ಕೂಡಿಗೆ, ಜು. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇಗುಲದ ಕ್ಷೇತ್ರದಲ್ಲಿ ಪಿತೃತರ್ಪಣ ಕಾರ್ಯಕ್ರಮವು ದೇವಾಲಯದ ಸಭಾಂಗಣದಲ್ಲಿ ನಡೆಯಿತು.
ಪಿತೃತರ್ಪಣ ಕಾರ್ಯವನ್ನು ಕೇರಳದ ಸಚಿತ್ ಪಿಣಿಕರ್ ತಂಡದವರು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಟಿ. ಎಂ. ಚಾಮಿ, ಕಾರ್ಯದರ್ಶಿ ಸುರೇಶ್, ಸಮಿತಿಯ ನಿರ್ದೇಶಕರು, ಕುಶಾಲನಗರ, ಹುದುಗೂರು, ಮದಲಾಪುರ, ಹಾರಂಗಿ, ಕೂಡಿಗೆ ವ್ಯಾಪ್ತಿಯ ಮಂದಿ ಭಾಗವಹಿಸಿದ್ದರು.