ಶನಿವಾರಸಂತೆ, ಜು. ೧೮: ಸಮೀಪದ ಕೊಡ್ಲಿಪೇಟೆಯ ಸಂತೆ ಮಾರುಕಟ್ಟೆ ರಸ್ತೆ ಬದಿಯಲ್ಲಿದ್ದ ೨ ಬಾಗೆ ಮರಗಳನ್ನು ಕಡಿದಿದ್ದು ತೆರವುಗೊಳಿಸದ ಕಾರಣ ಭಾನುವಾರ ನಡೆದ ವಾರದ ಸಂತೆಯ ದಿನ ವ್ಯಾಪಾರಿಗಳು ಹಾಗೂ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಬೃಹತ್ ಗಾತ್ರದ ಮರಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಶಿಥಿಲಾವಸ್ಥೆಯಲ್ಲಿತ್ತು. ಗಾಳಿ-ಮಳೆಗೆ ಬಿದ್ದು ಅಪಾಯ ಸಂಭವಿಸಬಹುದು ಎಂದು ಸಾರ್ವಜನಿಕರು ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಪಂಚಾಯಿತಿ ಕೋರಿಕೆ ಮೇರೆಗೆ ಅರಣ್ಯ ಇಲಾಖೆ ಟೆಂಡರ್ ಮಾಡಿದ್ದು ಗುತ್ತಿಗೆದಾರರು ಮರಗಳನ್ನು ಕಡಿದರೂ ತೆರವುಗೊಳಿಸದೇ ಸ್ಥಳದಲ್ಲೆ ಬಿಟ್ಟಿದ್ದರಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು ಎಂದು ವ್ಯಾಪಾರಿಗಳು ಹಾಗೂ ವಾಹನ ಸವಾರರು ಅಳಲು ತೋಡಿಕೊಂಡರು.

ವಿ ಎಸ್ ಎಸ್ ಎನ್ ಬ್ಯಾಂಕ್ ನಿರ್ದೇಶಕ ಜೆ.ಕೆ. ತೇಜ್‌ಕುಮಾರ್, ಉದ್ಯಮಿ ಸುಧೀಂದ್ರ ಕುಮಾರ್, ಸುಂಕ ಸಂಗ್ರಾಹಕ ಫಾಲಾಕ್ಷ ಸಂಬAಧಪಟ್ಟವರು ಕಡಿದ ಮರಗಳನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.