ಸೋಮವಾರಪೇಟೆ, ಜು. ೧೮: ಬೆಂಗಳೂರಿನ ವೈದಿಕ ಚಾರಿಟೇಬಲ್ ಟ್ರಸ್ಟ್ (ಮಹಾಲಕ್ಷಿö್ಮà ಗುರುಕುಲ)ದ ವತಿಯಿಂದ ಬೆಂಗಳೂರಿನಲ್ಲಿ ನಡೆದ ೬ನೇ ರಾಷ್ಟಿçÃಯ ಮಟ್ಟದ ಅರ್ಚಕ ಪುರೋಹಿತರ ಕಾರ್ಯಾಗಾರ ಮತ್ತು ಆಗಮಿಕರ ರಾಷ್ಟಿçÃಯ ಸಾಧಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಟ್ಟಣದ ಗಣಪತಿ ದೇವಾಲಯದ ಅರ್ಚಕ ಚಂದ್ರಶೇಖರ್ ಭಟ್ ಅವರಿಗೆ ರಾಷ್ಟಿçÃಯ ದೈವಿಕ ಶಿರೋಮಣಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಹಿನ್ನೆಲೆ ಇಲ್ಲಿನ ಶ್ರೀ ಗಣಪತಿ ದೇವಾಲಯದಲ್ಲಿ ದೇವಾಲಯ ಆಡಳಿತ ಮಂಡಳಿ ವತಿಯಿಂದ ಚಂದ್ರಶೇಖರ್ ಭಟ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ನಾಡಿನಾದ್ಯಂತ ಉತ್ತಮವಾಗಿ ಮಳೆಯಾಗುವಂತೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಈಶ್ವರಚಂದ್ರ ಸಾಗರ್ ವಹಿಸಿದ್ದರು. ಸಮಿತಿ ಉಪಾಧ್ಯಕ್ಷ ಹೃಷಿಕೇಷ್, ಕಾರ್ಯದರ್ಶಿ ಕೆ.ಎನ್. ಶಿವಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಮೃತ್ಯುಂಜಯ, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಸಿ.ಸಿ. ನಂದ, ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಮೋಹನ್, ಉದ್ಯಮಿಗಳಾದ ಕಮಲ್, ನಂದಕುಮಾರ್, ಕುಮಾರ್, ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.