ಮಡಿಕೇರಿ, ಜು. ೧೯: ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಅರ್ವ ತ್ತೋಕ್ಲು ಗ್ರಾಮದಲ್ಲಿ ಬೇಕೋಟ್ ಮಕ್ಕ ಕ್ಲಬ್ ವತಿಯಿಂದ ತಾ.೨೩ ರಂದು ತೃತೀಯ ವರ್ಷದ ಹಿಂದೂ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಕ್ಲಬ್ ಸಲಹೆಗಾರರಾದ ಕಡ್ಲೇರ ಕೀರ್ತನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಅರ್ವತ್ತೊಕ್ಲು ಗ್ರಾಮದ ತಳೂರು ಎಂ.ಚAಗಪ್ಪ ಮತ್ತು ತಳೂರು ಎಂ.ಕುಶಾಲಪ್ಪ ಅವರ ಗದ್ದೆ ಯಲ್ಲಿ ವೈವಿಧ್ಯಮಯವಾದ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟಕ್ಕೆ ಬೆಳಿಗ್ಗೆ ೮ ಗಂಟೆಗೆ ಸಂಸದ ಪ್ರತಾಪ್ ಸಿಂಹ ಮತ್ತು ಸ್ಥಳ ದಾನಿಗಳಾದ ತಳೂರು ಎಂ.ಚAಗಪ್ಪ, ತಳೂರು ಎಂ.ಕುಶಾಲಪ್ಪ ಮತ್ತು ತಳೂರು ಜಿ. ದೇವರಾಜ್ ಅವರು ಚಾಲನೆ ನೀಡಲಿದ್ದು, ಅರ್ವತೋ ಕ್ಲುವಿನ ಕೃಷಿಕರಾದ ಪಟ್ಟಂದಿರ ಪೂವಯ್ಯ, ಕೋಳುಮಾಡನ ಉತ್ತಪ್ಪ, ಮಾಜಿ ಸೈನಿಕ ತಳೂರು ಕೇಶವ, ನಿವೃತ್ತ ವಾಯುಸೇನೆ ಉದ್ಯೋಗಿ ಜಬ್ಬಂಡ ಕುಟ್ಟಪ್ಪ ಮತ್ತಿತರ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದರು.
ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ತಲಾ ೧೬ ತಂಡಗಳಿಗೆ ಸೀಮಿತವಾಗಿ ಪುರುಷರ ಕ್ರಿಕೆಟ್, ಪುರುಷರ ಮತ್ತು ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಸಕ್ತ ತಂಡಗಳು ತಾ.೨೧ ರ ಸಂಜೆ ೫ ಗಂಟೆಯ ಒಳಗಾಗಿ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಕೆಸರು ಗದ್ದೆ ಓಟದ ಸ್ಪರ್ಧೆ ಯನ್ನು ಬಾಲಕ, ಬಾಲಕಿಯರನ್ನು ಒಳಗೊಂಡAತೆ, ಸಾರ್ವಜನಿಕ ಪುರುಷರು, ಮಹಿಳೆಯರಿಗಾಗಿ ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಈ ಸ್ಪರ್ಧೆಗಳಿಗೆ ಸ್ಥಳದಲ್ಲೆ ನೋಂದಣಿ ಮಾಡಿಕೊಳ್ಳಲಾಗುವುದು.
ಕ್ರೀಡಾಕೂಟದಲ್ಲಿ ತುಳು ನಾಡು ಸಂಸ್ಕೃತಿಯ ಭಾಗವಾಗಿರುವ ಗೂಟ ಓಟ, ದಂಪತಿಗಳಿಗೆ ಕೆಸರು ಗದ್ದೆಯಲ್ಲಿ ಅಡಿಕೆ ಹಾಳೆಯಲ್ಲಿ ಎಳೆಯುವ ವಿಶಿಷ್ಟ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ. ಎಲ್ಲಾ ಸ್ಪರ್ಧೆಗಳಿಗೂ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ನೀಡಲಾಗುತ್ತದೆ.
ಕ್ರೀಡಾ ಕೂಟದಲ್ಲಿ ತಂಡಗಳ ಹೆಸರು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಜೀತು ತಳೂರು ಮೊ.೭೩೪೯೫೨೭೩೩೭, ಮೋಹನ್ ಕುಶಾಲಪ್ಪ ತಳೂರು ಮೊ.೮೧೯೭೦೮೨೮೧೯ ಇವರನ್ನು ಸಂಪರ್ಕಿಸಬಹುದು.
ಸಮಾರೋಪ ಸಮಾರಂಭ ಅಂದು ಸಂಜೆ ೪ ಗಂಟೆಗೆ ಕ್ಲಬ್ ಅಧ್ಯಕ್ಷರಾದ ತಳೂರು ಎಸ್.ವಿವೇಕ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥÀರ್ ಗೌಡ, ಎಂಎಲ್ಸಿ ಸುಜಾ ಕುಶಾಲಪ್ಪ, ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿಯಿತ್ತರು.
ಕೆಸರು ಗದ್ದೆ ಕ್ರೀಡಾ ಕೂಟದ ನಿರೂಪಕರಾಗಿ ರೇಡಿಯೋ ಜಾಕಿ ಆರ್ ಜೆ ತ್ರಿಶೂಲ್ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕ್ಲಬ್ನ ಅಧ್ಯಕ್ಷರಾದ ತಳೂರು ಎಸ್.ವಿವೇಕ್, ಉಪಾಧ್ಯಕ್ಷರಾದ ತಳೂರು ಚಂದ್ರಶೇಖರ್, ಕಾರ್ಯದರ್ಶಿ ತಳೂರು ಗಿರಿ ಅಪ್ಪಯ್ಯ, ಜಂಟಿ ಕಾರ್ಯದರ್ಶಿ ಮನೋಜ್ ಅಚ್ಚಯ್ಯ, ನಿರ್ದೇಶಕರಾದ ಅನಿಲ್ ಪಾಂಡುರAಗ ಉಪಸ್ಥಿತರಿದ್ದರು.