ಪೊನ್ನಂಪೇಟೆ, ಜು. ೨೦: ಕಾಡಾನೆ ಸೇರಿದಂತೆ ಇನ್ನಿತರ ವನ್ಯಪ್ರಾಣಿಗಳ ಹಾವಳಿ ಜತೆಗೆ ಹವಾಮಾನ ವೈಪರೀತ್ಯದಿಂದ ಕಂಗೆಟ್ಟಿರುವ ದಕ್ಷಿಣ ಕೊಡಗಿನ ಕಾಫಿ ಬೆಳೆಗಾರರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ದಕ್ಷಿಣ ಕೊಡಗಿನ ಕೆಲವೆಡೆಗಳಲ್ಲಿ ಕಾಫಿ ಗಿಡಗಳಿಗೆ ಕೊಳೆರೋಗ ಕಾಣಿಸಿಕೊಂಡಿದೆ.

ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಕುಮಟೂರು, ಶ್ರೀಮಂಗಲ, ಪೂಕೊಳ, ಪರಕಟಗೇರಿ, ನೆಮ್ಮಲೆ, ಕುರ್ಚಿ, ಬೀರುಗ, ಟಿ.ಶೆಟ್ಟಿಗೇರಿ, ಬಾಡಗರಗೇರಿ, ತೆರಾಲು, ಬಿರುನಾಣಿ, ನಾಲ್ಕೇರಿ, ಮಂಚಳ್ಳಿ ಪೂಜೆಕಲ್, ಕುಟ್ಟ ಸೇರಿದಂತೆ ಇನ್ನಿತರ ಗ್ರಾಮಗಳ ಕಾಫಿ ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದ್ದು, ಕಾಫಿ ಗಿಡಗಳಲ್ಲಿ ಸೊಂಪಾಗಿದ್ದ, ಗೊಂಚಲು ಗೊಂಚಲು ಕಾಫಿ ಫಸಲು ಕಪ್ಪಾಗಿ ಕೊಳೆತು ನೆಲಕ್ಕುದುರುತ್ತಿವೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ ಕಾಫಿ ಬೆಳೆಗಾರರದ್ದಾಗಿದೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆಸಿದ ಕಾಫಿ ಫಸಲು ಹೀಗೆ ಕೊಳೆತು ನೆಲಕ್ಕುದುರುತ್ತಿರುವುದು ಬೆಳೆಗಾರರನ್ನು ಕಂಗೆಡುವAತೆ ಮಾಡಿದೆ.

ಈ ಬಗ್ಗೆ ಶ್ರೀಮಂಗಲದ ಕಾಫಿ ಬೆಳೆಗಾರ ಪೆಮ್ಮಂಡ ಗಿಣಿ ದೇವಯ್ಯ ಮಾತನಾಡಿ, ಕಳೆದ ವರ್ಷ ಆಗಸ್ಟ್, ಸೆಪ್ಟೆಂಬರ್

(ಮೊದಲ ಪುಟದಿಂದ) ತಿಂಗಳಿನಲ್ಲಿ ಮಳೆ ಜಾಸ್ತಿ ಸುರಿದ ಕಾರಣ ಕಾಫಿ ಗಿಡಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿತ್ತು. ಆದರೆ ಈ ವರ್ಷ ಆರಂಭದಲ್ಲೆ ಕೊಳೆ ರೋಗ ಕಾಣಿಸಿಕೊಂಡಿರುವುದರಿAದ ಬೆಳೆಗಾರರು ನಷ್ಟ ಅನುಭವಿಸುವಂತಾಗಿದ್ದು, ಕೂಡಲೇ ಕಾಫಿ ಮಂಡಳಿ ಹಾಗೂ ಸರಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಔಷಧೋಪಚಾರ : ಗೋಣಿಕೊಪ್ಪಲಿನ ಕಾಫಿ ಮಂಡಳಿಯ ಕಿರಿಯ ಸಂಪರ್ಕಾಧಿಕಾರಿ ಡಿ.ಎಸ್. ಮುಖಾರಿಬ್ ಅವರು ಪ್ರತಿಕ್ರಿಯಿಸಿ ಈ ವರ್ಷ ಮಳೆ ಪ್ರಮಾಣ ಕುಂಠಿತವಾಗಿದ್ದು, ಒಂದೇ ಸಮನೆ ಮಳೆಯಾಗದೇ ಆಗಾಗ್ಗೆ ಬಿಸಿಲು ಮತ್ತು ಮಳೆ ಬೀಳುತ್ತಿರುವುದರಿಂದ, ಬ್ಯಾಕ್ಟೀರಿಯಾ ಕಾರಣದಿಂದಾಗಿ ಕಾಫಿ ಗಿಡಗಳಲ್ಲಿ ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ. ಇದರ ನಿವಾರಣೆಗೆ ಮಳೆ ಬಿಡುವು ನೀಡಿದ ಸಂದರ್ಭ ೨೦೦ ರಿಂದ ೨೫೦ ಎಂ.ಎಲ್. ಒಪೆರಾ ಔಷಧಿಯನ್ನು ಒಂದು ಬ್ಯಾರಲ್‌ಗೆ ಹಾಕಿ ಅದರ ಜತೆಗೆ ಅಂಟು ದ್ರಾವಣವನ್ನು ಬೆರೆಸಿ ಕಾಫಿ ಗಿಡಗಳಿಗೆ ಸಿಂಪಡಿಸಬೇಕು. ೨೦೦ ರಿಂದ ೨೫೦ ಎಂ.ಎಲ್. ಟಿಬ್ಯು ಕೊನೊಜಾಲ್ ಔಷಧಿಯನ್ನು ಒಂದು ಬ್ಯಾರಲ್‌ಗೆ ಬೆರೆÀಸಿ ಕಾಫಿ ಗಿಡಗಳಿಗೆ ಸಿಂಪಡಿ ಸಬೇಕು ಎಂದು ಸಲಹೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅರ್ವತೊಕ್ಲು ಕಾಫಿ ಬೋರ್ಡ್ ಅನ್ನು ಸಂಪರ್ಕಿಸುವAತೆ ತಿಳಿಸಿದ್ದಾರೆ. -ಚನ್ನನಾಯಕ