ಮಡಿಕೇರಿ, ಜು. ೧೮: ಮಾಜಿ ರಾಜ್ಯಸಭಾ ಸದಸ್ಯ, ಅರ್ಥಶಾಸ್ತç ತಜ್ಞ ಡಾ.ಸುಬ್ರಮಣ್ಯನ್ ಸ್ವಾಮಿ ಅವರ ಸಂಸದರ ನಿಧಿಯಿಂದ ಕತ್ತಲೆಕಾಡಿನಲ್ಲಿ ನಿರ್ಮಾಣಗೊಂಡ ಕಾಂಕ್ರಿಟ್ ರಸ್ತೆಯ ಉದ್ಘಾಟನೆ ತಾ.೧೯ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. ಸ್ವಾಮಿಯವರ ಆಪ್ತರು ಆದ ವಿರಾಟ್ ಹಿಂದುಸ್ಥಾನ್ ಸಂಗಮ್‌ನ ಜಗದೀಶ್ ಶೆಟ್ಟಿ ಅವರು ರೂ.೧.೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ಉದ್ಘಾಟನೆಗೊಳಿಸಲಿದ್ದಾರೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಅವರು ತಿಳಿಸಿದ್ದಾರೆ.