿಸಿಬಿ ಪೊಲೀಸರು ಬಾಡಿ ವಾರೆಂಟ್ ಮುಖಾಂತರ ಕರೆತರಲು ಸಿದ್ಧತೆ ನಡೆಸಿದ್ದು, ವಿಧ್ವಂಸಕ ಕೃತ್ಯದ ಸಂಚಿನ ಮತ್ತಷ್ಟು ಮಾಹಿತಿ ಬಹಿರಂಗವಾಗಲಿದೆ.

ಒAದು ವೇಳೆ ಈ ಶಂಕಿತರನ್ನು ಬಂಧಿಸದೇ ಇದ್ದಿದ್ದರೆ ಇವರು ನಝೀರ್‌ನ ಸೂಚನೆಯಂತೆ ಭಯೋತ್ಪಾದನಾ ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಉಗ್ರ ಕೃತ್ಯ ಎಸಗಲು ಯುವಕರನ್ನು ತಯಾರು ಮಾಡುತ್ತಿರುವ ನಝೀರ್‌ನ ಕೃತ್ಯ ಪೊಲೀಸರನ್ನೂ ಚಕಿತಗೊಳಿಸಿದೆ. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಈತನ ವಿರುದ್ಧ ಒಟ್ಟು ೧೯ ಭಯೋತ್ಪಾದನಾ ಕೃತ್ಯದ ಮೊಕದ್ದಮೆಗಳು ವಿಚಾರಣೆಗೆ ಬಾಕಿ ಇವೆ.