ಮಡಿಕೇರಿ, ಜು. ೨೦: ಜಿಲ್ಲೆಯವರಾದ ಬೆಂಗಳೂರಿನಲ್ಲಿ ನೆಲೆಸಿದ್ದ ನಿವೃತ್ತ ಜಸ್ಟೀಸ್ ಪಾಲೆಕಂಡ ಪಿ. ಬೋಪಣ್ಣ ಅವರು ತಾ. ೨೦ ರಂದು ಬೆಂಗಳೂರಿನಲ್ಲಿ ನಿಧನರಾದರು. ೯೬ ವರ್ಷ ಪ್ರಾಯದವರಾಗಿದ್ದ ಇವರ ಅಂತ್ಯಕ್ರಿಯೆ ತಾ. ೨೧ ರಂದು (ಇಂದು) ಬೆಂಗಳೂರಿನಲ್ಲಿ ನಡೆಯಲಿದೆ.
ಕದನೂರು ಪಾಂಡವಪೊರೆ ನಿವಾಸಿಯಾಗಿದ್ದ ಬೋಪಣ್ಣ ಅವರು ೧೯೫೨ರಲ್ಲಿ ಮೆಡ್ರಾಸ್ ಹೈಕೋರ್ಟ್ನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿ ಬಳಿಕ ೧೯೭೭ರಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ನ್ಯಾಯಾಧೀಶರಾಗಿದ್ದರು. ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.