ಕೂಡಿಗೆ, ಜು. ೧೯ : ಇಲ್ಲಿಗೆ ಸಮೀಪದ ನಂಜ ರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳಿಗ ಗ್ರಾಮದಲ್ಲಿ ಬುಧವಾರ ಸಂಜೆ ಭಾರೀ ಗಾಳಿಗೆ ಮರದ ಕೊಂಬೆ ಮನೆ ಮೇಲೆ ಬಿದ್ದ ಪರಿಣಾಮವಾಗಿ ಅಂಜಾಲಿನ ಡಿಸೋಜ ಎಂಬವರಿಗೆ ಸೇರಿದ ಮನೆಯ ಮೇಲ್ಚಾವಣಿ, ನೀರಿನ ಟ್ಯಾಂಕ್‌ಗೆ ಹಾನಿ ಉಂಟಾಗಿದೆ. ನಂಜರಾಯ ಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಭೇಟಿ ನೀಡಿ ಪರಿಶೀಲನೆ ಮಾಡಿದರು.